HomePage_Banner
HomePage_Banner

ಅಂಕತ್ತಡ್ಕ: ನವೋದಯ ಸಭಾಂಗಣ, ಕೊಳ್ತಿಗೆ ಸಹಕಾರ ಸಂಘದ ನೂತನ ಕಚೇರಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ankathadka1 ankathadka2 ankathadka3

ಸವಣೂರು: ಸಿಬಂದಿಗಳ ಉತ್ತಮ ಸೇವೆಯಿಂದ ಯಾವುದೇ ಸಂಸ್ಥೆಯು ಬೆಳವಣಿಗೆಯಾಗಲು ಸಾಧ್ಯ.ಗ್ರಾಹಕರ ಶ್ರೇಯೋಭಿವೃದ್ದಿಯಿಂದ ಸಂಸ್ಥೆಯೂ ಅಭಿವೃದ್ಧಿಯಾಗಲು ಸಾಧ್ಯ ಎಂದು ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ ಹೇಳಿದರು.

ಅವರು ಪಾಲ್ತಾಡಿಯ ಅಂಕತ್ತಡ್ಕದಲ್ಲಿ ಕೊಳ್ತಿಗೆ ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘದ ನೂತನ ಕಛೇರಿ ಮತ್ತು ನವೋದಯ ಸಭಾಂಗಣ ಉದ್ಘಾಟನೆ, ಪಾಲ್ತಾಡಿ ಮತ್ತು ಕೊಳ್ತಿಗೆ ಒಕ್ಕೂಟದ ನವೋದಯ ಸ್ವಸಹಾಯ ಗುಂಪುಗಳ ಸದಸ್ಯರ ಕ್ರೀಡಾಕೂಟದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೊಳ್ತಿಗೆ ಸಹಕಾರಿ ಸಂಘವು ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು,ಸೇವೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಜತೆಗೆ ನವೋದಯ ಸದಸ್ಯರ ಕ್ರೀಡಾಕೂಟವನ್ನು ನಡೆಸುವ ಮೂಲಕ ಉತ್ತಮ ಕಾರ್ಯ ಮಾಡಿದೆ.ವಯಸ್ಸಿನ ಮಿತಿಯಿಲ್ಲದೆ ತಮ್ಮ ಕ್ರೀಡಾಸಕ್ತಿ ಹಾಗೂ ಪ್ರತಿಭೆಯನ್ನು ಹೊರಗೆಡವಲು ಅವಕಾಶ ಕಲ್ಪಿಸಿದೆ ಎಂದ ಅವರು ಬ್ಯಾಂಕ್ ಮುಂದಿನ ದಿನಗಳಲ್ಲಿ ಪಾಲ್ತಾಡಿಯ ಮಂಜುನಾಥನಗರದಲ್ಲಿ ಶಾಖೆ ಆರಂಭಿಸುವಂತೆ ವಿನಂತಿಸಿದರು.

ನವೋದಯ ಸಭಾಂಗಣ ಉದ್ಘಾಟಿಸಿದ ದ.ಕ.ಜಿಲ್ಲಾ  ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ರೈತರ ಬೆಳವಣಿಗೆಗೆ ಕಷಿ ಪತ್ತಿನ ಸಹಕಾರಿ ಸಂಘವು ಪ್ರಥಮ ಆದ್ಯತೆ ನೀಡುತ್ತದೆ.ಸಹಕಾರಿ ಸಂಘಗಳು ಯಾವತ್ತೂ ಅವನತಿಯಾಗಲು ಸಾಧ್ಯವಿಲ್ಲ.ರೈತರ ಶಕ್ತಿಯೇ ಇವುಗಳ ಜೀವಾಳ.ಸ್ವಸಹಾಯ ಸಂಘಗಳಿಂದ ಗ್ರಾಮೀಣ ಭಾಗದ ಜನರಲ್ಲಿ ಅಮೂಲಾಗ್ರ ಬದಲಾವಣೆಯಾಗಲು ಸಾಧ್ಯವಾಗಿದೆ ಎಂದರು. ರಾಜ್ಯ ಅಪೆಕ್ಸ್ ಬ್ಯಾಂಕಿನ ಹಿರಿಯ ಪ್ರಬಂಧಕ ವಸಂತ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ರೈತರ ಜೀವನದಲ್ಲಿ ಉತ್ತಮ ಒಡನಾಡವಿರಿಸಿಕೊಂಡಿದ್ದು, ರೈತರ, ಗ್ರಾಹಕರ ಸಹಕಾರದಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳು ಈಗ ರಾಷ್ಟ್ರೀಯ ಬ್ಯಾಂಕ್‌ಗಿಂತ ಕಡಿಮೆಯಿಲ್ಲದಂತೆ ಸೇವೆ ನೀಡುತ್ತಿದೆ.ನವೋದಯ ಸ್ವಸಹಾಯ ಸಂಘಗಳಿಂದ ಗ್ರಾಮೀಣ ಭಾಗದಲ್ಲಿ ಶಿಸ್ತುಬದ್ದ ವ್ಯವಹಾರ ಸಾಧ್ಯವಾಗಿದೆ ಎಂದರು.

ಕೊಳ್ತಿಗೆ ಪ್ರಾ.ಕ.ಸ.ಸಂ.ದ ಮಾಜಿ ಅಧ್ಯP ಕೆ.ಗಂಗಾಧರ ಗೌಡ ಕೆಮ್ಮಾರ ಮಾತನಾಡಿ, ನಮ್ಮ ಸಹಕಾರ ಸಂಘವು ಸದಸ್ಯರ ಸಹಕಾರದಿಂದ ತಾಲೂಕಿನಲ್ಲಿ  ಶೇ.೧೦೦ ಸಾಲ ವಸೂಲಾತಿ ಮಾಡಿದ ಮೊದಲ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.ಅಂದಿನಿಂದ ಈವರೆಗೂ ಈ ಇದೇ ಸ್ಥಾನವನ್ನು ಕಾಯ್ದುಕೊಂಡಿದೆ.ಇದು ಸಂಸ್ಥೆಯಬ ಹೆಗ್ಗಳಿಕೆ ಎಂದರು.

ಅಧ್ಯPತೆ ವಹಿಸಿದ್ದ ಕೊಳ್ತಿಗೆ ಪ್ರಾ.ಕ.ಸ.ಸಂ.ದ ಅಧ್ಯಕ್ಷ ವಸಂತ ಕುಮಾರ್ ಕೆ ಮಾತನಾಡಿ, ಸಂಘವು ಹಲವು ವರ್ಷಗಳಿಂದಲೂ ಸದಸ್ಯರ, ಗ್ರಾಹಕರ ಸಹಕಾರದಿಂದ ಪ್ರಗತಿಪಥದಲ್ಲಿ ಸಾಗುತ್ತಿದೆ.ಸಹಕಾರಿ ಸಂಘಗಳು ಯಾವುದೇ ಕಾರಣದಿಂದಲೂ ಅವನತಿಹೊಂದಲು ಅಸಾಧ್ಯ. ಠೇವಣಿದಾರರಿಗೆ ಯಾವುದೇ ಭಯ ಬೇಡ.

ನೂತನ ಕಛೇರಿಯನ್ನು ಸಂಘದ ಸ್ಥಾಪಕಾಧ್ಯಕ್ಷ ಪಾಲ್ತಾಡು ಪಠೇಲ್ ನಾರಾಯಣ ರೈ ಉದ್ಘಾಟಿಸಿದರು.ಭಧ್ರತಾ ಕೊಠಡಿಯನ್ನು ರಾಜ್ಯ ಕೈಗಾರಿಕಾ ಅಭಿವೃದ್ದಿ ಸಂಘದ ನಿರ್ದೇಶಕ ಕೆ.ಆರ್.ಲಕ್ಷ್ಮಣ ಗೌಡ ಕುಂಟಿಕಾನ ಉದ್ಘಾಟಿಸಿದರು.ವೇದಿಕೆಯಲ್ಲಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ತಿಮ್ಮಪ್ಪಯ್ಯ, ಉಪಾಧ್ಯಕ್ಷ ಅಣ್ಣಪ್ಪ ನಾಯ್ಕ, ನಿರ್ದೇಶಕರಾದ ಜನಾರ್ಧನ ಗೌಡ ಪಿ, ಸತೀಶ್ ಪಾಂಬಾರು, ಮಾಧವ ಗೌಡ ಡಿ,ಪಿ.ವೆಂಕಟ್ರಮಣ ಆಚಾರ್ಯ, ದಿವಾಕರ ಬಂಗೇರ ಬೊಳಿಯಾಲ, ಚಂದ್ರಾವತಿ, ಅನಿತಾ ಡಿ ಶೆಟ್ಟಿ , ಬೆಳಿಯಪ್ಪ ಗೌಡ, ಸಹಕಾರಿ ಸಂಘಗಳ ವಲಯ ಮೇಲ್ವಿಚಾರಕ ಶರತ್ ಡಿ, ನವೋದಯ ಸ್ವಸಹಾಯ ಸಂಘಗಳ ಕೊಳ್ತಿಗೆ ಒಕ್ಕೂಟದ ಅಧ್ಯಕ್ಷ ಅಶೋಕ್ ಒರ್ಕೊಂಬು, ಸ್ವಸಹಾಯ ಸಂಘಗಳ ಪ್ರೇರಕಿ ಕಲ್ಪವಲ್ಲಿ ಉಪಸ್ಥಿತರಿದ್ದರು.

ಗೌರವಾರ್ಪಣೆ: ಇದೇ ಸಂದರ್ಭದಲ್ಲಿ ನವೋದಯ ಸ್ವಸಹಾಯ ಸಂಘಗಳ ಪಾಲ್ತಾಡಿ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಆಚಾರ್ಯ ನಳೀಲು, ಕೊಳ್ತಿಗೆ ಪ್ರಾ.ಕ.ಸ.ಸಂ.ದ ಪಾಲ್ತಾಡಿ ಶಾಖಾ ವ್ಯವಸ್ಥಾಪಕ ಬಾಲಗಂಗಾಧರ ಕೆ ಅವರನ್ನು ಶಾಲು ,ಸ್ಮರಣಿಕೆ ನೀಡಿ ಗೌರವಿಸಲಾಯಿತು.

ನವೋದಯ ಸ್ವಸಹಾಯ ಸಂಘಗಳ ಪಾಲ್ತಾಡಿ ಒಕ್ಕೂಟದ ಕಾರ್ಯದರ್ಶಿ  ಕು.ಶೋಭಾ,ಉಪಾಧ್ಯಕ್ಷ ಸದಾಶಿವ ರೈ ಬಾಕಿಜಾಲು, ಕೊಳ್ತಿಗೆ ರೈತ ಮಿತ್ರಕೂಟದ ಅಧ್ಯಕ್ಷ ದಿವಾಕರ ರೈ ಕೆರೆಮೂಲೆ ,ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನ ಉಪಾಧ್ಯಕ್ಷ ಯತೀಂದ್ರ ಕೊಚ್ಚಿ ,ಪ್ರಕಾಶ್ ಪಾಲ್ತಾಡಿ ಅತಿಥಿಗಳನ್ನು ಗೌರವಿಸಿದರು.

ಅಶ್ವಿನಿ, ಐಶ್ವರ್ಯ, ನಿಶ್ಮಿತಾ ಪ್ರಾರ್ಥಿಸಿದರು.ಕೊಳ್ತಿಗೆ ಪ್ರಾ.ಕ.ಸ.ಸಂ.ದ ನಿರ್ದೇಶಕ ತೀರ್ಥಾನಂದ ದುಗ್ಗಳ ಸ್ವಾಗತಿಸಿ, ಪಾಲ್ತಾಡಿ ಶಾಖಾ ವ್ಯವಸ್ಥಾಪಕ ಬಾಲಗಂಗಾಧರ ಕೆ ವಂದಿಸಿದರು.ಕಿರಣ್ ಪ್ರಸಾದ್ ಕುಂಡಡ್ಕ ,ಶಶಿಕುಮಾರ್ ಬಿ.ಎನ್,ಪ್ರವೀಣ್ ಚೆನ್ನಾವರ, ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

ಬೆಳೆ ಸಾಲ ಹೊರತುಪಡಿಸಿ ಉಳಿದೆಲ್ಲಾ ಸಾಲಗಳನ್ನು ಸಂಘದಿಂದಲೇ ನೀಡಲಾಗುತ್ತಿದೆ.ಮುಂದಿನ ದಿನಗಳಲ್ಲಿ ಡಿಜಿಟಲೀಕರಣಕ್ಕೆ ನಾವೂ ಒತ್ತು ನೀಡುವ ಅವಶ್ಯಕತೆ ಇದೆ. ಕ್ಯಾಶ್ ಲೆಸ್ ವ್ಯವಹಾರಕ್ಕೆ ಹೊಂದಿಕೊಳ್ಳಬೇಕು.ವಾಣಿಜ್ಯ ಬ್ಯಾಂಕಿನಂತೆ ಸಹಕಾರ ಬ್ಯಾಂಕಿನಲ್ಲೂ ಸೇವೆ ದೊರಕುತ್ತಿದೆ.ಶೇ.೧೦ರ ಬಡ್ಡಿಯಲ್ಲಿ ನಮ್ಮ ಸಂಘದಿಂದಲೂ ವಾಹನ ಸಾಲ,ಗಹ ಸಾಲ ನೀಡಲಾಗುವುದು.ಲಾಭಕ್ಕಿಂತ ಗ್ರಾಹಕರ ಸೇವೆಗೆ ನಾವು ತೆರೆದುಕೊಳ್ಳುತ್ತಿದ್ದೇವೆ

ವಸಂತ ಕುಮಾರ್ ರೈ, ಅಧ್ಯಕ್ಷರು, ಕೊಳ್ತಿಗೆ ಪ್ರಾ,ಕೃ.ಪ. ಸ.ಸಂಘ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.