HomePage_Banner
HomePage_Banner

ಅಪಘಾತಕ್ಕೊಳಗಾಗಿದ್ದ ಪುತ್ತೂರು ತಹಶೀಲ್ದಾರ್ ಜೀಪು ಚಾಲಕ ಮೃತ್ಯು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
                                 ದೇವದಾಸ್ ನಾಯ್ಕ

ಪುತ್ತೂರು: ಕಬಕದಲ್ಲಿ ಮಾ.6ರಂದು ಕಾರು ಮತ್ತು ಟಿಪ್ಪರ್ ನಡುವೆ ಅಪಘಾತಕ್ಕಕೊಳಗಾಗಿ ಗಂಭೀರ ಗಾಯಗೊಂಡಿದ್ದು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರು ಚಾಲಕ ಪುತ್ತೂರು ತಹಶೀಲ್ದಾರ್ ಕಚೇರಿ ಜೀಪು ಚಾಲಕ ದೇವದಾಸ್ ನಾಯ್ಕ(58ವ)ರವರು ಮಾ.14 ರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಸಾಮೆತ್ತಡ್ಕ ನಿವಾಸಿ ದೇವದಾಸ್ ನಾಯ್ಕರವರು ಮಾ.6ರಂದು ಮನೆ ಮಂದಿ ಶುಭ ಕಾರ್ಯಕ್ಕೆ ಹೋಗಿ ಪುತ್ತೂರಿಗೆ ಬರುತ್ತಿದ್ದ ವೇಳೆ ಕಬಕ ಸಮೀಪ ಕಾರು ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿತ್ತು.

ಡಿಕ್ಕಿಯ ರಭಸಕ್ಕೆ ದೇವದಾಸ್‌ರವರಿಗೆ ಗಂಭೀರ ಗಾಯವಾಗಿತ್ತು. ಅವರ ಪತ್ನಿ ಕಮಲ, ಸಂಬಂಧಿಕಾರದ ಪರಮೇಶ್ವರಿ ಪುತ್ತೂರು ಮಹಾವೀರ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಗಂಭೀರ ಗಾಯಗೊಂಡಿದ್ದ ದೇವದಾಸ್‌ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.

ಮೃತರು 1984 ರಲ್ಲಿ ಸರಕಾರಿ ಸೇವೆಗೆ ಸೇರಿದ್ದರು. ಪುತ್ತೂರು ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಸೇವೆಸಲ್ಲಿಸಿದ್ದರು. ಮೃತರು ಪತ್ನಿ ಕಮಲ, ಪುತ್ರ ಕೌಶಿಕ್, ಪುತ್ರಿಯರಾದ ಮನಶ್ರೀ, ನಮಿತಾ ಮತ್ತು ಸಹೋದರ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

About The Author

Related posts

1 Comment

  1. ಸುದರ್ಶನ್

    ನನ್ನ ಮಿತ್ರರಾದ ದೇವದಾಸ್ ನಾಯ್ಕ್ ರವರ ಆತ್ಮ ಕ್ಕೆ ಶಾಂತಿ ದೊರಕಲಿ. ಅಗಲಿದ ಕುಟುಂಬಕ್ಕೆ ದುಖ ಸಹಿಸಿಕೊಳ್ಳುವ ಶಕ್ತಿ ಸಿಗಲಿ

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.