HomePage_Banner
HomePage_Banner
HomePage_Banner

ಹನುಮಗಿರಿ ಮೇಳದ ಈ ವರ್ಷದ ತಿರುಗಾಟಕ್ಕೆ ಸಂಭ್ರಮದ ತೆರೆ

Puttur_Advt_NewsUnder_1
Puttur_Advt_NewsUnder_1

 

ಡಾ. ಟಿ. ಶ್ಯಾಮ್ ಭಟ್‌ರವರು ಮಾತನಾಡುತ್ತಿರುವುದು

ಹನುಮಗಿರಿ ಮೇಳದಿಂದ ಯಶಸ್ವಿ ತಿರುಗಾಟ -ಡಾ. ಟಿ. ಶ್ಯಾಮ್‌ಭಟ್
ಯಕ್ಷಗಾನದಿಂದ ಧರ್ಮಪ್ರಜ್ಜೆ –ಹರಿನಾರಾಯಣದಾಸ ಅಸ್ರಣ್ಣ
ಯುವಕರು ಕೂಡ ಯಕ್ಷದಾನದತ್ತ ಆಕರ್ಷಿತರಾಗುತ್ತಿರುವುದು ಪರಿವರ್ತನೆಯ ಲಕ್ಷಣ -ಸಹಜ್ ರೈ ಬಳಜ್ಜ
ಮೇಳವು ಯಾವುದೇ ಸಮಸ್ಯೆಗಳಿಲ್ಲದೇ ಸಂಭ್ರಮದ ತೆರೆ ಕಂಡಿದೆ -ನನ್ಯ
ಮೇಳವು ಜನಮನ್ನಣೆ ಗಳಿಸಿದೆ -ಸತ್ಯನಾರಾಯಣ ಭಟ್ ಸೇರಾಜೆ

ಈಶ್ವರಮಂಗಲ: ಈ ವರ್ಷ ನೂತನವಾಗಿ ಉದ್ಘಾಟನೆಗೊಂಡು ತಿರುಗಾಟವನ್ನು ಆರಂಭಿಸಿದ್ದ ಶ್ರೀಕ್ಷೇತ್ರ ಹನುಮಗಿರಿಯ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಮೇಳದ ಈ ವರ್ಷದ ತಿರುಗಾಟದ ಕೊನೆಯ ಸೇವೆ ಬಯಲಾಟ ಮತ್ತು ಶ್ರೀಕ್ಷೇತ್ರದ ಮಹಾದ್ವಾರದ ಉದ್ಘಾಟನೆ, ಸಭಾಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭವು ಮೇ.19ರಂದು ಶ್ರೀಕ್ಷೇತ್ರ ಹನುಮಗಿರಿಯ ಸನ್ನಿಧಿಯಲ್ಲಿ ನಡೆಯಿತು.

ಹನುಮಗಿರಿ ಮೇಳದಿಂದ ಯಶಸ್ವಿ ತಿರುಗಾಟ –ಡಾ. ಟಿ. ಶ್ಯಾಮ್‌ಭಟ್
ಸಭಾಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ, ಯಕ್ಷಕಲಾ ಕಲ್ಪವೃಕ್ಷ ಡಾ. ಟಿ. ಶ್ಯಾಮ್‌ಭಟ್ ರವರು ಮಾತನಾಡಿ ಆರಂಭದ ವರ್ಷದಲ್ಲೇ ಹನುಮಗಿರಿ ಮೇಳವು ಯಶಸ್ವಿ ತಿರುಗಾಟವನ್ನು ಮಾಡಿದೆ, ಕಲಾವಿದರ, ಕಲಾಪೋಷಕರ, ಕಲಾಪ್ರೇಕ್ಷಕರ ಸಹಕಾರದಿಂದ ಯಾವುದೇ ಸಮಸ್ಯೆಗಳಿಲ್ಲದೆ ಮೇಳವು ಉತ್ತಮ ಪ್ರದರ್ಶನವನ್ನು ಕಂಡಿದೆ ಅದಕ್ಕಾಗಿ ಸಹಕರಿಸಿದ ಎಲ್ಲರಿಗೂ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ, ಮುಂದಿನ ವರ್ಷವೂ ಇನ್ನಷ್ಟೂ ಉತ್ತಮ ಪ್ರದರ್ಶನದೊಂದಿಗೆ ಮೇಳದ ತಿರುಗಾಟ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.

ಯಕ್ಷಗಾನದಿಂದ ಧರ್ಮಪ್ರಜ್ಜೆ – ಹರಿನಾರಾಯಣದಾಸ ಅಸ್ರಣ್ಣ
ಸನ್ಮಾನಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹರಿನಾರಾಯಣದಾಸ ಅಸ್ರಣ್ಣರವರು ಮಾತನಾಡಿ ಪ್ರಥಮ ವರ್ಷದ ಯಶಸ್ವಿ ಸಮಾರೋಪವನ್ನು ಕಂಡಿರುವ ಹನುಮಗಿರಿ ಮೇಳವು ಸಭಾಸದರನ್ನು ಸೇರಿಸುವ ಮೇಳವಾಗಿದೆ, ಯಕ್ಷಗಾನದಿಂದ ಕಲಾಪೋಷಣೆಯ ಜತೆಗೆ ಧರ್ಮಪ್ರಜ್ಞೆಯು ಮೂಡುತ್ತದೆ, ಭಗವಂತನ ಒಂದು ರೂಪವೇ ಮಹಾದ್ವಾರ ಅದು ಹನುಮಗಿರಿಯಲ್ಲಿ ಇವತ್ತು ಸಾಕಾರಗೊಂಡಿದೆ, ಭಗವಂತನ ಇಚ್ಛೆಯೊಂದಿಗೆ ಶ್ರೀಕ್ಷೇತ್ರವು ಇನ್ನಷ್ಟು ಸೌಂದರ್ಯ ವರ್ಧನೆ ಹಾಗೂ ಸಾನಿಧ್ಯ ವೃದ್ಧಿಯಾಗಲಿ, ಶ್ರೀಕ್ಷೇತ್ರದ ಬ್ರಹ್ಮವಾಹಕರನ್ನು ಸನ್ಮಾನಿಸಿ ಗೌರವಿಸಿದ್ದು ಅವರ ಸೇವೆಗೆ ನೀಡಿದ ಪ್ರತಿಫಲವಾಗಿದೆ ಎಂದು ಹೇಳಿದರು.

ಯುವಕರು ಕೂಡ ಯಕ್ಷದಾನದತ್ತ ಆಕರ್ಷಿತರಾಗುತ್ತಿರುವುದು ಪರಿವರ್ತನೆಯ ಲಕ್ಷಣ –ಸಹಜ್ ರೈ ಬಳಜ್ಜ
ಮಹಾದ್ವಾರವನ್ನು ಉದ್ಘಾಟನೆಗೊಳಿಸಿದ ಯುವನೇತಾರ, ಉದ್ಯಮಿ ಸಹಜ್ ರೈ ಬಳಜ್ಜರವರು ಮಾತನಾಡಿ ಹಿಂದಿನ ಕಾಲದಲ್ಲಿ ಯಕ್ಷಗಾನ ಪ್ರದರ್ಶನವನ್ನು ನೋಡಲು ಹಿರಿಯರು ಮಾತ್ರ ಆಸಕ್ತರಾಗಿದ್ದರು, ಆದರೆ ಬದಲಾವಣೆಯ ಕಾಲಘಟ್ಟದಲ್ಲಿ ಯುವಕರು ಕೂಡ ಯಕ್ಷಗಾನದತ್ತ ಆಕರ್ಷಿತರಾಗುತ್ತಿದ್ದು ಇದು ಪರಿವರ್ತನೆಯ ಲಕ್ಷಣವಾಗಿದೆ, ಯಕ್ಷಗಾನವು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರಸಿದ್ಧಿಗೊಂಡಿರುವುದು ನಮ್ಮ ನೆಲಕ್ಕೆ ಸಿಕ್ಕ ಗೌರವವಾಗಿದೆ, ಇಂತಹ ಅದ್ಭುತ ಕಲೆಗೆ ಯಕ್ಷಕಲಾ ಕಲ್ಪವೃಕ್ಷ ಎಂದೇ ಪ್ರಸಿದ್ಧಿಗೊಂಡಿರುವ ಡಾ. ಟಿ. ಶ್ಯಾಮ್ ಭಟ್‌ರವರು ನಿರಂತರ ಪ್ರೋತ್ಸಾಹ ನೀಡುತ್ತಿದ್ದು ಕಲಾವಿದರ ಕುಟುಂಬಕ್ಕೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು.

ಮೇಳವು ಯಾವುದೇ ಸಮಸ್ಯೆಗಳಿಲ್ಲದೇ ಸಂಭ್ರಮದ ತೆರೆ ಕಂಡಿದೆ – ನನ್ಯ
ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯರವರು ಮಾತನಾಡಿ ಈ ವರ್ಷ ಹೊಸದಾಗಿ ಆರಂಭಗೊಂಡಿದ್ದ ಹನುಮಗಿರಿ ಮೇಳವು ಯಕ್ಷಕಲಾ ಕಲ್ಪವೃಕ್ಷ ಡಾ. ಟಿ. ಶ್ಯಾಮ್ ಭಟ್‌ರವರ ಮುಂದಾಳತ್ವದಲ್ಲಿ ಮೊದಲ ಪ್ರಯತ್ನದಲ್ಲೇ ಸಾಕಷ್ಟು ಯಶಸ್ಸನ್ನು ಗಳಿಸಿದೆ, ಹನುಮಗಿರಿ ಮೇಳದ ತಿರುಗಾಟದಿಂದಾಗಿ ನಮ್ಮೂರಿನಲ್ಲಿ ಮಾತ್ರವಲ್ಲದೇ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ಕರ್ನಾಟಕ ಮತ್ತು ಕೇರಳ ರಾಜ್ಯದ ವಿವಿದೆಡೆಯು ಶ್ರೀಕೇತ್ರದ ಹೆಸರು ಪಸರಿಸಿದೆ, ಗವರ್ನರ್‌ರವರ ಕಛೇರಿಯಲ್ಲೂ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದೆ, ಮೇಳದ ಪ್ರಸಿದ್ಧಿಯೊಂದಿಗೆ ಕಲಾವಿದರಿಗೂ ಒಳ್ಳೆಯ ಹೆಸರು ಬಂದಿದೆ, ಆ ಮೂಲಕ ಆರಂಭದ ವರ್ಷದಲ್ಲೇ ಮೇಳದಲ್ಲಿ ಯಾವುದೇ ಸಮಸ್ಯೆ, ಅಡೆತಡೆಗಳು ಬಾರದೇ ಉತ್ತಮ ರೀತಿಯಲ್ಲಿ ಸಂಭ್ರಮದ ತೆರೆಯನ್ನು ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು. ಜತೆಗೆ ಈ ಸುಸಂದರ್ಭದಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ಶ್ರೀಕ್ಷೇತ್ರದ ಮಹಾದ್ವಾರವನ್ನು ಕೂಡ ಉದ್ಘಾಟನೆಗೊಳಿಸಲಾಗಿದೆ ಮತ್ತು ಶ್ರೀಕ್ಷೇತ್ರ ಮಾತ್ರವಲ್ಲದೇ 125ಕ್ಕೂ ಹೆಚ್ಚು ದೇವಾಲಯಗಳಲ್ಲಿ ಬ್ರಹ್ಮವಾಹಕರಾಗಿ ಸೇವೆ ಮಾಡಿರುವ ಮೂರ್ತಿಪ ರಾಧಾಕೃಷ್ಣ ಪುತ್ತೂರಾಯರಿಗೆ ಅವರ 60 ಸಂವತ್ಸರಗಳು ಪೂರ್ತಿಗೊಳ್ಳುತ್ತಿರುವ ಸಂದರ್ಭದಲ್ಲೇ ಸನ್ಮಾನವನ್ನು ಮಾಡಿ ಗೌರವಿಸಲಾಗಿದೆ ಎಂದು ನನ್ಯ ಅಚ್ಚುತ ಮೂಡೆತ್ತಾಯರು ಹೇಳಿದರು.

ಮೇಳವು ಜನಮನ್ನಣೆ ಗಳಿಸಿದೆ  – ಸತ್ಯನಾರಾಯಣ ಭಟ್ ಸೇರಾಜೆ
ಹನುಮಗಿರಿ ಮೇಳದ ಪರವಾಗಿ ಕೃತಜ್ಞತೆಯ ಮಾಡುಗಳನ್ನಾಡಿದ ಸತ್ಯನಾರಾಯಣ ಭಟ್ ಸೇರಾಜೆಯವರು ಆರಂಭದ ವರ್ಷದಲ್ಲೇ ಹನುಮಗಿರಿ ಮೇಳವು ಕರ್ನಾಟಕ ಮತ್ತು ಕೇರಳ ರಾಜ್ಯದ ವಿವಿಧೆಡೆ ತಿರುಗಾಟವನ್ನು ಮಾಡಿ ಸಾಕಷ್ಟು ಪ್ರಸಿದ್ದಿ ಮತ್ತು ಜನಮನ್ನಣೆಯನ್ನು ಗಳಿಸಿದೆ, ಮೇಳದ ಯಶಸ್ವಿಗೆ ಹಿಮ್ಮೇಳ, ಮುಮ್ಮೇಳದ ಕಲಾವಿದರ ಪರಿಶ್ರಮದೊಂದಿಗೆ ವಿವಿಧ ಮಠಾಧೀಶರ, ಸ್ವಾಮೀಜಿಗಳ ಬೆಂಬಲ, ಮಾರ್ಗದರ್ಶನ, ಹನುಮಗಿರಿಯ ಆಡಳಿತ ಮಂಡಳಿಯ ಸಹಕಾರ, ಮುಖ್ಯವಾಗಿ ಕಲಾಪೋಷಕರ, ಕಲಾಪ್ರೇಕ್ಷಕರ ನಿರಂತರ ಪ್ರೋತ್ಸಾಹವೇ ಮೇಳದ ಯಶಸ್ಸಿನ ಕೈಗನ್ನಡಿಯಾಗಿದೆ ಎಂದು ಹೇಳಿದರು.

ಅಶ್ವಥ್ ಪ್ರಾರ್ಥಿಸಿದರು. ಜಿ.ಕೆ ಮಹಾಬಲೇಶ್ವರ ಭಟ್, ನಾಗರಾಜ ನಡುವಡ್ಕ, ಮಹಾಲಿಂಗ ಪಾಟಾಳಿ, ಆನಂದ ರೈ ಸಾಂತ್ಯರವರು ಅತಿಥಿಗಳನ್ನು ಗೌರವಿಸಿದರು. ಶ್ರೀಕ್ಷೇತ್ರ ಹನುಮಗಿರಿಯ ಧರ್ಮದರ್ಶಿ ಶಿವರಾಮ ಪಿ. ವಂದಿಸಿದರು. ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ ಕಾರ್ಯಕ್ರಮ ನಿರೂಪಿಸಿದರು.

ಹನುಮಗಿರಿ ಕ್ಷೇತ್ರದ ಮಹಾದ್ವಾರ ಉದ್ಘಾಟನೆ:
ಒಂದಲ್ಲ ಒಂದು ಕಾರಣದಿಂದ ನಾಡಿನುದ್ದಗಲಕ್ಕೂ ಭಕ್ತ ಸಮೂಹವನ್ನು ತನ್ನತ್ತ ಸೆಳೆಯುತ್ತಲೇ ಇರುವ ಶ್ರೀಕ್ಷೇತ್ರ ಹನುಮಗಿರಿಯಲ್ಲಿ ಮಹಾದ್ವಾರವೊಂದು ಉದ್ಘಾಟನೆಗೊಳ್ಳುವ ಮೂಲಕ ಕ್ಷೇತ್ರದ ಸೌಂದರ್ಯ ಇನ್ನಷ್ಟು ವೃದ್ಧಿಗೊಂಡಿದೆ. ಹೌದು..! ಶ್ರೀಕ್ಷೇತ್ರ ಹನುಮಗಿರಿಯನ್ನು ಪ್ರವೇಶಿಸುವ ಮುಂಭಾಗದಲ್ಲಿ ವಿನೂತನ ಶೈಲಿಯಲ್ಲಿ ಬೃಹದಾಕಾರವಾಗಿ ನಿರ್ಮಾಣಗೊಂಡಿದ್ದ ಮಹಾದ್ವಾರ ಮೇ.19ರಂದು ಮುಸ್ಸಂಜೆಯ ವೇಳೆಗೆ ಉದ್ಘಾಟನೆ ಮಾಡಲಾಯಿತು. ಯುವನೇತಾರ, ಉದ್ಯಮಿ ಸಹಜ್ ರೈ ಬಳಜ್ಜರವರು ರಿಬ್ಬನ್ ಕತ್ತರಿಸಿ ಮಹಾದ್ವಾರವನ್ನು ಉದ್ಘಾಟಿಸಿದರು, ಹರಿಣಾಕ್ಷಿ ಜೆ. ರೈ ಮತ್ತು ದೀಕ್ಷಾ ಸಹಜ್ ರೈಯವರು ದೀಪ ಬೆಳಗಿಸಿದರು, ಧಾರ್ಮಿಕ ಮುಂದಾಳು ಎಸ್.ಬಿ ಜಯರಾಮ ರೈಯವರು ತೆಂಗಿನ ಕಾಯಿ ಒಡೆದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹರಿನಾರಾಯಣದಾಸ ಅಸ್ರಣ್ಣ, ಶ್ರೀಕ್ಷೇತ್ರದ ಮಹಾಪೋಷಕ ಮಹಾಬಲೇಶ್ವರ ಭಟ್, ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಧರ್ಮದರ್ಶಿ ಶಿವರಾಮ ಪಿ, ಶಂಕರಿ ಅಮ್ಮ, ಸರೋಜಿನಿ ನಾಗಪ್ಪಯ್ಯ ಮೇನಾಲ, ಮಹಾಲಿಂಗ ಪಾಟಾಳಿ, ದೇವಿಪ್ರಕಾಶದ ಶೆಟ್ಟಿ ಕುತ್ಯಾಳ, ಶಿವರಾಮ ಶರ್ಮ, ನಾಗರಾಜ್ ನಡುವಡ್ಕ ಸೇರಿದಂತೆ ಅನೇಕ ಭಕ್ತಾದಿಗಳು ಉಪಸ್ಥಿತರಿದ್ದರು.

ಸಹಜ್ ರೈಯವರು ಮಹಾದ್ವಾರವನ್ನು ಉದ್ಘಾಟನೆ ಮಾಡುತ್ತಿರುವುದು

ಮೂರ್ತಿಪ ರಾಧಾಕೃಷ್ಣ ಪುತ್ತೂರಾಯರಿಗೆ ಸನ್ಮಾನ:
ಕಳೆದ 35 ವರ್ಷಗಳಿಂದ ಜಿಲ್ಲೆಯ 125ಕ್ಕೂ ಅಧಿಕ ದೇವಸ್ಥಾನಗಳಲ್ಲಿ ದೇವರ ಉತ್ಸವಮೂರ್ತಿಯನ್ನು ಹೊರುವ(ಮೂರ್ತಿಪ) ಸೇವೆಯನ್ನು ಮಾಡುತ್ತಿರುವ ಮುಂಡೂರು ಆಲಡ್ಕ ನಿವಾಸಿ ಮೂರ್ತಿಪ ರಾಧಾಕೃಷ್ಣ ಪುತ್ತೂರಾಯರಿಗೆ ಶ್ರೀಕ್ಷೇತ್ರ ಹನುಮಗಿರಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಹರಿನಾರಾಯಣದಾಸ ಅಸ್ರಣ್ಣರವರು ರಾಧಾಕೃಷ್ಣ ಪುತ್ತೂರಾಯರಿಗೆ ಶಾಲು ಹೊದಿಸಿ ಪೇಟ ತೊಡಿಸಿ ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆ, ಸನ್ಮಾನಪತ್ರ, ದೇವರ ಫೋಟೋ, ಬಂಗಾರದ ಉಂಗುರ ನೀಡಿ ಸನ್ಮಾನಿಸಿದರು. ಶಿವರಾಮಶರ್ಮ ಕತ್ರಿಬೈಲುರವರು ಸನ್ಮಾನಪತ್ರ ವಾಚಿಸಿದರು.

ರಾಧಾಕೃಷ್ಣ ಪುತ್ತೂರಾಯರಿಗೆ ಸನ್ಮಾನ

ಹನುಮಗಿರಿ ಮೇಳದ ಈ ವರ್ಷದ ತಿರುಗಾಟಕ್ಕೆ ಸಂಭ್ರಮದ ತೆರೆ:
ಈ ಬಾರಿ ಉದ್ಘಾಟನೆಗೊಂಡಿದ್ದ ಶ್ರೀಕ್ಷೇತ್ರ ಹನುಮಗಿರಿಯ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಮೇಳದ ಪ್ರಥಮ ವರ್ಷದ ತಿರುಗಾಟದ ಕೊನೆಯ ಸೇವೆಯಾಟವನ್ನು ಶ್ರೀಕ್ಷೇತ್ರದಲ್ಲೇ ಅದ್ಧೂರಿಯಾಗಿ ನಡೆಸುವ ಮೂಲಕ ಈ ವರ್ಷದ ತಿರುಗಾಟಕ್ಕೆ ಸಂಭ್ರಮದ ತೆರೆಯನ್ನು ಕಂಡಿದೆ. ಕೊನೆಯ ಸೇವೆ ಬಯಲಾಟದ ಅಂಗವಾಗಿ ಏಕಾದಶಿ ಮಹಾತ್ಮೆ, ಮಾಯಾತಿಲೋತ್ತಮೆ, ಸೀತಾಕಲ್ಯಾಣ ಪ್ರಸಂಗವನ್ನು ಆಡಿತೋರಿಸುವುದರ ಮೂಲಕ ಈ ವರ್ಷದ ತಿರುಗಾಟಕ್ಕೆ ಅಂತ್ಯಹಾಡಲಾಯಿತು. ಸಾವಿರಕ್ಕೂ ಅಧಿಕ ಕಲಾಭಿಮಾನಿಗಳು ಯಕ್ಷಗಾನ ವೀಕ್ಷಿಸಿದರು.

ಯಕ್ಷಗಾನ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.