ಅಯೋಧ್ಯಾನಗರ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ayodhyanagaraಉಪ್ಪಿನಂಗಡಿ: ಬಜತ್ತೂರು ಗ್ರಾಮದ ಅಯೋಧ್ಯಾನಗರ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ಚಿಣ್ಣರ ಪ್ರತಿಭಾ ಪುರಸ್ಕಾರ ಕಾರ‍್ಯಕ್ರಮ ದ.28ರಂದು ನಡೆಯಿತು.

ಜೀವವಿಮಾ ನಿಗಮ ಮತ್ತು ಗ್ರಾಮಸ್ಥರ ಸಹಕಾರದಿಂದ ನಿರ್ಮಿಸಿದ ಪ್ರವೇಶ ದ್ವಾರ, ಬಾಲಕೃಷ್ಣ ನಾಯಕ್ ಮತ್ತು ಊರವರ ಸಹಕಾರದಿಂದ ನಿರ್ಮಿಸಿದ ಧ್ವಜಕಟ್ಟೆಯನ್ನು ಆರಂಭದಲ್ಲಿ ಉದ್ಘಾಟಿಸಲಾಯಿತು. ಬಳಿಕ ನಡೆದ ಸಭಾ ಕಾರ‍್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ಪ್ರಾಯೋಜಿಸಿದ ದಾನಿಗಳ ಗುರುತಿಸುವಿಕೆ ಮತ್ತು ಕೋಡಿಂಬಾಡಿ ಸರಕಾರಿ ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡ ಮುಖ್ಯಶಿಕ್ಷಕಿ ಕಮಲಾ ಕೆ.ಎಸ್. ಇವರನ್ನು ಶಾಲಾ ಶೈಕ್ಷಣಿಕ ಸಮಿತಿ ಹಾಗೂ ಪೋಷಕರ ವತಿಯಿಂದ ಸನ್ಮಾನಿಸಲಾಯಿತು. ಕಮಲಾ ಕೆ.ಎಸ್. ರವರು ಕೃತಜ್ಞತೆ ಸಲ್ಲಿಸಿದರು. ಗೋಪಾಲಕೃಷ್ಣ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಸಂತೋಷ್ ಕುಮಾರ್ ಶುಭ ಹಾರೈಸಿದರು. ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಜಗದೀಶ್ ರಾವ್ ಮಣಿಕ್ಕಳರವರು ಮಾತನಾಡಿ, ಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಾಗಿ ಅಕ್ವಾ ಗಾರ್ಡನ್ನು ತಮ್ಮ ಸಂಸ್ಥೆ ವತಿಯಿಂದ ನೀಡಿದರು. ಬಜತ್ತೂರು ಕ್ಲಸ್ಟರ್‌ನ ಸಿ.ಆರ್.ಪಿ. ಗಣೇಶ್ ನಡುವಾಲ್, ಜೀವ ವಿಮಾ ನಿಗಮ ಪುತ್ತೂರು ಶಾಖೆಯ ಉಪಪ್ರಬಂಧಕ ಸೋಮಸುಂದರ್‌ರವರು ಶುಭ ಹಾರೈಸಿದರು. ಗ್ರಾ.ಪಂ.ಸದಸ್ಯೆ ಕಮಲಾಕ್ಷಿ, ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ಕೆ.ಆರ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಗೀತಾ ಕೆ.ವಿ. ಸ್ವಾಗತಿಸಿ ವರದಿ ವಾಚಿಸಿದರು. ನಿವೃತ್ತ ಮುಖ್ಯಶಿಕ್ಷಕಿ ಯಶೋಧಾ ಕೆ.ಎಸ್.ರವರು ಅಭಿನಂದನಾ ಪತ್ರ ವಾಚಿಸಿದರು. ಹೇಮಲತಾ ವಂದಿಸಿದರು. ಲತಾಕುಮಾರಿ ಮನರಂಜನಾ ಕಾರ‍್ಯಕ್ರಮ ನಡೆಸಿಕೊಟ್ಟರು. ಅಂಗನವಾಡಿ ಕಾರ್ಯಕರ್ತೆ ಜಯಶ್ರೀ ಸಹಕರಿಸಿದರು. ಬಹುಮಾನ, ಸ್ಮರಣಿಕೆ ಹಾಗೂ ಸಿಹಿ ಊಟದ ವ್ಯವಸ್ಥೆಗೆ ಎಸ್‌ಡಿಎಂಸಿ, ಪೋಷಕರು, ಶಿಕ್ಷಕ ಉಮೇಶ್ ಗೌಡ ಕಾರ‍್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.