ಪುತ್ತೂರು ಜಾತ್ರೆ: ಕೊಡಿಪ್ಪಾಡಿಯಲ್ಲಿ ಜನಮನ ರಂಜಿಸಿದ ಗಾನಸಿರಿ ಸ್ವರಾಭಿಷೇಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಕಟ್ಟೆ ಪೂಜೆಯ ಸಂದರ್ಭದಲ್ಲಿ   ದ್ವಾರದ ಬಳಿ ಕಹಳೆ ನ್ಯೂಸ್ ಅರ್ಪಿಸಿದ ಗಾನಸಿರಿ ಕಿರಣ್ ಕುಮಾರ್ ಮತ್ತು ಬಳಗದ ಸುಮಧುರ ಗೀತೆಗಳ ಸಂಗೀತ ಕಾರ್ಯಕ್ರಮ ಸ್ವರಾಭಿಷೇಕ ನಡೆಯಿತು. ಖ್ಯಾತ ಗಾಯಕ ಕಿರಣ್ ಕುಮಾರ್ ಗಾನಸಿರಿ, ಯಶವಂತ ಉಡುಪಿ ಇವರೊಂದಿಗೆ ಗಾನಸಿರಿಯ ಸುಪ್ರಸಿದ್ಧ ಗಾಯಕ-ಗಾಯಕಿಯರಾದ ಶ್ರೀ ಲಕ್ಷ್ಮೀ, ವಿಶ್ಮಿತಾ, ವಿಜಯ ಶ್ರೀ, ವರುಣ್ ಕುಮಾರ್ ಜೊತೆ ಸ್ಟಾರ್ ಸುವರ್ಣ ವಾಹಿನಿಯ ಡ್ಯಾನ್ಸ್ ಖ್ಯಾತಿಯ ದೀಕ್ಷಾ ರೈ ಇವರುಗಳು ಗಾಯನ ಮತ್ತು ನೃತ್ಯದ ಮೂಲಕ ಸಂಗೀತ ರಸಿಕರನ್ನು ರಂಜಿಸಿದರು.

ಕಹಳೆ ನ್ಯೂಸ್‌ನ ಪ್ರಧಾನ ಸಂಪಾದಕರಾದ ಶ್ಯಾಮ ಸುದರ್ಶನ್ ಹೊಸಮೂಲೆ ಮತ್ತು ಖ್ಯಾತ ವೈದ್ಯ ರವಿ ನಾರಾಯಣ ಭಟ್‌ರವರು ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ವರ್ಷದ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಬಿಂದು ಶಂಕರ ಭಟ್ ಹಿರಿಯ ವೈದ್ಯರಾದ ಶ್ರೀಪತಿ ರಾವ್ ಖ್ಯಾತ ನ್ಯಾಯವಾದಿ ಶ್ರೀ ಮಹೇಶ್ ಕಜೆ , ಉದ್ಯಮಿ ಸಹಜ್ ರೈ ಸಹಿತ ಹಲವು ಗಣ್ಯರು ವಿಶೇಷ ಅಭ್ಯಾಗತರಾಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಿಮ್ಮೇಳ ಕಲಾದವಿದರಾಗಿ ಕೀಬೋರ್ಡ್‌ನಲ್ಲಿ ಅರುಣ್‌ರಾಯ್ ಉಡುಪಿ, ರಿದಂ ಪ್ಯಾಚ್‌ನಲ್ಲಿ ವಾಮನ್ ಉಡುಪಿ ಮತ್ತು ತಬಲಾದಲ್ಲಿ ಪ್ರಜ್ವಲ್ ಬನ್ನಂಜೆ ಸಹಕರಿಸಿದರು. ಯಶವಂತ್ ಉಡುಪಿ ಇವರು ಗಾಯನದ ಜೊತೆ ಕಾರ್ಯಕ್ರಮ ನಿರೂಪಣೆ ಮಾಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.