ಜ.5-7: ಗೋಳಿತ್ತೊಟ್ಟು ಪೆರಣದಲ್ಲಿ ನೂತನ ಚಾವಡಿ ಪ್ರವೇಶೋತ್ಸವ, ದೈವಗಳ ಪುನರ್ ಪ್ರತಿಷ್ಠಾ ಕಲಶೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

golithottuನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಪೆರಣ ಗುತ್ತಿನ ಧರ್ಮ ದೈವ ರುದ್ರ ಚಾಮುಂಡಿ ಪರಿವಾರ ಸಹಿತ ಹಾಗೂ ಗ್ರಾಮ ದೈವ ಶಿರಾಡಿ ಮತ್ತು ಪರಿವಾರ ದೈವಗಳ ನೂತನ ಚಾವಡಿ ಪ್ರವೇಶೋತ್ಸವ ಹಾಗೂ ದೈವಗಳ ಪುನರ್ ಪ್ರತಿಷ್ಠಾ ಕಲಶೋತ್ಸವ ಜ.5ರಿಂದ 7ರ ತನಕ ನಡೆಯಲಿದೆ ಎಂದು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಅಣ್ಣಿ ಗೌಡ ಪೆರಣ, ಶಿರಾಡಿ ಗ್ರಾಮ ದೈವದ ಮೊಕ್ತೇಸರ ವಿಶ್ವನಾಥ ಗೌಡ ಪೆರಣ ತಿಳಿಸಿದ್ದಾರೆ.

ಜ.5ರಂದು ಸಂಜೆ ನೂತನ ದೈವ ಚಾವಡಿಯ ತೋರಣ ಮುಹೂರ್ತ ನಡೆಯಲಿದೆ. ಬಳಿಕ ದೇವತಾ ಪ್ರಾರ್ಥನೆ, ಆಚಾರ್ಯ ಋರ್ತ್ವಿದರಣೆ, ಸ್ವಸ್ತಿ ಪಂಚಗವ್ಯ, ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತುಹೋಮ ಬಲಿ, ದಿಕ್ಪಾಲಕ ಬಲಿ, ದೈವಗಳ ಅಧಿವಾಸ, ಅನ್ನಸಂತರ್ಪಣೆ ನಡೆಯಲಿದೆ. ಜ.6ರಂದು ಬೆಳಿಗ್ಗೆ ತ್ರಿಕಾಲ ಪೂಜೆ, ಬಳಿಕ 7.45ರ ಮಕರ ಲಗ್ನದ ಸುಮುಹೂರ್ತದಲ್ಲಿ ಶ್ರೀ ದೈವಗಳ ಪ್ರತಿಷ್ಠೆ, ನಂತರ ಕಲಶಾರಾಧನೆ ನಡೆಯಲಿದೆ. ಬಳಿಕ ಕಲಶಾಭಿಷೇಕ ಹಾಗೂ ತಂಬಿಲ, ಮಧ್ಯಾಹ್ನದ ಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ತ್ರಿಕಾಲ ಪೂಜೆ, ದುರ್ಗಾ ಹೋಮ, ಸುಹಾಸಿನಿ ಆರಾಧನೆ ನಡೆಯಲಿದೆ.

ಧಾರ್ಮಿಕ ಸಭೆ: ಜ.6ರಂದು ರಾತ್ರಿ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ರೆಖ್ಯ ಗುಡ್ರಾದಿ ಶ್ರೀ ಗುಡ್ರಮಲ್ಲೇಶ್ವರ ದೇವಸ್ಥಾನದ ಅಧ್ಯಕ್ಷ ಮಂಜುನಾಥ ಗೌಡ ಕೈಕುರೆ ಅಧ್ಯಕ್ಷತೆ ವಹಿಸಲಿದ್ದು ರಾಜ್ಯ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸ ತುಳುವ ಬೊಳ್ಳಿ ದಯಾನಂದ ಜಿ.ಕತ್ತಲ್‌ಸಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ನಿತೇಶ್ ಬಳ್ಳಾಲ್, ಪಟ್ರಮೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ತ್ರಿವಿಕ್ರಮ ಶಬರಾಯ, ಗೋಳಿತ್ತೊಟ್ಟು ಆಲಂತಾಯ ಶ್ರೀರಾಮ ನಿವಾಸದ ರಮೇಶ್ ಬಿ.ಜಿ. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ‍್ಯಕ್ರಮದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಶ್ರೀ ದೈವಗಳ ಭಂಡಾರ ಇಳಿಯುವುದು, ನಂತರ ಧರ್ಮದೈವ ರುದ್ರಚಾಮುಂಡಿ ಗ್ರಾಮ ದೈವ ಶಿರಾಡಿ ಮತ್ತು ಪರಿವಾರ ದೈವಗಳ ನೇಮ ನಡೆಯಲಿದೆ. ಜ.೭ರಂದು ಬೆಳಿಗ್ಗೆ ದೈವಗಳ ನೇಮ, ಮಧ್ಯಾಹ್ನ ಅನ್ನಸಂತರ್ಪಣೆಯೊಂದಿಗೆ ಕಾರ‍್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.