ಕಾರ್ಯದರ್ಶಿಯವರಿಂದ ಬಜತ್ತೂರು ಪಂಚಾಯತ್ ಕಡೆಗಣನೆ: ಆರೋಪ ಬದಲಿ ಕಾರ್ಯದರ್ಶಿ ನೇಮಿಸಿ, ಇಲ್ಲವೇ ಪ್ರಭಾರ ಹುದ್ದೆ ನೀಡದೆ ಮುಂದುವರಿಸುವಂತೆ ಆಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

bajathurಬಜತ್ತೂರು ಗ್ರಾ.ಪಂ. ಸಾಮಾನ್ಯ ಸಭೆ

ಉಪ್ಪಿನಂಗಡಿ: ಬಜತ್ತೂರು ಗ್ರಾ.ಪಂ.ನ ಕಾರ್ಯದರ್ಶಿಯವರು ಶಿರಾಡಿ ಗ್ರಾ.ಪಂ.ನಲ್ಲಿ ಪ್ರಭಾರ ಪಿಡಿಓ ಆಗಿ ನಿಯೋಜನೆಗೊಂಡ ಬಳಿಕ ಅವರು ಬಜತ್ತೂರು ಗ್ರಾ.ಪಂ. ಅನ್ನು ಕಡೆಗಣಿಸಿದ್ದಾರೆ. ಆದ್ದರಿಂದ ಇಲ್ಲಿಗೆ ಬದಲಿ ಕಾರ್ಯದರ್ಶಿಯನ್ನು ನೀಡಬೇಕು ಅಥವಾ ಅವರನ್ನು ಬೇರೆ ಕಡೆ ಪ್ರಭಾರ ಕರ್ತವ್ಯಕ್ಕೆ ಕಳುಹಿಸದೇ ಅವರು ಬಜತ್ತೂರು ಗ್ರಾ.ಪಂ.ನಲ್ಲೇ ಇರುವಂತೆ ಆದೇಶ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರನ್ನು ಕೋರಿ ಪತ್ರ ಬರೆಯಲು ಬಜತ್ತೂರು ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಪಂರ್ದಾಜೆ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರು, ಬಜತ್ತೂರು ದೊಡ್ಡ ಗ್ರಾಮವಾಗಿದ್ದು, ಇಲ್ಲಿನ ಕಾರ್ಯದರ್ಶಿಯವರನ್ನು ಶಿರಾಡಿ ಗ್ರಾ.ಪಂ.ನಲ್ಲಿ ಪ್ರಭಾರ ಪಿಡಿಓ ಆಗಿ ನೇಮಕಗೊಳಿಸಲಾಗಿದೆ. ಆ ಬಳಿಕ ಕಾರ್ಯದರ್ಶಿಯವರು ಇಲ್ಲಿಗೆ ಸರಿಯಾಗಿ ಹಾಜರಾಗದೆ ಬಜತ್ತೂರು ಗ್ರಾಮ ಪಂಚಾಯತ್ ಅನ್ನು ಕಡೆಗಣಿಸುತ್ತಿದ್ದಾರೆ. ಕಳೆದ ಗ್ರಾಮ ಸಭೆಗೂ ಕಾರ್ಯದರ್ಶಿಯವರು ಹಾಜರಾಗಲಿಲ್ಲ. ಈ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರಿಗೆ ತಿಳಿಸಿದ್ದರೂ, ಅವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಅಧೀಕಾರಿಗಳ ಈ ನಿಲುವಿನಿಂದಾಗಿ ಗ್ರಾ.ಪಂ.ನ ಕೆಲಸಕಾರ್ಯಗಳು ಸರಿಯಾಗಿ ನಡೆಯದೇ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸಭೆಯಲ್ಲಿ ಸರ್ವ ಸದಸ್ಯರ ಸಹಮತ ದೊರಕಿ, ಇಲ್ಲಿಗೆ ಬದಲಿ ಕಾರ್ಯದರ್ಶಿಯವರನ್ನು ನೇಮಕಗೊಳಿಸಬೇಕು. ಇಲ್ಲದಿದ್ದಲ್ಲಿ ಇಲ್ಲಿನ ಕಾರ್ಯದರ್ಶಿಗೆ ಪ್ರಭಾರ ಹುದ್ದೆ ನೀಡದೇ ಇಲ್ಲಿಯೇ ಕಾರ್ಯದರ್ಶಿಯಾಗಿ ಮುಂದುವರಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರನ್ನು ಕೋರಿ ಪತ್ರ ಬರೆಯಲು ನಿರ್ಣಯ ಅಂಗೀಕರಿಸಲಾಯಿತು. ಅಲ್ಲದೇ, ಇಲ್ಲಿನ ಪಿಡಿಓ ಅವರನ್ನು ಹಿರೇಬಂಡಾಡಿ ಗ್ರಾ.ಪಂ.ಗೆ ಪ್ರಭಾರ ಪಿಡಿಓ ಆಗಿ ನಿಯೋಜಿಸಲಾಗಿದೆ. ಆ ಸಂದರ್ಭದಲ್ಲಿ ಒಂದು ತಿಂಗಳು ಮಾತ್ರ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಹೇಳಿದ್ದರು. ಆದರೆ 3-4 ತಿಂಗಳಾದರೂ ಹಿರೇಬಂಡಾಡಿ ಗ್ರಾ.ಪಂ.ಗೆ ಹೊಸ ಪಿಡಿಓ ಅವರ ನಿಯೋಜನೆಯಾಗದಿರುವುದರಿಂದ ಇನ್ನೂ ಇವರ ಪ್ರಭಾರ ಹುದ್ದೆ ಮುಂದುವರಿದಿದೆ. ಇದರಿಂದ ಇಲ್ಲಿನ ಗ್ರಾಮಸ್ಥರಿಗೆ ಸಮಸ್ಯೆಯಾಗಿದ್ದು, ಇಲ್ಲಿಯ ಪಿಡಿಓ ಅವರ ಪ್ರಭಾರ ಹುದ್ದೆ ರದ್ದುಪಡಿಸಿ, ಅವರು ಕಚೇರಿ ಅವಧಿಯ ಎಲ್ಲಾ ದಿನಗಳಲ್ಲಿ ಬಜತ್ತೂರುನಲ್ಲಿಯೇ ಗ್ರಾಮಸ್ಥರಿಗೆ ಸಿಗುವಂತಾಗಬೇಕು ಎಂದು ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಯವರನ್ನು ಕೋರಿ ನಿರ್ಣಯ ಅಂಗೀಕರಿಸಲಾಯಿತು. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ವಿಸ್ತರಣೆಯಾಗುತ್ತಿದ್ದು, ಇದರ ಕಾಮಗಾರಿಯಿಂದಾಗಿ ಕೆಮ್ಮಾರದಲ್ಲಿ ಹಲವು ಬಾರಿ ಕುಡಿಯುವ ನೀರಿನ ಪೈಪ್‌ಗಳು ಒಡೆದು ಹೋಗಿ ತೊಂದರೆಯಾಗಿವೆ. ಇದನ್ನು ದುರಸ್ತಿ ಪಡಿಸಿದರೂ ಮತ್ತದೇ ತೊಂದರೆ ಎದುರಾಗುತ್ತಿದೆ. ಆದ್ದರಿಂದ ಇಂತಹ ಆಯಕಟ್ಟಿನ ಪ್ರದೇಶದಲ್ಲಿ ಆಗಾಗ ಬಂದು ಕಾಮಗಾರಿ ನಡೆಸದೇ ಒಮ್ಮೆಲೆ ಕಾಮಗಾರಿ ಮುಗಿಸಬೇಕು ಎಂದು ಕಾಮಗಾರಿ ಗುತ್ತಿಗೆ ಕಂಪೆನಿಯವರಿಗೆ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಯವರನ್ನು ಕೋರಿ ನಿರ್ಣಯ ಕೈಗೊಳ್ಳಲಾಯಿತು. ನೀರಕಟ್ಟೆಯಲ್ಲಿ ದಾರಿದೀಪಕ್ಕೆ ಮೀಸಲಿಟ್ಟ ಅನುದಾನವನ್ನು ಅಲ್ಲಿ ಸೋಲಾರ್ ದೀಪ ಅಳವಡಿಸಲು ವಿನಿಯೋಗಿಸಲು ನಿರ್ಧರಿಸಲಾಯಿತು. ಪಂಜಳದಿಂದ ಬೀಟಿಗೆಗೆ 30 ಸಾವಿರ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ನಿರ್ಧರಿಸಲಾಯಿತು. ಮೇಲೂರು ಎಸ್‌ಸಿ ಕಾಲನಿ ರಸ್ತೆ ಅಭಿವದ್ಧಿಗೆ ಸಮಾಜ ಕಲ್ಯಾಣ ಇಲಾಖೆಗೆ ಬರೆಯಲು ತೀರ್ಮಾನಿಸಲಾಯಿತು.

ಅನುಭವಿ ವಿಎ ಕೊಡಿ: ಬಜತ್ತೂರಿಗೆ ಈಗ ನೇಮಕವಾಗಿ ಬಂದಿರುವ ಗ್ರಾಮಕರಣಿಕರಿಗೆ ವತ್ತಿಯಲ್ಲಿ ಅನುಭವದ ಕೊರತೆ ಇದೆ. ಇವರದ್ದು ತರಬೇತಿ ಕೂಡಾ ಆಗಿಲ್ಲ. ಆದ್ದರಿಂದ ಇಲ್ಲಿನ ಕಂದಾಯ ಕೆಲಸಗಳನ್ನು ಸಮರ್ಥವಾಗಿ ನಿರ್ವಹಿಸಲು ಇವರಿಗೆ ಸಾಧ್ಯವಾಗದೇ ಇಲ್ಲಿನ ಜನರು ಸಮಸ್ಯೆ ಅನುಭವಿಸುವಂತಾಗಿದೆ. ಆದ್ದರಿಂದ ಇಲ್ಲಿಗೆ ಅನುಭವಿ ಗ್ರಾಮಕರಣಿಕರನ್ನು ನೇಮಿಸಬೇಕು ಎಂದು ಜಿಲ್ಲಾಧಿಕಾರಿಯವರಿಗೆ ಕೋರಿ ಪತ್ರ ಬರೆಯಲು ನಿರ್ಣಯಿಸಲಾಯಿತು.

ಸಭೆಯಲ್ಲಿ ಗ್ರಾ.ಪಂ. ಸದಸ್ಯರಾದ ನಝೀರ್ ಬೆದ್ರೋಡಿ, ರಾಜೇಶ್ ಪಿಜಕ್ಕಳ, ಪ್ರೆಸಿಲ್ಲಾ ಡಿಸೋಜ, ಸೇಸಪ್ಪ ದಡ್ಡು, ಶ್ರೀಮತಿ ನವೀನ ಪಡ್ಪು, ಲೀಲಾವತಿ, ತೇಜಕುಮಾರಿ, ಆನಂದ ಕೆ.ಎಸ್., ಮಾಧವ ಒರುಂಬೋಡಿ, ಶಶಿತ, ಗಣೇಶ್ ಕಿಂಡೋವು, ಚಂಪಾ, ಕಮಲಾಕ್ಷಿ ಉಪಸ್ಥಿತರಿದ್ದು, ಚರ್ಚೆಯಲ್ಲಿ ಪಾಲ್ಗೊಂಡರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸ್ವಾಗತಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.