ಮಂಗಳೂರಿನಲ್ಲಿ ಪತ್ರಕರ್ತರ ಕ್ರೀಡಾಕೂಟ: ಪ್ರಥಮ ಪಂದ್ಯ ಗೆದ್ದ ಸುದ್ದಿ ಬಿಡುಗಡೆ ತಂಡ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ರಿ.), ಮಂಗಳೂರು ಪ್ರೆಸ್ ಕ್ಲಬ್ (ರಿ.) ಪತ್ರಿಕಾ ಭವನ ಟ್ರಸ್ಟ್ (ರಿ.) ಇದರ ಸಂಯುಕ್ತ ಆಶ್ರಯದಲ್ಲಿ ಪತ್ರಕರ್ತರ ಕ್ರೀಡಾಕೂಟವು ದ.31ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು,ಪಿ ಶಿವಾನಂದರವರು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು. ವೇದಿಕೆಯಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಎಸ್.ಸಿ.ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ .ಡಾ.ಎಂ.ಎನ್ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು. ಬಳಿಕ ವಿವಿಧ ಕ್ರೀಡಾಕೂಟ ನಡೆಯಿತು.

ಕ್ರಿಕೆಟ್ ನಲ್ಲಿ ಪುತ್ತೂರಿನಿಂದ ಸುದ್ದಿ ಬಿಡುಗಡೆ ತಂಡ ಭಾಗವಹಿಸಿದ್ದು ಪ್ರಥಮ ಪಂದ್ಯವನ್ನು ಗೆದ್ದು ಮುಂದಿನ ಪಂದ್ಯಕ್ಕೆ ಅರ್ಹತೆ ಪಡೆದುಕೊಂಡಿದೆ. ಮೀಡಿಯಾ ವಾರಿಯರ್ಸ್ ತಂಡದ ವಿರುದ್ದ ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡ ಸುದ್ದಿ ತಂಡ ಎದುರಾಳಿ ತಂಡಕ್ಕೆ 4 ಓವರ್ ಗಳಿಗೆ ಕೇವಲ 40 ರನ್ ಬಿಟ್ಟುಕೊಟ್ಟಿತು. ಬ್ಯಾಟಿಂಗ್ ನಲ್ಲಿ ಬೆಂಬತ್ತಿದ ಸುದ್ದಿ ತಂಡದ ಆಟಗಾರರು ಕೇವಲ 1 ವಿಕೆಟ್ ನಷ್ಟ ಕ್ಕೆ ನಿಗದಿತ ಗುರಿ ಸಾಧಿಸಿ ಗೆಲುವಿನ ನಗೆ ಬೀರಿತು. ತಂಡದ ಸದಸ್ಯರಾದ ಯೂಸುಫ್ ರೆಂಜಿಲಾಡಿ, ಅ‌ನಂತರಾಮ್ ಹಾಗೂ ಶೋಭರಾಜ್ ರವರ ಆಕ್ರಮಣಕಾರಿ ಬ್ಯಾಟಿಂಗ್ ಎದುರಾಳಿ ತಂಡದಲ್ಲಿ ನಡುಕ ಹುಟ್ಟಿಸಿತ್ತು.

ಸ್ಲೋ ಬೈಕ್ ರೇಸ್ ನಲ್ಲಿ ಮಂಗಳೂರಿಗರನ್ನು ನಾಚಿಸಿದ ಲೋಕೇಶ್ ಬನ್ನೂರು
ಸ್ಲೋ ಬೈಕ್ ರೇಸ್ ನಲ್ಲಿ ಭಾಗವಹಿಸಿದ ಸುದ್ದಿ ಬಿಡುಗಡೆಯ ಲೋಕೇಶ್ ಬನ್ನೂರು ರವರು ಅತ್ಯಂತ ಚಾಣಾಕ್ಷತೆ ಚಾಕಚಕ್ಯತೆಯಿಂದ ಬೈಕ್ ನಡೆದಾಡಿಸಿ ಮಂಗಳೂರಿನ ಈ ಹಿಂದಿನ ದಾಖಲೆಯನ್ನು ಮುರಿದು ವಿಜಯಿಯಾದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.