ಪುತ್ತೂರು: ಸಾಹಿತಿ ಉಪ್ಪಿನಂಗಡಿಯ ಶಾಂತ ಕುಂಟಿನಿಯವರಿಗೆ ಇಂಡಿಯನ್ ವೆಹಿಕಲ್ ಡ್ರೈವರ್ಸ್ ಯೂನಿಯನ್ನವರು ಕೊಡಮಾಡುವ ‘ಸಾರಥಿ ನಂ.1’ ಪ್ರಶಸ್ತಿ ಲಭಿಸಿದೆ. ಬೆಂಗಳೂರು ವಿಧಾನ ಸೌಧದ ಬಳಿಯ ಪತ್ರಕರ್ತರ ಸಂಘದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಉತ್ತಮ ವಾಹನ ಚಾಲಕಿ ಹಾಗೂ ಸಾಹಿತಿಯಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ದೊರಕಿದೆ.
ಸಾಹಿತಿಯಾದ ಇವರು ಅನೇಕ ಕಡೆ ಕವಿಗೋಷ್ಟಿ ನಡೆಸಿದ್ದಾರೆ. ಮಂಗಳೂರು ಮತ್ತು ಪುತ್ತೂರಿನಲ್ಲಿ ರೇಡಿಯೋದಲ್ಲಿಯೂ ಕಾರ್ಯಕ್ರಮವನ್ನು ಕೊಟ್ಟಿದ್ದಾರೆ. ಕರುನಾಡ ಹಣತೆ ಕವಿ ಬಳಗದ ಅಧ್ಯಕ್ಷರಾಗಿದ್ದರು. ಕಾರ್ಯಸಾಹಿತ್ಯದ ಜೊತೆಗೆ ಇನ್ನೂ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ಇವರು ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಉಪ್ಪಿನಂಗಡಿ ನಿವಾಸಿಯಾದ ಇವರು ಪಾಕ ಶಾಸ್ತ್ರಜ್ಞ ರವಿ ಕುಂಟಿನಿಯವರ ಪತ್ನಿ.