HomePage_Banner
HomePage_Banner
HomePage_Banner
HomePage_Banner

ಕೊಳ್ತಿಗೆ ಗ್ರಾ.ಪಂ ಸಾಮಾನ್ಯ ಸಭೆ ಸಿಬ್ಬಂದಿ ನೇಮಕಾತಿಯಲ್ಲಿ ವಿಳಂಬ ಕೂಡಲೇ ನೇಮಕಗೊಳಿಸುವಂತೆ ಸದಸ್ಯರ ಒತ್ತಾಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೊಳ್ತಿಗೆ ಗ್ರಾಮ ಪಂಚಾಯತುನಲ್ಲಿ ಖಾಲಿ ಇರುವ ಎರಡು ಹುದ್ದೆಗಳಿಗೆ ಸಿಬ್ಬಂದಿ ನೇಮಕಗೊಳಿಸುವಂತೆ ಗ್ರಾ.ಪಂ ಪ್ರಕಟಣೆ ಹೊರಡಿಸಿ, ಅಭ್ಯರ್ಥಿಗಳ ಸಂದರ್ಶನ, ಪರೀಕ್ಷೆ ಎಲ್ಲಾ ಕಳೆದು ತಿಂಗಳು ಮೂರು ಆಗುತ್ತಾ ಬಂದರೂ ಇನ್ನೂ ಕೂಡ ಸಿಬ್ಬಂದಿ ನೇಮಕಗೊಳಿಸದೇ ಇರುವುದರ ಬಗ್ಗೆ ಸದಸ್ಯರು ಪ್ರಶ್ನಿಸಿದ ಘಟನೆ ಕೊಳ್ತಿಗೆ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಭಿವೃದ್ಧಿ ಅಧಿಕಾರಿ ಇಬ್ಬರು ಅಭ್ಯರ್ಥಿಗಳನ್ನು ಈ ಕೂಡಲೇ ನೇಮಕ ಮಾಡಿಕೊಳ್ಳುವುದು ಎಂದು ತಿಳಿಸಿದ್ದು ಈ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಭೆಯು ಗ್ರಾ.ಪಂ ಅಧ್ಯಕ್ಷೆ ಗಿರಿಜಾರವರ ಅಧ್ಯಕ್ಷತೆಯಲ್ಲಿ ಜ.10 ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ವಿಷಯ ಪ್ರಸ್ತಾಪಿಸಿದ ಭರತ್ ಕುಮಾರ್ ಮತ್ತು ಪವನ್ ಡಿ.ಜೆಯವರು, ಗ್ರಾ.ಪಂಗೆ ಸಿಬ್ಬಂದಿ ನೇಮಕದ ವಿಚಾರ ಏನಾಯಿತು ಎಂದು ಪ್ರಶ್ನಿಸಿದರು. ಇದಕ್ಕೆ ಅಭಿವೃದ್ಧಿ ಅಧಿಕಾರಿ ಸುನೀಲ್‌ರವರು ನಾವು ಇಬ್ಬರು ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸದಸ್ಯೆ ಯಶೋಧಾ ಕೋಡಂಬುರವರು, ಆ ಇಬ್ಬರು ಯಾರು? ಸಂದರ್ಶನ ಕಳೆದು ತಿಂಗಳು ಮೂರು ಕಳೆದರೂ ಇನ್ನು ಕೂಡ ನೇಮಕಾತಿ ನಡೆಯದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು. ನಮಗೆ ಸಿಬ್ಬಂದಿಗಳು ಅಗತ್ಯ ಬೇಕಾಗಿದೆ. ನೇಮಕಾತಿ ಕೂಡಲೇ ಆಗಬೇಕು. ಫ್ರೀ ಸರ್ವಿಸ್ ಮಾಡುವುದು ಬೇಡ ಎಂದು ಪವನ್ ಮತ್ತು ಭರತ್ ತಿಳಿಸಿದರು.

ನೇರ ನೇಮಕಾತಿ: ಅಭಿವೃದ್ಧಿ ಅಧಿಕಾರಿ ಸುನೀಲ್‌ರವರು ಉತ್ತರಿಸಿ, ಇಬ್ಬರನ್ನು ನೇಮಕಾತಿ ಮಾಡಿಕೊಳ್ಳುವ. ಕೊಳ್ತಿಗೆ ಗ್ರಾಮದ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಮೂಲಕ ಅನುಕಂಪ ಆಧಾರದಲ್ಲಿ ಸುಚಿತ್ರಾರವರನ್ನು ಮತ್ತು ನೇರ ನೇಮಕಾತಿಯಾಗಿ ಸುಮತಿಯವರನ್ನು ನೇಮಕಾತಿ ಮಾಡಿಕೊಳ್ಳುವುದು ಮತ್ತು ಈ ಬಗ್ಗೆ ಜಿಲ್ಲಾ ಪಂಚಾಯತುಗೆ ಬರೆದುಕೊಳ್ಳುವುದು ಎಂದು ತಿಳಿಸಿದರು. ಅವರು ಮುಂದಿನ ವಾರದಿಂದ ಕರ್ತವ್ಯಕ್ಕೆ ಹಾಜರಾಗುವಂತೆಯೂ ತಿಳಿಸಿದರು. ಈ ಬಗ್ಗೆ ನಿರ್ಣಯ ಮಾಡಲಾಯಿತು.

ಅಕ್ರಮ ಕಟ್ಟಡ ನಿರ್ಮಾಣ: ಪೆರ್ಲಂಪಾಡಿ ಮೇಲಿನ ಪೇಟೆಯಲ್ಲಿರುವ ಬಸ್ಸು ತಂಗುದಾಣವೊಂದರ ಪಕ್ಕಾ ಅನಧಿಕೃತ ಕಟ್ಟಡವೊಂದು ನಿರ್ಮಾಣವಾಗುತ್ತಿದ್ದು, ಈ ಬಗ್ಗೆ ಗಮನಹರಿಸುವಂತೆ ಸಾರ್ವಜನಿಕರು ಪಂಚಾಯತ್‌ಗೆ ಅರ್ಜಿ ನೀಡಿದ್ದರು. ಈ ಬಗ್ಗೆ ಪಿಡಬ್ಲ್ಯೂಡಿಗೆ ಬರೆದುಕೊಳ್ಳಲಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ತಿಳಿಸಿದರು. ಧನಂಜಯ ಪೂಜಾರಿ ಎಂಬವರು ಎಕ್ಕಡ್ಕದಲ್ಲಿ ಖಾಸಗಿ ಕಟ್ಟಡವೊಂದರಲ್ಲಿ ಶೇಂದಿ ವ್ಯಾಪಾರ ಮಾಡುವರೇ ಪರವಾನಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ಚರ್ಚೆ ನಡೆದು, ನ್ಯಾಯ ಸಮಿತಿಯಿಂದ ಪರಿಶೀಲನೆ ಮಾಡುವುದು ಮತ್ತು ಸ್ಥಳೀಯರ ವಿರೋಧ ಇಲ್ಲದೇ ಇದ್ದಲ್ಲಿ ಪರವಾನಗೆ ನೀಡುವುದು ಎಂದು ನಿರ್ಣಯಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಮಲ್ಲಿಕಾ, ಸದಸ್ಯರುಗಳಾದ ಚಂದ್ರಾವತಿ, ಲಲಿತಾ, ವಾರಿಜ, ವೀಣಾ, ಷಣ್ಮುಖಲಿಂಗ, ದೇವಾನಂದ ರೈ, ಶಿವರಾಮ ಭಟ್, ತೀರ್ಥಾನಂದ ದುಗ್ಗಳ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಸುನೀಲ್‌ರವರು ಸುತ್ತೋಲೆ, ಅರ್ಜಿಗಳನ್ನು ಓದಿದರು. ಕಾರ‍್ಯದರ್ಶಿ ಶ್ರೀಮತಿ ಲಕ್ಷ್ಮೀ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಬಿಲ್‌ಕಲೆಕ್ಟರ್ ಜಯ ಎಸ್, ಗುಮಾಸ್ತೆ ಶ್ರೀಮತಿ ಶಶಿಕಲಾ ಕೆ, ನೀರು ನಿರ್ವಾಹಕ ನಾಗೇಶ ಬಿ.ಸಹಕರಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.