HomePage_Banner
HomePage_Banner

ಕಾವು: ನನ್ಯ ಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾವು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನನ್ಯ ಶಾಲೆಯಲ್ಲಿ ಗಿಡ ನೆಡುವುದರ ಮೂಲಕ ವಿಶ್ವಪರಿಸರ ದಿನಾಚರಣೆಯನ್ನು ಜೂ.6ರಂದು ಆಚರಿಸಲಾಯಿತು. ಪರಿಸರ ದಿನಾಚರಣೆಯ ಬಗ್ಗೆ ಮಾತನಾಡಿದ ಅರಿಯಡ್ಕ ಗ್ರಾ.ಪಂ. ಉಪಾಧ್ಯಕ್ಷ ಲೋಕೇಶ್ ಚಾಕೋಟೆ, ಪರಿಸರವನ್ನು ರಕ್ಷಿಸುವುದು ಮತ್ತು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ, ಮುಂದಿನ ಪೀಳಿಗೆ ಸುಂದರವಾಗಿ ಜೀವನ ನಡೆಸಬೇಕಾದರೆ, ಈಗ ನಾವು ಪರಿಸರವನ್ನು ಬೆಳೆಸಿ-ಉಳಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಯವರಿಗೆ ಅಪಾಯವಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ನನ್ಯ ಶಾಲಾ ಮುಖ್ಯೋಪಾಧ್ಯಾಯಿನಿ ನಾಗವೇಣಿ, ಅರಿಯಡ್ಕ ಗ್ರಾ.ಪಂ. ಪಿ.ಡಿ.ಓ. ಜಯಪ್ರಕಾಶ್, ಸದಸ್ಯರುಗಳಾದ ನವೀನ ಬಿ.ಡಿ., ಸೀತಾರಾಮ ಮೇಲ್ಪಾದೆ, ಹೊನ್ನಪ್ಪ ಪೂಜಾರಿ, ಶಾಲಾ ಶಿಕ್ಷಕ ವೃಂದ ಸಹಿತ ವಿದ್ಯಾರ್ಥಿಗಳು ಉಪಸ್ಥಿತ ರಿದ್ದರು.

 

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.