Breaking News

ಹಿರೇಬಂಡಾಡಿ: ಮಹಿಳೆ ನಾಪತ್ತೆ ಪ್ರಕರಣ ದಂಪತಿಯ ಮನವೊಲಿಸಿದ ದಲಿತ ಸೇವಾ ಸಮಿತಿ

Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಹಿರೇಬಂಡಾಡಿ ಕರೆಂಕಿ ದೇರಣ್ಣರವರ ಪತ್ನಿ ಸವಿತಾ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲದ ದಲಿತ ಸೇವಾ ಸಮಿತಿ ಪದಾಧಿಕಾರಿಗಳು ಮನೆಗೆ ಭೇಟಿ ನೀಡಿ ದಂಪತಿಯ ಮನವೊಲಿಸಿರುವ ಘಟನೆ ವರದಿಯಾಗಿದೆ.

ಸವಿತಾರವರು ತನ್ನ ಗಂಡನ ಅಣ್ಣನ ಮಗ ವೆಂಕಟೇಶ ಎಂಬವರೊಂದಿಗೆ ತವರು ಮನೆ ಪುತ್ತೂರು ಸಮೀಪದ ಮುಕ್ವೆ ಮನೆಗೆ ಹೋಗಿದ್ದು ಫೋನ್ ಸಂಪರ್ಕಕ್ಕೆ ಸಿಗದ ಕಾರಣ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಕುರಿತು ಪತ್ರಿಕೆಯಲ್ಲಿ ವರದಿಯಾಗಿತ್ತು. ಇದನ್ನು ಓದಿದ ಸವಿತಾರವರು ಗಂಡನ ಮನೆಗೆ ಹೋಗಲು ಹಿಂಜರಿದಿದ್ದು ಸಂಸಾರ ಒಡೆದು ಹೋಗುವ ಮಟ್ಟಕ್ಕೆ ಬಂದಿತ್ತು. ನಂತರ ದೇರಣ್ಣರವರು ದಲಿತ ಸೇವಾ ಸಮಿತಿಯವರಿಗೆ ತಿಳಿಸಿದ್ದು ದ.30ರಂದು ದಲಿತ ಸೇವಾ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಅಣ್ಣಿ ಎಲ್ತಿಮಾರ್, ಸುಳ್ಯ ಮಹಿಳಾ ಘಟಕದ ಅಧ್ಯಕ್ಷೆ ಕು.ಲಕ್ಷ್ಮೀಸುಬ್ರಹ್ಮಣ್ಯ, ಮೊಗೇರ ಯುವವೇದಿಕೆ ಅಧ್ಯಕ್ಷ ರಾಜು ಹೊಸ್ಮಠ, ಮಹಿಳಾ ಸಂಘಟನೆಯ ಸ್ತ್ರೀಶಕ್ತಿ ಅಧ್ಯಕ್ಷೆ ಜಯಂತಿ ಹಿರೇಬಂಡಾಡಿ ಮತ್ತು ಚಂದ್ರಾವತಿಯವರ ತಂಡ ಮುಕ್ವೆ ಮನೆಗೆ ಹೋಗಿ ಗಂಡ ಹೆಂಡತಿಯ ಮನವೊಲಿಸಿ ಗಂಡನ ಜೊತೆ ತೆರಳುವಂತೆ ಮಾತುಕತೆ ನಡೆಸಿರುತ್ತಾರೆ.ಪ್ರಮಾದದಿಂದ ಆದ ತಪ್ಪನ್ನು ಇಬ್ಬರೂ ಮನ್ನಿಸಿ ಒಟ್ಟಾಗಿ ಜೀವನ ನಡೆಸಲು ಒಪ್ಪಿರುತ್ತಾರೆ ಎಂದು ಎಂದು ದಲಿತ ಸೇವಾ ಸಮಿತಿಯ ಎಚ್.ರಾಜು ಹೊಸ್ಮಠ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.