ಬಿಇಎಲ್‌ನಲ್ಲಿ ಇಂಜಿನಿಯರ್ ಹುದ್ದೆಗಳು 

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಭಾರತ ರಕ್ಷಣಾ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ‘ನವರತ್ನ’ ಸಾಲಿಗೆ ಸೇರಿರುವ ಸಂಸ್ಥೆ ‘ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಅತ್ಯಾಧುನಿಕ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಭಾರತೀಯ ಸೇನೆಗೆ ಒದಗಿಸುತ್ತದೆ. ದೇಶದಲ್ಲಿ ಒಂಭತ್ತು ಕಾರ್ಖಾನೆಗಳು ಮತ್ತು ಪ್ರಾದೇಶಿಕ ಕೇಂದ್ರಗಳನ್ನು ಬಿಇಲ್ ಹೊಂದಿದ್ದು, ಪ್ರಸ್ತುತ ಬೆಂಗಳೂರಿನ ಎಕ್ಸ್‌ಪೋರ್ಟ್ ಮ್ಯಾನುಫ್ಯಾಕ್ಚರಿಂಗ್ ಎಸ್‌ಬಿಯುನ ನೆಟ್‌ವರ್ಕ್ ಆಂಡ್ ಸೈಬರ್ ಸೆಕ್ಯೂರಿಟಿ ಗ್ರೂಪ್‌ನಲ್ಲಿ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. 2 ವರ್ಷದ ಅವಧಿಗೆ ತಾತ್ಕಾಲಿಕ ನೇಮಕಾತಿ ಮಾಡಿಕೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ: ಎಐಸಿಟಿಇ ಅಂಗೀಕೃತ ಸಂಸ್ಥೆಗಳಿಂದ ಕಂಪ್ಯೂಟರ್ ಸೈನ್ಸ್/ಇನ್ಫಾರ್ಮೇಷನ್ ಸೈನ್ಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಬಿಇ/ಬಿ.ಟೆಕ್ ಪದವಿ ತೇರ್ಗಡೆಯಾಗಿರಬೇಕು. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಉತ್ತೀರ್ಣ ಅಂಕ ಪಡೆದಿದ್ದರೂ ಅರ್ಜಿಸಲ್ಲಿಸಬಹುದು. ಕನಿಷ್ಠ 2 ವರ್ಷ ಸೇವಾನುಭವ ಹೊಂದಿರಬೇಕು.

ವಯೋಮಿತಿ: ಗರಿಷ್ಠ 27 ವರ್ಷ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.

ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಮುಂಬೈ, ಕೋಲ್ಕತ್ತ, ಗುವಾಹತಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-08-2018

ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್: www.bel-india.in

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸುದ್ದಿ ಮಾಹಿತಿ ಕೇಂದ್ರ, ಎಂ.ಟಿ.ರಸ್ತೆ. ಪುತ್ತೂರು. ಫೋ: ೦೮೨೫೧-08251-238949 | 7829503541

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.