HomePage_Banner
HomePage_Banner
HomePage_Banner

ಪೂಜಾ ಸಾಮಾಗ್ರಿಗಳ ಮಳಿಗೆ ‘ತ್ರಿನೇತ್ರ ಪೂಜಾ ಸ್ಟೋರ್ಸ್’ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

 


ಪುತ್ತೂರು: ಎಲ್ಲಾ ರೀತಿಯ ಪೂಜಾ ಸಾಮಾಗ್ರಿಗಳ ಮಳಿಗೆ ‘ತ್ರಿನೇತ್ರ ಪೂಜಾ ಸ್ಟೋರ್ಸ್’ ಜು.12ರಂದು ಬೊಳುವಾರು ಹಿರಣ್ಯ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು. ಸಂಸ್ಥೆಯನ್ನು ಬ್ರಹ್ಮಶ್ರೀ ವೇದಮೂರ್ತಿ ಪಳ್ಳತ್ತಡ್ಕ ಶಂಕರ ನಾರಾಯಣ ಭಟ್‌ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಮ್ಮದು ಧರ್ಮ ಪ್ರಧಾನವಾದ ದೇಶ. ಇಲ್ಲಿ ಧಾರ್ಮಿಕ ಆಚರಣೆಗಳಿಗೆ ಬಹಳಷ್ಟು ಮಹತ್ವವಿದೆ. ಮಕ್ಕಳಿಗೆ ಸಂಸ್ಕಾರ ಹಾಗೂ ಧಾರ್ಮಿಕ ಸಂದೇಶಗಳನ್ನು ನೀಡುವ ಅಗತ್ಯತೆಯಿದೆ ಎಂದರು. ಪ್ರತಿಯೊಂದು ಮನೆಗಳಲ್ಲಿಯೂ ಪೂಜೆ, ಪುನಸ್ಕಾರಗಳನ್ನು ನೆರವೇರಿಸಿದಾಗ ಜನರು ಪೊಲೀಸ್, ಕೋರ್ಟ್‌ಗಳಿಗೆ ಅಲೆದಾಡುವ ಆವಶ್ಯಕತೆಯಿಲ್ಲ. ಧಾರ್ಮಿಕ ಕಾರ್ಯಕ್ರಮಗಳಿಗೆ ಆವಶ್ಯಕವಾದ ಎಲ್ಲಾ ಸಾಮಾಗ್ರಿಗಳು ಒಂದೇ ಕಡೆ ಲಭ್ಯವಾಗುವ ಮೂಲಕ ಜನರಿಗೆ ಒಂದು ಉತ್ತಮ ಅವಕಾಶವನ್ನು ಒದಗಿಸುವ ನಿಮ್ಮ ಪ್ರಯತ್ನ ಸಫಲವಾಗಲಿ ಎಂದು ಹಾರೈಸಿದರು.

ಈಶ್ವರಮಂಗಲ ಹನುಮಗಿರಿಯ ಧರ್ಮಶ್ರೀ ಪ್ರತಿಷ್ಠಾನದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಮಾತನಾಡಿ, ಪೂಜಾ ಸಾಮಾಗ್ರಿಗಳಿಗೆ ಆವಶ್ಯಕವಾದ ಸಾಹಿತ್ಯಗಳನ್ನು ಜೋಡಿಸುವುದು ಕಷ್ಟದ ಕೆಲಸ. ಆದರೆ ಇನ್ನು ಪೂಜಾ ಸಾಹಿತ್ಯಗಳಿಗಾಗಿ ಅಲೆದಾಡಬೇಕಾದ ಆವಶ್ಯಕತೆಯಿಲ್ಲ. ಸಣ್ಣ ರೀತಿಯ ಪೂಜೆಯಿಂದ ಹಿಡಿದು ಬ್ರಹ್ಮಕಲಶದಂತಹ ದೊಡ್ಡ ಕಾರ್ಯಕ್ರಮಗಳಿಗೆ ಅಗತ್ಯವಾದ ಎಲ್ಲಾ ರೀತಿಯ ಪೂಜಾ ಸಾಹಿತ್ಯಗಳು ತ್ರಿನೇತ್ರ ಮಳಿಗೆಯಲ್ಲಿ ಒಂದೇ ಕಡೆ ಲಭ್ಯವಾಗಲಿದ್ದು ಸಂಘಟಕರಿಗೆ ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಗಲಿದೆ ಎಂದು ಹೇಳಿದರು.ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ ಮಾತನಾಡಿ, ಇಂದಿನ ವ್ಯವಸ್ಥೆಗೆ ತಕ್ಕಂತೆ ಜನರಿಗೆ ಆವಶ್ಯಕವಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿರುವುದು ಉತ್ತಮ ಕಾರ್ಯ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೈಗೆಟಕುವ ದರದಲ್ಲಿ ಸೇವೆಗಳನ್ನು ನೀಡುವ ಮೂಲಕ ಉತ್ತಮ ಸಂಸ್ಥೆಯಾಗಿ ಬೆಳೆಯಲಿ ಎಂದು ಹಾರೈಸಿದರು.

ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ಸೇವಾ ಟ್ರಸ್ಟ್‌ನ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೆ.ಯಸ್ ಮಾತನಾಡಿ, ಬೆಳೆಯುತ್ತಿರುವ ಪುತ್ತೂರಿಗೆ ಇಂತಹ ಮಳಿಗೆಗಳು ಆವಶ್ಯಕ. ಧಾರ್ಮಿಕ ಸೇವೆಯೊಂದಿಗೆ ಆರ್ಥಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ. ಗುಣಮಟ್ಟದ ಸೇವೆಯೊಂದಿಗೆ ಗ್ರಾಹಕರ ಸ್ನೇಹಿ ಸಂಸ್ಥೆಯಾಗಿ ಮೂಡಿಬರಲಿ ಎಂದು ಆಶಿಸಿದರು.

ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಯಂ. ನಿರಂಜನ ರೈ ಮಠಂತಬೆಟ್ಟು ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಾಕಷ್ಟು ಅನುಭವದೊಂದಿಗೆ ಮ್ಹಾಲಕರು ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ವ್ಯವಹಾರ ವೃದ್ಧಿಯಾಗಲು ಸಾಧ್ಯ ಎಂದು ಹೇಳಿದರು.

ಹಿರಣ್ಯ ಕಾಂಪ್ಲೆಕ್ಸ್‌ನ ಹಿರಣ್ಯ ಗಣಪತಿ ಭಟ್ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ಯು.ಜಿ.ರಾಧಾ, ಪುತ್ತೂರು ಶ್ರೀ ಲಕ್ಷ್ಮಿ ವೆಂಕಟ್ರಮಣ ದೇವಸ್ಥಾನದ ಮೊಕ್ತೇಸರ ರಾಜೇಂದ್ರ ಪ್ರಭು, ಸಂಸ್ಥೆಯ ಮಾಲಕರ ತಂದೆ ವೆಂಕಟ್ರಮಣ ಭಟ್ ಮೊಟ್ಟೆಪಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮ್ಹಾಲಕ ರಾಮಕೃಷ್ಣ ಭಟ್ ಮಠಂತಬೆಟ್ಟು ಸ್ವಾಗತಿಸಿದರು. ಸಂತೋಷ್ ಕುಮಾರ್ ವಂದಿಸಿದರು.

ಸಂಸ್ಥೆಯ ಸೌಲಭ್ಯಗಳು
ಸಂಪೂರ್ಣ ಪೂಜಾ ಸಾಹಿತ್ಯದ ಮಳಿಗೆಯಾಗಿರುವ ತ್ರಿನೇತ್ರ ಪೂಜಾ ಸ್ಟೋರ್‌ನಲ್ಲಿ ಎಲ್ಲಾ ಬಗೆಯ ಪೂಜಾ ಸಾಹಿತ್ಯಗಳು, ದೇವಸ್ಥಾನದ ಉತ್ಸವ, ಬ್ರಹ್ಮಕಲಶಗಳಿಗೆ ಅಗತ್ಯವಿರುವ ಸುವಸ್ತುಗಳು, ಪೂಜಾ ಪರಿಕರಗಳು ಮತ್ತು ಕಂಪ್ಯೂಟರ್ ಜಾತಕ ಲಭ್ಯವಿದೆ. ಉತ್ತಮ ಪಾರ್ಕಿಂಗ್ ವ್ಯವಸ್ಥೆಯಿದ್ದು, ಕ್ಲಪ್ತ ಸಮಯದಲ್ಲಿ ಉತ್ತಮ ಸೇವೆ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

  1. Spoorthi .B.Shetty

    Onde soorinadi agatyada pratiyondu vastuvu dorakuvudarinda graahaka snehiyagi hesarugalisuvudaralli sandeha illa…..samsteya pratiyondu kelasakku shubhavagali

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.