ಕೋರಂ ಕೊರತೆ ಅರಿಯಡ್ಕ ಗ್ರಾಪಂ ಸಾಮಾನ್ಯ ಸಭೆ ಮುಂದೂಡಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಮೌಖಿಕವಾಗಿ ತಿಳಿಸದೆ ಸಭೆ ದಿನಾಂಕ ನಿಗದಿ – ಉಪಾಧ್ಯಕ್ಷರ ಸಹಿತ ಸದಸ್ಯರ ಸಭಾತ್ಯಾಗ

ಪುತ್ತೂರು: ಸದಸ್ಯರ ಗೈರು ಹಾಜರಿಯಿಂದಾಗಿ ಕೋರಂ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಯನ್ನು ಅಧ್ಯಕ್ಷರು ಮುಂದೂಡಿದ್ದಾರೆ. ಆ.೭ ರಂದು ನಿಗದಿಯಾಗಿದ್ದ ಸಾಮಾನ್ಯ ಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಸಹಿತ ಎಲ್ಲಾ ಸದಸ್ಯರುಗಳು ಭಾಗವಹಿಸಿದ್ದರು. ಆದರೆ ಸಭೆ ಆರಂಭಕ್ಕೆ ಮುಂಚೆಯೇ ಉಪಾಧ್ಯಕ್ಷ ಲೋಕೇಶ್ ಚಾಕೋಟೆಯವರು ಅಧ್ಯಕ್ಷೆ ಸವಿತಾರವರ ವಿರುದ್ಧ ಮಾತನಾಡಿ, ಉಪಾಧ್ಯಕ್ಷನಾಗಿರುವ ನನ್ನಲ್ಲಿ ಕೇಳದೆ ಸಾಮಾನ್ಯ ಸಭೆಯ ದಿನ ನಿಗದಿ ಮಾಡಲಾಗಿದೆ. ಕಳೆದ ತಿಂಗಳು ಸಾಮಾನ್ಯ ಸಭೆ ಕರೆಯದಿರುವುದು, ಸ್ಥಾಯಿ ಸಮಿತಿ ಸಭೆ ಕರೆಯದಿರುವುದು ಮತ್ತು ಏಕಪಕ್ಷೀಯವಾಗಿ ಈ ತಿಂಗಳ ಸಭೆಯ ದಿನಾಂಕ ನಿಗದಿ ಪಡಿಸಿರುವುದು ಸರಿಯಲ್ಲ, ಮುಂದಿನ ದಿನಗಳಲ್ಲಿ ಇದು ಮತ್ತೆ ಪುನರಾವರ್ತನೆಯಾಗಬಾರದು ಆದ್ದರಿಂದ ನಾನು ಸಭಾತ್ಯಾಗ ಮಾಡುತ್ತೇನೆ, ನಾವು ಬಹುಮತ ಹೊಂದಿದ್ದರೂ ಯಾವುದೇ ಸಭೆ ಅಥವಾ ಇತರ ವಿಚಾರಗಳನ್ನು ನಮ್ಮಲ್ಲಿ ಕೇಳದೆ ಏಕ ಪಕ್ಷೀಯವಾಗಿ ಅಧ್ಯಕ್ಷರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಸಭಾತ್ಯಾಗ ಮಾಡಿದರು. ಉಪಾಧ್ಯಕ್ಷರೊಂದಿಗೆ ಸದಸ್ಯರುಗಳಾದ ಸಂತೋಷ್ ಮಣಿಯಾಣಿ, ಸದಾನಂದ ಮಣಿಯಾಣಿ, ತಿಲಕ್ ರೈ ಕುತ್ಯಾಡಿ, ಸುಂದರ, ರಾಜೇಶ್ ಎಚ್, ಪ್ರೇಮಲತಾ ರೈ , ಸಾವಿತ್ರಿ, ಅಮೃತಾ, ಹೇಮಾವತಿ, ಸೀತಾರಾಮ ಮೇಲ್ಪಾದೆ, ಲೋಹಿತ್ ಪೂಜಾರಿ ಮತ್ತು ಹೊನ್ನಪ್ಪ ಪೂಜಾರಿಯವರುಗಳು ಸಭಾತ್ಯಾಗ ಮಾಡಿದರು.

ಸಭೆಯಲ್ಲಿ ಸದಸ್ಯರುಗಳಾದ ಶಶಿಕಲಾ ಚೌಟ, ನವೀನ ಬಿ.ಡಿ, ಸಲ್ಮಾ, ನಿರ್ಮಲಾ ಎಸ್.ಪಿ, ಚಿತ್ರಾ ಎನ್.ನಾಯ್ಕ್, ಸರೋಜಿನಿ, ಮಹಾಲಿಂಗ ನಾಯ್ಕ್, ರವೀಂದ್ರ ಪೂಜಾರಿ, ದಿವ್ಯನಾಥ ಶೆಟ್ಟಿ, ಸಹನಾ ನಳಿನಾಕ್ಷಿ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಪದ್ಮಕುಮಾರಿ, ಕಾರ್‍ಯದರ್ಶಿ ಕೃಷ್ಣರಾಜ್, ಲೆಕ್ಕಪರಿಶೋಧಕ ರವೀಂದ್ರ ಪಾಟೀಲ್ ವೇದಿಕೆಯಲ್ಲಿದ್ದರು. ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದ್ದರು. ಆ.೧೬ಕ್ಕೆ ಸಭೆಯನ್ನು ಮುಂದೂಡಲಾಯಿತು.

ಉಪಾಧ್ಯಕ್ಷರು ನೋಟೀಸ್‌ಗೆ ಸಹಿ ಮಾಡಿದ್ದಾರೆ: ಸವಿತಾ ಎಸ್.ಅಧ್ಯಕ್ಷೆ
ಉಪಾಧ್ಯಕ್ಷರಲ್ಲಿ ಕೇಳದೆ ಸಾಮಾನ್ಯ ಸಭೆ ದಿನ ನಿಗದಿ ಪಡಿಸಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು, ಏಕೆಂದರೆ ಸಾಮಾನ್ಯ ಸಭೆಯ ನೋಟೀಸ್‌ಗೆ ಉಪಾಧ್ಯಕ್ಷರು ಸಹಿ ಮಾಡಿದ್ದಾರೆ. ಸಹಿ ಮಾಡುವಾಗಲೇ ನಮ್ಮಲ್ಲಿ ತಿಳಿಸಬಹುದಾಗಿತ್ತು. ನಿಯಮಾನುಸಾರವಾಗಿ 7 ದಿನಗಳ ಮುಂಚೆಯೇ ನೋಟೀಸ್ ನೀಡಲಾಗಿತ್ತು. ನೋಟೀಸ್‌ಗೆ ಸಹಿ ಮಾಡಿದ ಬಳಿಕ ಮೌಖಿಕವಾಗಿ ಹೇಳಿಲ್ಲ ಎನ್ನುವುದು ಎಷ್ಟು ಸರಿ ಎಂದ ಅಧ್ಯಕ್ಷೆ, ಗ್ರಾಮದ ಅಭಿವೃದ್ಧಿಗಾಗಿ ನಾವು ಸಾಮಾನ್ಯ ಸಭೆ ನಡೆಸುತ್ತಿದ್ದೇವೆ ಅದನ್ನೇ ತಡೆ ಹಿಡಿಯುವುದು ಸರಿಯಲ್ಲ, ಗ್ರಾಮದ ಅಭಿವೃದ್ಧಿಯಲ್ಲಿ ರಾಜಕೀಯ ಸರಿಯಲ್ಲ ಎಂದು ತಿಳಿಸಿದ್ದಾರೆ.

ಅಧ್ಯಕ್ಷರಿದ್ದರೂ ಉಪಾಧ್ಯಕ್ಷರು ಸಹಿ ಮಾಡಿ ಅಧಿಕಾರ ದುರುಪಯೋಗ: ಡಿಸಿ,ಸಿಓ,ಎಸಿಗೆ ಅಧ್ಯಕ್ಷರಿಂದ ದೂರು
ಕೋಳಿ ಫಾರಂ ಘಟಕಕ್ಕೆ ತಾಪಂನಿಂದ ಅನುದಾನ ಪಡೆಯಲು ಅರ್ಜಿದಾರನು ಅರ್ಜಿಗೆ ಸ್ಥಳೀಯ ಜಿಪಂ ಸದಸ್ಯರ ಸಹಿಯೊಂದಿಗೆ ಗ್ರಾಪಂ ಅಧ್ಯಕ್ಷರ ಸಹಿ ಮಾಡಿ ರುಜುವಾತು ಮಾಡಬೇಕಾಗಿದೆ. ಅರಿಯಡ್ಕ ಗ್ರಾಪಂ ವ್ಯಾಪ್ತಿಯ ಫಲಾನುಭವಿಗಳು ಈ ಘಟಕಕ್ಕೆ ಅನುದಾನ ಪಡೆಯಲು ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ್ದು ಈ ಅರ್ಜಿಗೆ ಅಧ್ಯಕ್ಷರು ಸಹಿ ಮಾಡಬೇಕಾಗಿದ್ದರೂ ಅಧ್ಯಕ್ಷರ ಗಮನಕ್ಕೆ ಬಾರದ ರೀತಿಯಲ್ಲಿ ಉಪಾಧ್ಯಕ್ಷರು ಸಹಿ ಮತ್ತು ಪಂಚಾಯತ್ ಮೊಹರು ಹಾಕುವ ಮೂಲಕ ಅಧಿಕಾರ ದುರುಪಯೋಗ ಮಾಡಿದ್ದಾರೆ. ಅಧ್ಯಕ್ಷರಿರುವಾಗ ಅವರ ಒಪ್ಪಿಗೆ ಪಡೆಯದೆ ಉಪಾಧ್ಯಕ್ಷರು ಸಹಿ ಹಾಕಿ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಮತ್ತು ತಾಲೂಕು ಸಹಾಯಕ ಕಮೀಷನರ್‌ರವರುಗಳಿಗೆ ದೂರು ನೀಡುವುದಾಗಿ ಅಧ್ಯಕ್ಷೆ ಸವಿತಾ ಎಸ್.ತಿಳಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಉಪಾಧ್ಯಕ್ಷ ಲೋಕೇಶ್ ಚಾಕೋಟೆಯವರು ನಾನು ಸ್ವೀಕೃತಿ ಸಹಿ ಹಾಕಿದ್ದೇನೆ. ಅರ್ಜಿದಾರರೊಬ್ಬರು ಪಂಚಾಯತ್ ಬಂದಾಗ ಅಧ್ಯಕ್ಷರು ಇರಲಿಲ್ಲ ಆದ್ದರಿಂದ ಅರ್ಜಿದಾರರನ್ನು ಕಾಯಿಸುವುದು ಸರಿಯಲ್ಲ ಎಂದುಕೊಂಡ ನಾನು ಸ್ವೀಕೃತಿ ಸಹಿ ಹಾಕಿಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.