HomePage_Banner
HomePage_Banner
HomePage_Banner

ನೆಟ್ಟಣಿಗೆ ಮುಡ್ನೂರು ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿಗೆ 942 ಲೀಡ್ – ಲೋಕೇಶ್ ಚಾಕೋಟೆ

Puttur_Advt_NewsUnder_1
Puttur_Advt_NewsUnder_1

ಕಾವು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನೆಟ್ಟಣಿಗೆ ಮುಡ್ನೂರು ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರುರವರು ಒಟ್ಟು 13523 ಮತಗಳನ್ನು ಪಡೆದು 942 ಮತಗಳ ಮುನ್ನಡೆ ಪಡೆದುಕೊಂಡಿದ್ದಾರೆ ಎಂದು ನೆಟ್ಟಣಿಗೆ ಮುಡ್ನೂರು ಜಿ.ಪಂ ಕ್ಷೇತ್ರದ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲೋಕೇಶ್ ಚಾಕೋಟೆಯವರು ತಿಳಿಸಿದ್ದಾರೆ. ಕಳೆದ ಬಾರಿ ಹಿನ್ನಡೆ ಅನುಭವಿಸಿದ್ದ ಈ ಕ್ಷೇತ್ರದಲ್ಲಿ ಈ ಬಾರಿ ನಿರೀಕ್ಷೆಗಿಂತಲೂ ಹೆಚ್ಚಿನ ಮತಗಳು ಬಿಜೆಪಿಗೆ ದಕ್ಕಿದ್ದು ಒಳ್ಳೆಯ ಅಂತರದ ಮುನ್ನಡೆಯನ್ನು ಗಳಿಸಿದ್ದೇವೆ, ಚಲಾವಣೆಯಾದ ಒಟ್ಟು 27228 ಮತಗಳಲ್ಲಿ ಬಿಜೆಪಿ 13523 ಮತಗಳನ್ನು ಪಡೆದು942 ಮತಗಳ ಮುನ್ನಡೆ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.

8 ಗ್ರಾಮಗಳಲ್ಲಿ 7 ಗ್ರಾಮಗಳಲ್ಲಿ ಮುನ್ನಡೆ:
ನೆ.ಮುಡ್ನೂರು ಜಿ.ಪಂ ಕ್ಷೇತ್ರದಲ್ಲಿ ನೆಟ್ಟಣಿಗೆ ಮುಡ್ನೂರು, ಬಡಗನ್ನೂರು, ಪಡುವನ್ನೂರು, ಅರಿಯಡ್ಕ, ಮಾಡ್ನೂರು, ಕೊಳ್ತಿಗೆ, ಕೆಯ್ಯೂರು, ಕೆದಂಬಾಡಿ ಗ್ರಾಮಗಳು ಸೇರಿ ಒಟ್ಟು 8 ಗ್ರಾಮಗಳಿದ್ದು ಇದರಲ್ಲಿ ನೆ.ಮುಡ್ನೂರು ಹೊರತುಪಡಿಸಿ ಉಳಿದೆಲ್ಲಾ ಗ್ರಾಮಗಳಲ್ಲೂ ಬಿಜೆಪಿಗೆ ಮುನ್ನಡೆ ಸಿಕ್ಕಿದೆ. ಬೂತ್‌ವಾರು ಲೆಕ್ಕದಲ್ಲಿ ಒಟ್ಟು 39 ಬೂತ್‌ಗಳ ಪೈಕಿ 24ರಲ್ಲಿ ಮುನ್ನಡೆ ಸಿಕ್ಕಿದೆ.

ಗ್ರಾಮವಾರು ಅತೀ ಹೆಚ್ಚು ಮುನ್ನಡೆ – ಅರಿಯಡ್ಕ
ಗ್ರಾಮವಾರು ಲೆಕ್ಕದಲ್ಲಿ ಅರಿಯಡ್ಕ ಗ್ರಾಮದಲ್ಲಿ ಬಿಜೆಪಿಗೆ ಅತೀ ಹೆಚ್ಚು ಮುನ್ನಡೆ ಸಿಕ್ಕಿದೆ, 4 ಬೂತ್‌ಗಳನ್ನು ಹೊಂದಿರುವ ಅರಿಯಡ್ಕದಲ್ಲಿ 1712 ಮತಗಳನ್ನು ಪಡೆದುಕೊಂಡಿರುವ ಬಿಜೆಪಿಯು 550 ಮತಗಳ ಮುನ್ನಡೆಯನ್ನು ಪಡೆದುಕೊಂಡಿದೆ.

ಬೂತ್‌ವಾರು ಅತೀ ಹೆಚ್ಚು ಮುನ್ನಡೆ – ನನ್ಯ ಬೂತ್
ಬೂತ್‌ವಾರು ಲೆಕ್ಕದಲ್ಲಿ ಮಾಡ್ನೂರು ಗ್ರಾಮದ ನನ್ಯ ಬೂತ್(ವಾರ್ಡ್‌ನಂ.200)ನಲ್ಲಿ ಬಿಜೆಪಿಗೆ ಅತೀ ಹೆಚ್ಚು ಮುನ್ನಡೆ ಸಿಕ್ಕಿದೆ, 1018 ಮತ ಚಲಾವಣೆಗೊಂಡಿದ್ದ ಈ ಬೂತ್‌ನಲ್ಲಿ ಬಿಜೆಪಿಯು 675 ಮತಗಳೊಂದಿಗೆ 367 ಮತಗಳ ಮುನ್ನಡೆ ಪಡೆದು ಅತಿ ಹೆಚ್ಚು ಮುನ್ನಡೆ ಪಡೆದ ಬೂತ್ ಇದಾಗಿದೆ.

ಗ್ರಾಮವಾರು ಅತೀ ಹೆಚ್ಚು ಮತ – ಕೊಳ್ತಿಗೆ
ಗ್ರಾಮವಾರು ಲೆಕ್ಕದಲ್ಲಿ ಕೊಳ್ತಿಗೆಯಲ್ಲಿ ಬಿಜೆಪಿಗೆ ಅತೀ ಹೆಚ್ಚು ಮತಗಳು ಲಭಿಸಿದೆ. 6 ಬೂತ್‌ಗಳನ್ನು ಹೊಂದಿರುವ ಈ ಗ್ರಾಮದಲ್ಲಿ ಬಿಜೆಪಿಗೆ 2257 ಮತಗಳು ಸಿಕ್ಕಿದೆ.

ಬೂತ್‌ವಾರು ಅತೀ ಹೆಚ್ಚು ಮತ – ಅರಿಯಡ್ಕ 1ನೇ ಬೂತ್
ಬೂತ್‌ವಾರು ಲೆಕ್ಕದಲ್ಲಿ ಅರಿಯಡ್ಕ 1ನೇ ಬೂತ್(ವಾರ್ಡ್‌ನಂ.177)ನಲ್ಲಿ ಬಿಜೆಪಿಗೆ ಅತೀ ಹೆಚ್ಚು ಮತ ಸಿಕ್ಕಿದೆ, 1057 ಮತ ಚಲಾವಣೆಗೊಂಡಿದ್ದ ಈ ಬೂತ್‌ನಲ್ಲಿ ಬಿಜೆಪಿಯು 679 ಮತಗಳನ್ನು ಪಡೆದು ಅತಿ ಹೆಚ್ಚು ಮತಗಳನ್ನು ಪಡೆದ ಬೂತ್ ಇದಾಗಿದೆ ಎಂದು ಲೋಕೇಶ್ ಚಾಕೋಟೆ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.