HomePage_Banner
HomePage_Banner

ಮುಂಡೂರು ಬಿಲ್ಲವ ಸಮಾಜ ಸೇವಾ ಸಂಘದ ಮಹಾಸಭೆ ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ, ಅಭಿನಂದನಾ ಕಾರ್ಯಕ್ರಮ

 

ನರಿಮೊಗರು: ಮುಂಡೂರು ಬಿಲ್ಲವ ಸಮಾಜ ಸೇವಾ ಸಂಘದ ವಾರ್ಷಿಕ ಮಹಾ ಸಭೆ, ಪ್ರತಿಭಾ ಪುರಸ್ಕಾರ, ಪುಸ್ತಕ ವಿತರಣೆ, ಅಭಿನಂದನಾ ಕಾರ್ಯಕ್ರಮ ಮೇ 28 ರಂದು ಕುರೆಮಜಲು ಚಂದ್ರಶೇಖರ ಪೂಜಾರಿಯವರ ನಿವಾಸದಲ್ಲಿ ಸದ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. 125 ಸದಸ್ಯರು ಹಾಜರಿದ್ದರು.

ತಾಲೂಕು ಬಿಲ್ಲವ ಸಂಘದ ಕೋಶಾಧಿಕಾರಿ ಚಂದ್ರಕಾಂತ್ ಶಾಂತಿವನರವರು ಸಭೆಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಪ್ಥಿತರಿದ್ದ ವಲಯ ಸಂಚಾಲಕ ಹೊನ್ನಪ್ಪ ಪೂಜಾರಿ ಕೈಂದಾಡಿ, ತಾಲೂಕು ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಪೂಜಾ ವಸಂತ್, ತಾಲೂಕು ಬಿಲ್ಲವ ಸಂಘದ ಜತೆ ಕಾರ್ಯದರ್ಶಿ ಕೇಶವ ಪೂಜಾರಿ ಬೆದ್ರಾಳ, ತಾಲೂಕು ಬಿಲ್ಲವ ಸಂಘ ವಿದ್ಯಾನಿಧಿ ಸ್ಥಾಪಕ ಸಂಚಾಲಕ ಕ್ಯಾ| ಚಿದಾನಂದ ನಾಡಾಜೆ, ತಾಲೂಕು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಮೋನಪ್ಪ ಕರ್ಕೇರಾ, ಅಣ್ಣಿ ಪೂಜಾರಿ ಹಿಂದಾರು, ಗ್ರಾಮ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ವಿಶ್ವನಾಥ್ ರವರು ಸಂದರ್ಭೋಚಿತವಾಗಿ ಮಾತನಾಡಿದರು. ಮಾಧವ ಸಾಲ್ಯಾನ್ ಶಿವಗಿರಿ ಕುರೆಮಜಲುರವರು ವರದಿ ವಾಚಿಸಿದರು. ಎಸ್‌ಎಸ್‌ಎಲ್‌ಸಿ, ಪಿಯುಸಿ ಶಿಕ್ಷಣ ಮುಗಿಸಿ ಮುಂದಿನ ವಿದ್ಯಾಭ್ಯಾಸ ಮುಂದುವರೆಸುತ್ತಿರುವ ವಿದ್ಯಾರ್ಥಿಗಳು, ಇತರೆ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು. ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಗ್ರಾಮದ ಎಲ್ಲಾ ಬಿಲ್ಲವ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸ ಲಾಯಿತು.

2017-18 ನೇ ಸಾಲಿನ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸ ಲಾಯಿತು. ನಿಶಾ, ಸುಪರ್ಣರವರು ಪ್ರಾರ್ಥಿಸಿದರು. ಬಿ.ಟಿ. ಮಹೇಶ್ಚಂದ್ರ ಸಾಲ್ಯಾನ್ ಸ್ವಾಗತಿಸಿ, ಸತೀಶ್ ಹಿಂದಾರು ವಂದಿಸಿದರು. ನವೀನ್ ಪಜಿಮಣ್ಣು ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.