HomePage_Banner
HomePage_Banner
HomePage_Banner
HomePage_Banner

ಕೊಳ್ತಿಗೆ:ಒಕ್ಕಲಿಗ ಗೌಡ ಸಂಘದ ತಾಲೂಕು ಮಟ್ಟದ ಕ್ರೀಡಾ ಸಂಗಮ

Puttur_Advt_NewsUnder_1
Puttur_Advt_NewsUnder_1

KOLTHIGE 4 kolthige KOLTHIGE2 KOLTHIGE3ಕ್ರೀಡೆಯೂ ಪಾಮುಖ್ಯ ಪಡೆದಿದೆ-ಮಹೇಶ್ ಗೌಡ

ಗೌಡ ಮುದಾಯ ಶಕ್ತಿಯುತ ಸಮಾಜ-ನಾಗಪ್ಪ ಗೌಡ

 ಕೊಳ್ತಿಗೆ ಬಲಿಷ್ಠ ಗ್ರಾಮ-ಚಿದಾನಂದ  ಬೈಲಾಡಿ

ಗ್ರಾಮ ಮಟ್ಟದಲ್ಲೂ ಬಲಿಷ್ಠಗೊಳ್ಳಬೇಕು-ವಸಂತ ಕುಮಾರ್

 ಪುತ್ತೂರು:ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಮತ್ತು ಮಹಿಳಾ ಗೌಡ ಸೇವಾ ಸಂಘದ ಸಹಕಾರದೊಂದಿಗೆ ಯುವ ಒಕ್ಕಲಿಗ ಗೌಡ ಸೇವಾ ಸಂಘ ಕುಂಬ್ರ ವಲಯ ಇದರ ನೇತೃತ್ವದಲ್ಲಿ ಒಕ್ಕಲಿಗ ಗೌಡ ಸಮುದಾಯ ಸಂಘ ಕೊಳ್ತಿಗೆ ಇದರ ಆತಿಥ್ಯದಲ್ಲಿ ತಾಲೂಕು ಮಟ್ಟದ ಒಕ್ಕಲಿಗ ಗೌಡರ ಕ್ರೀಡಾ ಸಂಗಮ ಮಾ.19ರಂದು ಪೆರ್ಲಂಪಾಡಿ ಹಿ.ಪ್ರಾ ಶಾಲಾ ಕ್ರೀಡಾಂಗಣದಲ್ಲಿ ನಡೆಯಿತು.

ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ಬೆಂಗಳೂರಿನ ಉದ್ಯಮಿಗಳಾದ ಮಹೇಶ್ ಗೌಡ ದಂಡಿನಮಜಲು ಕ್ರೀಡಾಕೂಟವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮ ಜೀವನಕ್ಕೆ ವಿದ್ಯೆ ಎಷ್ಟು ಮುಖ್ಯವೋ, ಕ್ರೀಡೆಯೂ ಅಷ್ಟೇ ಪ್ರಾಮುಖ್ಯ ಪಡೆದಿದೆ. ಈ ನಿಟ್ಟಿನಲ್ಲಿ ವಿದ್ಯೆಗೆ ನೀಡಿದಷ್ಟೇ ಆದ್ಯತೆ ಕ್ರೀಡೆಗೂ ನೀಡಬೇಕು. ಕ್ರೀಡೆಯ ಮೂಲಕ ಸಮಾಜ ಬಾಂಧವರು ಗ್ರಾಮ ಮಟ್ಟದಿಂದ ರಾಜ್ಯ ರಾಷ್ಟ್ರ ಮಟ್ಟಕ್ಕೂ ಬೆಳೆಯಬೇಕು ಎಂದರು. ಸಮಾಜದ ವತಿಯಿಂದ ಗ್ರಾಮ ಮಟ್ಟ, ವಲಯ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ನಡೆಯುವ ಕ್ರೀಡಾ ಕೂಟಗಳು ಮುಂದಿನ ದಿನಗಳಲ್ಲಿ ಜಿಲ್ಲೆ, ರಾಜ್ಯ ಮಟ್ಟದಲ್ಲೂ ನಡೆಯಲಿ ಎಂದು ಅವರು ಶುಭ ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ನಾಗಪ್ಪ ಗೌಡ ಬೊಮ್ಮೆಟ್ಟಿ ಮಾತನಾಡಿ, ಒಕ್ಕಲಿಗ ಗೌಡ ಸಮುದಾಯವು ಶಕ್ತಿಯುತ ಸಮಾಜವಾಗಿದೆ. ನಮ್ಮ ಸಮಾಜವು ಸಂಘಟನೆಯಲ್ಲಿ ಉತ್ತಮ ಹೆಸರು ಪಡೆದಿದೆ. ಕ್ರೀಡೆಯಿಂದ ಸಮಾಜದ ಸಂಘಟನೆ. ಸಂಘಟಿತ ಸಮಾಜದಿಂದ ಕ್ರೀಡೆ ಎಂಬಂತೆ ಸಮಾಜ ಮುಂದುವರಿಯಬೇಕು ಎಂದು ಹೇಳಿದರು. ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ ಮಾತನಾಡಿ, ಒಕ್ಕಲಿಗ ಗೌಡ ಸೇವಾ ಸಂಘದ ವ್ಯಾಪ್ತಿಗೆ ಒಳಪಟ್ಟಂತೆ ಕೊಳ್ತಿಗೆ ಗ್ರಾಮವು ಬಲಿಷ್ಠ ಗ್ರಾಮವಾಗಿದೆ. ತಾಲೂಕು ಸಂಘಕ್ಕೆ ಮೂವರು ಅಧ್ಯಕ್ಷರನ್ನು ನೀಡಿದ ಕೀರ್ತಿಯು ಕೊಳ್ತಿಗೆ ಗ್ರಾಮಕ್ಕಿದೆ ಎಂದರು. ಸಮಾಜದ ಒಳಿತಿಗಾಗಿ 2002 ರಲ್ಲಿ ಸಹಕಾರ ಸಂಘವನ್ನು ಪ್ರಾರಂಭಿಸಿ ಉತ್ತಮ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2007ರಲ್ಲಿ ಸಮುದಾಯ ಭವನವನ್ನು ಲೋಕಾರ್ಪಣೆ ಮಾಡಲಾಗಿದೆ.

2008ರಲ್ಲಿ ಯುವ ಒಕ್ಕಲಿಗ ಗೌಡ ಸಂಘವನ್ನು ಪ್ರಾರಂಭಿಸಿ ಯುವಕರನ್ನು ಸಂಘಟಿಸುವಲ್ಲಿ ಸಂಘವು ಸಹಕಾರಿಯಾಗಿದೆ ಎಂದರು.

ಧ್ವಜಾರೋಹಣ ನೆರವೇರಿಸಿದ ಕೊಳ್ತಿಗೆ ಸಿ.ಎ ಬ್ಯಾಂಕ್‌ನ ಅಧ್ಯಕ್ಷ ವಸಂತ ಕುಮಾರ್ ಮಾತನಾಡಿ,  ಸಂಘದ ಮೂಲಕ ನಮ್ಮ ಸಮಾಜ ಪುರಾತನ ನಾಡು ನುಡಿ ಆಚಾರಗಳನ್ನು ಬೆಳೆಸಬೇಕು. ಸಂಘಟಿತ ಕಾರ್ಯಕ್ರಮಗಳನ್ನು ಯೋಜಿಸಿಕೊಂಡು ಸಂಘಟನೆ ಗ್ರಾಮ ಮಟ್ಟದಲ್ಲೂ ಬಲಿಷ್ಠಗೊಳ್ಳಬೇಕು ಎಂದು ಹೇಳಿದರು. ಯುವ ಒಕ್ಕಲಿಗ ಗೌಡ ಸಂಘದ ಗೌರವಾಧ್ಯಕ್ಷ ಪ್ರವೀಣ್ ಕುಂಟ್ಯಾನ ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಗೌರಿ ಬನ್ನೂರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ಕಬಡ್ಡಿ ಕ್ರೀಡಾಂಗಣವನ್ನು ಶಿವರಾಮ ಗೌಡ ಇದ್ಯಪೆ, ವಾಲಿಬಾಲ್ ಕ್ರೀಡಾಂಗಣವನ್ನು ಕೊಳ್ತಿಗೆ ಗ್ರಾ.ಪಂ ಸದಸ್ಯ ತೀರ್ಥಾನಂದ ದುಗ್ಗಳ, ಕ್ರಿಕೆಟ್ ಕ್ರೀಡಾಂಗಣವನ್ನು ಮಧು ನರಿಯೂರು, ಲಗೋರಿ ಕ್ರೀಡಾಂಗಣವನ್ನು ಸುಳ್ಯಪದವು ಸರ್ವೋದಯ ಪ್ರೌಢ ಶಾಲಾ ಮುಖ್ಯಗುರು ಶಿವರಾಮ ಗೌಡ ಎಚ್.ಡಿ, ಮಹಿಳಾ ಕಬಡ್ಡಿ ಕ್ರೀಡಾಂಗಣವನ್ನು ಕುಂಬ್ರ ವಲಯದ ಮಹಿಳಾ ಗೌಡ ಸಂಘದ ಅಧ್ಯಕ್ಷೆ ಮೋಹನಾಂಗಿ, ತ್ರೋಬಾಲ್ ಕ್ರೀಡಾಂಗಣವನ್ನು ಒಳಮೊಗ್ರು ಗ್ರಾ.ಪಂ ಸದಸ್ಯೆ ಉಷಾನಾರಾಯಣ ಉದ್ಘಾಟಿಸಿದರು.

ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮುಂಗ್ಲಿಮನೆ, ಕಾರ್ಯದರ್ಶಿ ರಾಧಾಕೃಷ್ಣ ನಂದಿಲ, ಕ್ರೀಡಾ ಕಾರ್ಯದರ್ಶಿ ಮಾಧವ ಗೌಡ ಪೆರಿಯತ್ತೋಡಿ, ಕುಂಬ್ರ ವಲಯದ ಅಧ್ಯಕ್ಷ ಸುಬ್ರಾಯ ಗೌಡ ಪಾಲ್ತಾಡು, ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ಗಂಗಾಧರ ಗೌಡ ಕೆಮ್ಮಾರ, ರಾಮಣ್ಣ ಗೌಡ ಕೆಯ್ಯೂರು, ಕೃಷ್ಣಪ್ಪ ಗೌಡ ಡೆಂಬಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಸಮಿತಿ ಅಧ್ಯಕ್ಷರಾದ ಕುದ್ಮಾರು ಹಿ.ಪ್ರಾ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸುರೇಶ್ ಕುಮಾರ್ ಪಿ.ಎಂ ಹಾಗೂ ಜಯರಾಮ ಗೌಡ ಕುಂಬ್ರರವರನ್ನು ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಗಂಗಾಧರ ಗೌಡ ಸನ್ಮಾನಿಸಿದರು.

ಚಂದ್ರಾವತಿ ಕುದ್ಕುಳಿ ಮತ್ತು ತಂಡದವರು ಪ್ರಾರ್ಥಿಸಿದರು. ಪಟ್ಟೆ ಪ್ರತಿಭಾ ಪ್ರೌಢಶಾಲಾ ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಸ್ವಾಗತಿಸಿದರು. ಸತ್ಯಾನಂದ ಬರಡಿಮಜಲು, ಯತೀಂದ್ರ ಕೊಚ್ಚಿ, ಅಶೋಕ್ ಒರ್ಕುಂಬು, ಸತೀಶ್ ಪಾಂಬಾರ್, ಯೋಗೀಶ್ ಕಾವು, ಪ್ರೇಮಾ, ಎಸ್.ಪಿ ಮುರಳಿಧರ ಕೆಮ್ಮಾರ, ಬಾಬು ರಾಜೇಂದ್ರ, ಪವನ್ ಡಿ.ಜಿ, ಯೋಗೀಶ್ ಬಾಯಂಬಾಡಿ, ಪುಷ್ಪಾವತಿ, ಸುಮ, ಜನಾರ್ದನ ಪೆರ್ಲಂಪಾಡಿ, ಚೆನ್ನಪ್ಪ ಗೌಡ ನೂಜಿ, ಶ್ರೀಧರ ಗೌಡ ಅತಿಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ಕ್ರೀಡಾಕೂಟದ ಸಂಚಾಲಕ ಯತೀಂದ್ರ ಕೊಚ್ಚಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಸುಳ್ಯ ತಾಲೂಕು ಯುವ ಜನ ಸೇವಾ ಮತ್ತು ಕ್ರೀಡಾಧಿಕಾರಿ ದೇವರಾಜ್ ಮುತ್ಲಾಜೆ ಹಾಗೂ ಜಯರಾಮ ಗೌಡ ಕಾರ್ಯಕ್ರಮ ನಿರೂಪಿಸಿದರು. ಕೊಳ್ತಿಗೆ ಗ್ರಾಮ ಸಮಿತಿ ಅಧ್ಯಕ್ಷ ತಿರುಮಲೇಶ್ವರ ದೊಡ್ಡಮನೆ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪುರುಷರಿಗಾಗಿ ಕಬಡ್ಡಿ, ವಾಲಿಬಾಲ್, ಹಗ್ಗ ಜಗ್ಗಾಟ, ಕ್ರಿಕೆಟ್, ಮಹಿಳೆಯರಿಗೆ ಕಬಡ್ಡಿ, ವಾಲಿಬಾಲ್, ಹಗ್ಗ ಜಗ್ಗಾಟ, ಶಟ್ಲ್ ರಿಲೇ, ಪ್ರೌಢ ಶಾಲಾ ವಿಭಾಗದ ಹುಡುಗರಿಗಾಗಿ ಕಬಡ್ಡಿ ಹಾಗೂ 100 ಮೀ ಓಟ, ಹುಡುಗಿಯರಿಗೆ ಲಗೋರಿ ಹಾಗೂ 100ಮೀ.ಓಟ, ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಮಿಕ್ಸಡ್ ರಿಲೇ, 50 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ಗುಂಡು ಎಸೆತ ಹಾಗೂ100 ಮೀ.ಓಟ ಸ್ಪರ್ಧೆ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.