ಸುಲಲಿತ ಔಷಧ ಸಿಂಪಡಣೆಗೆ ಸ್ಪ್ರೇ-ಗನ್, ಫಿಲಿಪ್ಸ್ ಮಲ್ಟಿಪರ್ಪಸ್ ಆಗ್ರೋ ಸ್ಪ್ರೇಯರ್

Puttur_Advt_NewsUnder_1
Puttur_Advt_NewsUnder_1

ಅಲ್ಯೂಮಿನಿಯಂ ದೋಟಿ, ಕತ್ತಿಕೊಕ್ಕೆ: ಸಾಮಾನ್ಯವಾಗಿ ಎತ್ತರದ ಮರಗಳಿಂದ ಹಣ್ಣುಗಳನ್ನೋ ಕಾಯಿಗಳನ್ನೋ ಕೊಯ್ಯಲು ಸಾಂಪ್ರದಾಯಿಕ ಬಿದಿರಿನ ದೋಂಟಿ ಬಳಸುತ್ತಾರೆ. ಆದರೆ ಬಿದಿರು ಸಂತತಿ ಅಳಿದಿರುವುದರಿಂದ ದೋಂಟಿ ಸಿಗುತ್ತಿಲ್ಲ. ಸಿಕ್ಕಿದರೂ ಬಿದಿರಿನ ಕೊಕ್ಕೆ ಶಾಶ್ವತವಲ್ಲ. ಇದಕ್ಕೆ ಪರ್ಯಾಯವಾಗಿ ಅಲ್ಯೂಮಿನಿಯಂ ದೋಂಟಿ ಬಳಸಲಾಗುತ್ತಿದೆ. ಫಿಲಿಪ್ ಡಿಸೋಜಾರು ಟು ಇನ್ ಒನ್ ಎಂಬಂತೆ ಸ್ಪ್ರೇಗನ್ ನ್ನೇ ದೋಂಟಿಯಾಗಿ ಬಳಸುವ ರೀತಿಯಲ್ಲಿ ಮಾಡಿದ್ದಾರೆ. ಅಡಿಕೆ, ತೆಂಗು, ಮಾವು, ಚಿಕ್ಕು, ಕೊಕ್ಕೊ, ದಿವಿಗುಜ್ಜೆ ಕೊಯ್ಯಲು ಸ್ಪ್ರೇಯರ್ ಪೈಪ್‌ನ ತುದಿ ಭಾಗದ ೬ ಅಡಿ ಉದ್ದದ ಔಷಧ ಸಿಂಪಡಣಾ ಉಪಕರಣ ಕಳಚಿ ಪೈಪುಗಳ ತುದಿಗೆ ಕತ್ತಿ ಅಥವಾ ಇತರೆ ಉಪಕರಣವನ್ನು ಜೋಡಿಸಿ ದೋಟಿಯಂತೆ  6, 12, 18, 24, 32, 35, 40 ಅಡಿ ತನಕ ಉಪಯೋಗಿಸಬಹುದಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಬಜಗೋಳಿಯಲ್ಲಿ ನಡೆದ ರಾಜ್ಯಮಟ್ಟದ ಕೃಷಿ ಮೇಳದಲ್ಲಿ ಭಾಗವಹಿಸಿ ಪ್ರಾತ್ಯಕ್ಷಿಕೆ ನೀಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರಿಂದ ಕೃಷಿ ಅನ್ವೇಷಕ ಪ್ರಶಸ್ತಿಯನ್ನು ಪಡೆದ ಫಿಲಿಪ್ಪರ ಈ ಸಾಧನವನ್ನು ಕಳೆದ ೧೬ ವರ್ಷಗಳಲ್ಲಿ ನೂರಾರು ರೈತರು ನಿರಂತರ ಉಪಯೋಗಿಸುತ್ತಿದ್ದಾರೆ. ಸಂಪರ್ಕಿಸುವ ವಿಳಾಸ : ಪಿಲಿಪ್ಸ್ ಮಲ್ಟಿ ಪರ್ಪಸ್ ಆಗ್ರೋ ಸ್ಪ್ರೇಯರ್ ಉರಿಮಜಲು, ಇಡ್ಕಿದು ಅಂಚೆ, ಬಂಟ್ವಾಳ ತಾಲೂಕು. ಮೊ. 9448824094, 9449992021, 08255-207357.

ಮನುಷ್ಯನಿಗೆ ಮೂಲಭೂತವಾಗಿ ಬೇಕಾದ ಆಹಾರವನ್ನು ಬೆಳೆಯುವ ಅನ್ನದೇವನ ಕೃಷಿ ಕ್ಷೇತ್ರ ಸಾವಿರಾರು ಸಂಶೋಧನೆಗಳಿಗೆ ಅವಕಾಶ ಕಲ್ಪಿಸುವ ಸಂಪದ್ಭರಿತ ಕ್ಷೇತ್ರ. ಆಧುನಿಕ ಕಾಲದಲ್ಲಿ ಕೃಷಿಕನೇ ನಾನಾ ಅನ್ವೇಷಣೆ ಮಾಡಿ ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಕೃಷಿಯಲ್ಲಿ ಕೂಲಿ ಕಾರ್ಮಿಕರ ಅಭಾವ ಇಂದು ಬಗೆಹರಿಸಲಾಗದ ಸಮಸ್ಯೆ. ಅಡಿಕೆ ಕೃಷಿಯಲ್ಲಿ ಮಳೆಗಾಲದಲ್ಲಿ ಬೋರ್ಡೊ ಸಿಂಪಡಣೆ ಅತೀ ಅಗತ್ಯ ಅಲ್ಲದೆ ಜಾರುತ್ತಿರುವ ಅಡಿಕೆ ಮರವೇರಲು ನುರಿತ ಕಾರ್ಮಿಕರೇ ಬೇಕು. ಅದಕ್ಕಾಗಿಯೇ ನೆಲದಲ್ಲೇ ನಿಂತು ಸುಮಾರು ೫೦ ಅಡಿ ಎತ್ತರದ ತನಕ ಅಡಿಕೆ ಗೊನೆಗಳಿಗೆ ಮದ್ದು ಸಿಂಪಡಿಸುವ ಸ್ಪ್ರೇ ಗನ್‌ನ್ನು ತಯಾರಿಸಿ ಕಳೆದ ೧೬ ವರ್ಷಗಳಿಂದ ನಿರಂತರ ಬೇಡಿಕೆ ಗಳಿಸಿದ್ದಾರೆ ವಿಟ್ಲ ಸನಿಹದ ಫಿಲಿಪ್ ಡಿೞಸೋಜಾ. ಪ್ರಸ್ತುತ ಚಾಲ್ತಿಯಲ್ಲಿರುವ ಗೆಟೋರ್ ಪಂಪಿನ ೩ ಅಡಿ ಉದ್ದದ ಕಂಟ್ರೋಲನ್ನು ಇವರು ಸುಧಾರಿತಗೊಳಿಸಿದ್ದಾರೆ. ಈ ಕಂಟ್ರೋಲನ್ನು ೧೨ ಅಡಿ ಉದ್ದದ ಅಲ್ಯುಮಿನಿಯಂ ಪೈಪುಗಳನ್ನು ಬಳಸಿ ತಯಾರಿಸಿದ್ದಾರೆ. ಇದನ್ನು ರೇಡಿಯೋ ಏರಿಯಲ್‌ನಂತೆ ಒಂದರ ಒಳಗೊಂದು ಸೇರಿಸಿ ೧೮ ರಿಂದ ೪೦ ಅಡಿಗಳ ತನಕ ಉದ್ದ ಮಾಡಬಹುದು. ಈ ಪೈಪಿನ ತುದಿಯಲ್ಲಿ ಪ್ಲಾಸ್ಟಿಕ್ ರಾಟೆಯೊಂದಕ್ಕೆ ಸ್ಪ್ರಿಂಗ್ ನೊಂದಿಗೆ ಸ್ಪ್ರೆನೋಝಲ್ ಜೋಡಣೆ ರಾಟೆ ಮೂಲಕ ಸಾಗುವ ನೈಲಾನ್ ಹಗ್ಗದಿಂದ ಸ್ಪ್ರೆ ನೋಝನ್ನು ನೆಲದಿಂದಲೇ ನಿಯಂತ್ರಿಸಲು ಸಾಧ್ಯ. ಔಷಧ ದ್ರಾವಣ ಹರಿಯುವ ಪೈಪಿನ ನಿಯಂತ್ರಕ (ಗೇಟ್ ವಾಲ್) ಸ್ಪ್ರೇ ಗನ್ ಹಿಡಿದ ವ್ಯಕ್ತಿಯ ಸೊಂಟಕ್ಕೆ ಕಟ್ಟಿರುತ್ತದೆ. ಇದನ್ನು ಸಾಮಾನ್ಯ ಉಪಯೋಗಿಸುವ ಗೆಟೋರ್ ಪಂಪಿಗೆ, ಪೆಟ್ರೋಲ್ ಮೋಟಾರ್‌ಗೆ ಜೋಡಣೆಗೆ ಅನುಕೂಲವಾಗುತ್ತದೆ. ಇದರ ಮೂಲಕ ಮನೆ ಮಂದಿಗಳೂ, ಸಾಮಾನ್ಯ ಕೂಲಿಯಾಳು ಕೂಡಾ ಔಷಧ ಸಿಂಪಡಣೆ ಮಾಡಬಲ್ಲನು. ನಿಂತ ಸ್ಥಳದಿಂದ ಸ್ಪ್ರೇ ಗನ್ ನ್ನು ಬೇಕಾದಂತೆ ಬಾಗಿಸಿ ಹಿಡಿಯಲು ಸಾಧ್ಯ. ಅಡಿಕೆ ಗೊನೆಯ ಮುಂಭಾಗ ಮತ್ತು ಹಿಂಭಾಗ ಎಡ ಮತ್ತು ಬಲ ಎಲ್ಲಾ ಬದಿಗಳಿಗೂ ತಗಲುವಂತೆ ಸ್ಪ್ರೆ ಮಾಡಲು ಸಾಧ್ಯ. ವ್ಯಕ್ತಿ ಲಂಬವಾಗಿ ಮೇಲೆ ನೋಡಿ ಕತ್ತು ನೋಯಿಸಬೇಕಾಗಿಲ್ಲ. ೪೫ ಡಿಗ್ರಿ ಕೋನದಲ್ಲಿ ನೋಡುತ್ತಾ ಔಷಧ ಸ್ಪ್ರೆ ಮಾಡಬಹುದು. ಆರಂಭದಲ್ಲಿ ಗನ್‌ನ ಉದ್ದ ೧೮ ಅಡಿಗಳಷ್ಟು ಮಾಡಿ ಸುಲಭದಲ್ಲಿ ಸ್ಪ್ರೆ ಮಾಡಬಹುದು. ನಂತರ ಸ್ವಲ್ಪ ಮರ ಏರಬೇಕಾಗುತ್ತದೆ. ಸಾಂಪ್ರದಾಯಿಕ ಸ್ಪ್ರೇಗನ್‌ನ ಇಮ್ಮಡಿ ಸ್ಥಳವನ್ನು ಇದು ಕ್ರಮಿಸುತ್ತದೆ. ಅಡಿಕೆ ಗೊನೆಗೆ ಹತ್ತಿರದಿಂದ ಸ್ಪ್ರೆ ನೀಡುವ ಕಾರಣ ಔಷಧದ ಉಳಿಕೆ ಸಾಧ್ಯವಾಗುತ್ತದೆ. ಆಗಾಗ ಮಳೆ ಬರುತ್ತಿದ್ದರೂ ಕೊಳೆ ರೋಗ ಬಾಧಿಸಿದಾಗಲೂ ಸ್ವತಃ ಕೃಷಿಕನೇ ಇದನ್ನು ೩೦ ರಿಂದ ೪೦ ಅಡಿ ಉದ್ದ ಮಾಡಿ ಉಪಯೋಗಿಸಬಲ್ಲನು. ಇತರ ಸ್ಪ್ರೇಯರ್‌ಗಳಂತೆ ಸ್ಪ್ರೇ ಮಾಡಿದ ಔಷಧ ಕಣ್ಣಿಗೆ ಮೈಗೆ ಬೀಳುವುದಿಲ್ಲ. ಸುಮಾರು ೨೦ ಶೇ. ಔಷಧ ಮತ್ತು ಸಮಯ ಉಳಿತಾಯವಾಗುತ್ತದೆ. ತೆಂಗಿನ ನುಸಿ ಪೀಡೆಗೆ, ಕರಿಮೆಣಸಿನ ಮತ್ತು ರಬ್ಬರ್ ಮರಕ್ಕೆ ಔಷಧ ಸಿಂಪಡಣೆಗೆ ಇದು ಅನೂಕೂಲವಾಗಿದೆ. ದೀರ್ಘ ಬಾಳಿಕೆಯ ಈ ಉಪಕರಣ ಈಗಾಗಲೇ ೧೨ ವರ್ಷದಿಂದ ನಿರಂತರ ಯಾವುದೇ ತೊಂದರೆ ಇಲ್ಲದೆ ನಿರ್ಧಿಷ್ಟ ದರದಲ್ಲಿಯೇ ರೈತರು ಉಪಯೋಗಿಸುತ್ತಾ ಇದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.