HomePage_Banner
HomePage_Banner

ಕೊಯಿಲ ಗ್ರಾ.ಪಂ.ಮಹಿಳಾ ಗ್ರಾಮಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

koilaಪುತ್ತೂರು: ಕೊಯಿಲ ಗ್ರಾ.ಪಂ.ನ 2016-17 ನೇ ಸಾಲಿಮ ಮಹಿಳಾ ಗ್ರಾಮಸಭೆ ಜ.4 ರಂದು ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.

ಗ್ರಾ.ಪಂ.ಅಧ್ಯಕ್ಷೆ ಮೀನಾಕ್ಷಿ ಬೆಳಿಯಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಅಂಗನಾಡಿ ವಲಯ ಮೇಲ್ವಿಚಾರಕಿ ಸುಜಾತ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಪಿಡಿಒ ನಮಿತಾ ಎ.ಕೆ.,ರವರು, ಮಹಿಳೆಯರ ಪೌಷ್ಠಿಕತೆ, ಆರೋಗ್ಯ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸಬಲೀಕರಣಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ಕೈಗೊಳ್ಳುವ ಸಂಬಂಧ ಮಹಿಳಾ ಗ್ರಾಮಸಭೆ ಕರೆಯಲಾಗಿದೆ. ಮಹಿಳೆಯರು ಸಭೆಯ ಸದುಪಯೋಗಪಡಿಸಿಕೊಳ್ಳಬಹುದು ಎಂದರು. ತಾ.ಪಂ.ಸದಸ್ಯೆ ಜಯಂತಿ ಆರ್.ಗೌಡ, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಜನಿ, ಪುತ್ತೂರು ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಮೀನಾಕ್ಷಿ, ಸಾಂತ್ವನ ಕೇಂದ್ರದ ಕಾರ‍್ಯಕರ್ತೆ ಕು.ರೇಖಾ, ಮಂಗಳೂರಿನ ಹೆಚ್‌ಕೆಎನ್‌ಎಸ್‌ನ ಫೀಲ್ಡ್ ಸುಪರ್‌ವೈಸರ್ ಮೀನಾಕ್ಷಿ ಎಂ.,ರವರು ಮಾಹಿತಿ ನೀಡಿದರು.

ಗ್ರಾ.ಪಂ.ಉಪಾಧ್ಯಕ್ಷೆ ವಿಜಯ ಎಸ್, ಸದಸ್ಯರುಗಳಾದ ಸುಜಾತ ಶೆಟ್ಟಿ, ಬಿಪಾತುಮ, ನಝೀರ್ ಪೂರಿಂಗ, ಸುಧೀಶ್ ಪಟ್ಟೆ, ಪ್ರೇಮಾ, ಹೇಮಾಮೋಹನದಾಸ್ ಶೆಟ್ಟಿ, ವಿನೋದರ ಮಾಳ, ಹರಿಣಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮಮ್ಮ ಕಾರ‍್ಯಕ್ರಮ ನಿರೂಪಿಸಿದರು. ಮಮತಾ ಆನೆಗುಂಡಿ ವಂದಿಸಿದರು. ಅಂಗನವಾಡಿ ಕಾರ್ಯಕರ್ತೆ ಜಯಂತಿ ಪ್ರಾರ್ಥಿಸಿದರು. ಗ್ರಾ.ಪಂ.ಸಿಬ್ಬಂದಿಗಳಾದ ರುಕ್ಮಯ, ರಾಜೇಂದ್ರ, ಮೀನಾಕ್ಷಿ, ವರದರಾಜ್‌ರವರು ಸಹಕರಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.