ಸುಳ್ಯದಲ್ಲಿ ಚಾಂಪಿಯನ್ ಆದ ಪುತ್ತೂರು ಸುದ್ದಿ ಕ್ರಿಕೆಟ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಸುದ್ದಿ ಬಿಡುಗಡೆ ತಂಡ ಸುಳ್ಯದಲ್ಲಿ ನಡೆದ ಪ್ರತಿಷ್ಠಿತ ಸುಳ್ಯ ಸುದ್ದಿ ಸೌಹಾರ್ದ ಟ್ರೋಫಿ ಕ್ರಿಕೆಟ್ ಪಂದ್ಯಾಕೂಟದಲ್ಲಿ ಚಾಂಪಿಯನ್ ಆಗುವ ಮೂಲಕ ಅದ್ಭುತ ಸಾಧನೆ ಮಾಡಿದೆ. ಸುಳ್ಯದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಾ.29ರಂದು ನಡೆದ ಪಂದ್ಯಾಕೂಟದಲ್ಲಿ ಮೊದಲಿಗೆ ಕಂದಾಯ ಇಲಾಖೆ ವಿರುದ್ದ ನಿರಾಯಾಸ ಗೆಲುವು ಸಾಧಿಸಿದ ಪುತ್ತೂರು ಸುದ್ದಿ ತಂಡ ಬಳಿಕ ಪಿ.ಟಿ ಟೀಚರ್ಸ್ ಇಲೆವೆನ್ ತಂಡವನ್ನು ಬಗ್ಗು ಬಡಿಯಿತು. ಬಳಿಕ ನಡೆದ ಸೆಮೀ ಫೈನಲ್ ಪಂದ್ಯಾಟದಲ್ಲಿ ಬಲಿಷ್ಠ ಪೊಲೀಸ್ ತಂಡದ ವಿರುದ್ದ ರೋಚಕ ಜಯ ಸಾಧಿಸಿದ ತಂಡ ಫೈನಲ್ ಗೆ ಲಗ್ಗೆ ಹಾಕಿತು.
ಫೈನಲ್ ಪಂದ್ಯಾಟದಲ್ಲಿ ಬಲಿಷ್ಠ ಕೇಬಲ್ ನೆಟ್‌ವರ್ಕ್ ತಂಡದ ವಿರುದ್ದ ಮೊದಲು ಬ್ಯಾಟಿಂಗ್ ಮಾಡಿದ ಪುತ್ತೂರು ಸುದ್ದಿ ತಂಡ ಯೂಸುಫ್ ರೆಂಜಲಾಡಿಯವರ ಒಂದು ಅತ್ಯದ್ಬುತ ಸಿಕ್ಸ್ ಹಾಗೂ ಒಂದು ರಿವರ್ಸ್ ಸ್ವೀಪ್ ಬೌಂಡರಿಯ ನೆರವಿನಿಂದ ನಿಗದಿತ 4 ಓವರುಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 42 ರನ್ ಕಲೆ ಹಾಕಿತು. ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಕೇಬಲ್  ನೆಟ್ ವರ್ಕ್ ತಂಡ ಅನಂತರಾಮ್, ಶೋಭರಾಜ್ ಹಾಗೂ ರಮೇಶ್ ಅವರ ಕರಾರುವಕ್ ದಾಳಿಯ ಮುಂದೆ ನಿಗದಿತ 4 ಓವರ್ ಗಳ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 35 ರನ್ ಮಾಡಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. 8 ರನ್ನುಗಳಿಂದ ಸೋಲೊಪ್ಪಿಕೊಂಡಿತು.

IMG-20170329-WA0018

ed46a1e8-8045-41ec-9387-63389bee2c44

989c7196-2ea5-4605-ad22-c185bc4c3e5a

05574829-df69-4a15-a2f4-f7a9ace45992

44fdf0fe-aae7-46d3-b115-edea4ca153b8

2810c874-5b97-4322-bf76-3f581e8c19c9

6f6b95dc-06b0-4684-89b8-cff42380807e

40771443-6944-4ff8-a599-1bfcfc055e38

IMG-20170329-WA0032

IMG-20170329-WA0045

IMG-20170329-WA0036

IMG-20170329-WA0042
ಪ್ರಥಮ ಸ್ಥಾನ ಪಡೆದ ಸುದ್ದಿ ಬಿಡುಗಡೆ ಪುತ್ತೂರು ತಂಡ

 

IMG-20170329-WA0043
ದ್ವಿತೀಯ ಸ್ಥಾನ ಪಡೆದ ಕೇಬಲ್ ನೆಟ್ ವರ್ಕ್ ತಂಡ
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.