ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕೃತ, ತ್ರೇತ, ದ್ವಾಪರ, ಕಲಿ ಹೀಗೆ ಈ ನಾಲ್ಕೂ ಯುಗಗಳಲ್ಲೂ ಭಗವಂತನ ಸಾಕ್ಷಾತ್ಕಾರವಾಗಿದೆ. ಇದಕ್ಕೆ ನೋಡುವ ಕಣ್ಣು ಬೇಕು. ಕೇಳುವ ಕಿವಿ ಬೇಕು ಅಷ್ಟೆ. ಭಗವಂತ ಎಲ್ಲೆಲ್ಲೂ ಇದ್ದಾನೆ. ಅವನು ಸಾಕಾರ, ನಿರಾಕಾರ, ಅದೃಶ್ಯ, ಅನಂತ ಮೂರ್ತಿ, ಅಣು ರೇಣು, ತೃಣ, ಕಾಷ್ಠಗಳಲ್ಲಿದ್ದಾನೆ, ಸತ್ಯ. ಆದರೆ ಕೇವಲ ಮಠ, ಮಂದಿರ, ಗುಡಿ ಗೋಪುರ ಹೀಗೆ ನಾಲ್ಕು ಗೋಡೆಗಳ ಮಧ್ಯದಲ್ಲಲ್ಲ. ನಮ್ಮ ನಮ್ಮ ಹೃದಯ ದೇಗುಲದಲ್ಲಿ ಅವನನ್ನು ನೆಲೆಗೊಳಿಸಬೇಕು, ಸ್ಥಿರಗೊಳಿಸಬೇಕು. ಆಗ ಮಾತ್ರವೇ ಮನುಷ್ಯ ಜೀವನದ ಪಾರಮಾರ್ಥಿಕ ಅರ್ಥಕ್ಕೊಂದು ಸತ್ಯವಾದ ಶಾಶ್ವತವಾದ ನೆಲೆ ಕಂಡುಕೊಂಡತಾದೀತು. ಹುಟ್ಟು ಅನಿವಾರ್ಯ, ಸಾವು ನಿಶ್ಚಿತ. ಇವೆರಡರ ನಡುವಿನ ಜೀವನ ಸಾರ್ಥಕವನ್ನು ಪಡೆಯಲು ಭಗವದನುಗ್ರಹ ಅತೀ ಅಗತ್ಯ.

ದೇವರು ನಿನ್ನೆಡೆಗೆ ಸಾಮಾನ್ಯ ರೂಪ ಧರಿಸಿಯೋ, ಸಂಸಾರಿ ವೇಷ ಧರಿಸಿಯೋ ಬರಬಹುದು. ಆತನನ್ನು ನೋಡಲು ನಿನಗೆ ಸಂಸ್ಕಾರವಿರಬೇಕು, ಯೋಗಭಾಗ್ಯವಿರಬೇಕು. ತಾಮಸಗುಣದವನಿಗೆ ಆತ ದೊರಕನು. ಸತ್ಯವನ್ನೇ ಹೇಳಬೇಕು. ಪ್ರೀತಿಯನ್ನುಂಟುಮಾಡುವ ಮಾತನ್ನೇ ಇತರರಿಗೆ ಹೇಳಬೇಕು. ಆದರೆ ಪ್ರಿಯವಲ್ಲದ ಸತ್ಯವನ್ನಾಗಲೀ, ಪ್ರಿಯವೆಂದು ಸುಳ್ಳನ್ನಾಗಲೀ ಹೇಳಬಾರದು. ಇದು ಪ್ರಾಚೀನ ಕಾಲದಿಂದಲೂ ಬಂದ ಸಂಪ್ರದಾಯ. ಹಸಿದವನಿಗೆ ಅನ್ನವನ್ನಿಟ್ಟು ತಣಿಸಿದರೆ, ತೃಪ್ತಿಪಡಿಸಿದರೆ ಅದರಿಂದ ಭಗವಂತನು ತೃಪ್ತನಾಗುವನು. ಆದ್ದರಿಂದ ಅನ್ನದಾನಕ್ಕಿಂತಲೂ ಮಿಗಿಲಾದ ಮತ್ತೊಂದು ದಾನವು ಈ ಜಗದೊಳಗಿರುವುದಿಲ್ಲ. ಅನ್ನದಿಂದಲೇ ಪ್ರಾಣವು ಎಂಬುದನ್ನು ಸರ್ವಜ್ಞನೇ ಹೇಳಿರುವನು. ಮಾನವನಿಗೆ ನಗುವು ಸಹಜವಾದ ಧರ್ಮ. ಅನ್ಯರನ್ನು ನಗಿಸುವುದು ಪರಧರ್ಮ. ನಗುವನ್ನು ಕೇಳಿ ನಗುವುದು ಅತಿಶಯದ ಧರ್ಮ. ಆದುದರಿಂದ ನಾವು ದೇವರಲ್ಲಿ ನಗುವ, ನಗಿಸುವ, ನಗಿಸಿ, ನಗು ನಗುತ ಬಾಳುವವರನ್ನು ಬೇಡಿಕೊಳ್ಳಬೇಕು.

ಹತ್ತೂರ ಒಡೆಯ ಪುತ್ತೂರ ಮುತ್ತು ಶ್ರೀ ಮಹಾಲಿಂಗೇಶ್ವರನ ಮಹಿಮೆಯೇ ಅಂತಹದ್ದು. ಮಹತೋಭಾರ ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವದಷ್ಟು ಶ್ರೇಷ್ಠವಾದ, ಮಹತ್ತಾದ, ಬೃಹತ್ತಾದ, ವೈಭವಪೂರ್ವವಾದ, ವೈಶಿಷ್ಟಪೂರ್ಣ, ಅರ್ಥವತ್ತಾದ ಮಹೋತ್ಸವ ಇಡೀ ವಿಶ್ವದಲ್ಲೇ ಇಲ್ಲ. ಇಡೀ ವಿಶ್ವದಲ್ಲಿ ಉತ್ಸವ ಕಾಲದಲ್ಲಿ ದೇವರನ್ನು ವೈಭವವನ್ನು ನೋಡುವುದಕ್ಕೆ ದೇವಾಲಯಕ್ಕೆ ತೆರಳಬೇಕಾದರೆ ಪುತ್ತೂರ ಮುತ್ತು ಶ್ರೀ ಮಹಾಲಿಂಗೇಶ್ವರ ದೇವರು ಉತ್ಸವ ಕಾಲದಲ್ಲಿ ಹತ್ತೂರಲ್ಲಿ ಪ್ರತೀ ಮನೆಮನೆಗೂ ವೈಭವಪೂರ್ಣವಾಗಿ, ಭಕ್ತರಿಂದೊಡಗೂಡಿ ತೆರಳಿ ಮೈದೋರಿ ದರುಶನಭಾಗ್ಯವನ್ನೀಯುವುದು ಇಲ್ಲಿಯ ವಿಶೇಷ. ಇದು ಇಡೀ ವಿಶ್ವದಲ್ಲಿಯೇ ಪ್ರಥಮ. ಅದಕ್ಕಾಗಿಯೇ ಪುತ್ತೂರು ಶ್ರೀ ಮಹಾಲಿಂಗೇಶ್ವರ ಹತ್ತೂರಿನ ಒಡೆಯನೆಂದು ಸುಪ್ರಸಿದ್ಧಿ. ಪೊಡವಿಗೊಡೆಯನ ಕರುಣಾಕೃಪಾಕಟಾಕ್ಷಕ್ಕೆ ಮಹತೋಭಾರ ಶ್ರೀ ಮಹಾಲಿಂಗೇಶ್ವರನ ಭಗವದನುಗ್ರಹಕ್ಕೆ ಪಾತ್ರರಾಗಿ ಕೃತಕೃತ್ಯರಾಗೋಣ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.