‘ನೆಲ್ಯಾಡಿಯನ್ನು ಹೋಬಳಿ ಕೇಂದ್ರ ಮಾಡಿ’ ಶಿರಾಡಿ, ಕೌಕ್ರಾಡಿ, ನೆಲ್ಯಾಡಿ, ಗೋಳಿತ್ತೊಟ್ಟು ಗ್ರಾ.ಪಂ.ಗಳಿಂದ ಆಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ನೂತನ ಕಡಬ ತಾಲೂಕಿಗೆ ಸೇರ್ಪಡೆಗೊಳ್ಳುವ ಶಿರಾಡಿ, ಕೌಕ್ರಾಡಿ, ನೆಲ್ಯಾಡಿ ಹಾಗೂ ಗೋಳಿತ್ತೊಟ್ಟು ಗ್ರಾ.ಪಂ.ಗಳಿಗೆ ಸಂಬಂಧಿಸಿ ನೆಲ್ಯಾಡಿಯನ್ನು ಕೇಂದ್ರವಾಗಿಟ್ಟುಕೊಂಡು ನೆಲ್ಯಾಡಿಯಲ್ಲಿ ಹೋಬಳಿ ಕೇಂದ್ರ ಆರಂಭಿಸಬೇಕೆಂದು ಒತ್ತಾಯಿಸಲು ನೆಲ್ಯಾಡಿ ಗ್ರಾ.ಪಂ.ನಲ್ಲಿ ಸೆ.05 ರಂದು ನಡೆದ ನಾಲ್ಕು ಗ್ರಾ.ಪಂ.ಗಳ ಅಧ್ಯಕ್ಷರ ಹಾಗೂ ಗ್ರಾಮಸ್ಥರ ಸಭೆಯಲ್ಲಿ ನಿರ್ಧರಿಸಲಾಗಿದೆ. ಸಭೆಯಲ್ಲಿ ಮಾತನಾಡಿದ ನೆಲ್ಯಾಡಿ ಕ್ಷೇತ್ರದ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡರವರು, ನೆಲ್ಯಾಡಿ ತಾಲೂಕು ಕೇಂದ್ರ ಆಗಬೇಕೆಂಬ ಬೇಡಿಕೆ ಬಹಳ ಹಿಂದೆಯೇ ಇತ್ತು. ಈ ನಿಟ್ಟಿನಲ್ಲಿ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟವೂ ನಡೆಸಿದ್ದೇವೆ. ತಾಲೂಕು ರಚನೆಗೆ ಸಂಬಂಧಿಸಿ ನೇಮಕಗೊಂಡಿದ್ದ ಪ್ರಕಾಶ್ ನೇತೃತ್ವದ ಸಮಿತಿ ನೆಲ್ಯಾಡಿ ತಾಲೂಕು ಕೇಂದ್ರವಾಗಲು ಸರಕಾರಕ್ಕೆ ಶಿಫಾರಸು ಸಹ ಮಾಡಿತು. ಆದರೆ ತಾಲೂಕು ಕೇಂದ್ರವಾಗಲು ನೆಲ್ಯಾಡಿಯಲ್ಲಿ ಸಾಕಷ್ಟು ವ್ಯವಸ್ಥೆಗಳು ಇರಲಿಲ್ಲ. ಈಗ ಕಡಬ ತಾಲೂಕು ಘೋಷಣೆಯಾಗಿದ್ದು ನೆಲ್ಯಾಡಿ ಭಾಗ ಕಡಬ ತಾಲೂಕಿಗೆ ಸೇರ್ಪಡೆಗೊಂಡಿದೆ. ಕಡಬ ತಾಲೂಕು ಕೇಂದ್ರವಾಗಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ನೆಲ್ಯಾಡಿಯನ್ನು ಹೋಬಳಿ ಕೇಂದ್ರ ಮಾಡಬೇಕೆಂಬ ನಮ್ಮ ನಿರೀಕ್ಷೆಗೆ ಸರಿಯಾದ ಸ್ಪಂಧನೆ ಸಿಕ್ಕಿಲ್ಲ. ಆದ್ದರಿಂದ ನೆಲ್ಯಾಡಿಯನ್ನು ಹೋಬಳಿ ಕೇಂದ್ರ ಮಾಡುವ ನಿಟ್ಟಿನಲ್ಲಿ ಗ್ರಾ.ಪಂ.ಗಳಲ್ಲಿ ನಿರ್ಣಯ ಕೈಗೊಂಡು ಸರಕಾರಕ್ಕೆ ಹಕ್ಕೊತ್ತಾಯ ಸಲ್ಲಿಸಬೇಕು. ಜಿ.ಪಂ.ಸದಸ್ಯ ನೆಲೆಯಲ್ಲಿ ನೆಲ್ಯಾಡಿಯಲ್ಲಿ ಹೋಬಳಿ ಕೇಂದ್ರ ಆರಂಭಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಕೆಡಿಪಿ ಸದಸ್ಯ ಇಸ್ಮಾಯಿಲ್ ನೆಲ್ಯಾಡಿ ಮಾತನಾಡಿ, ನೆಲ್ಯಾಡಿ ಹೋಬಳಿ ಕೇಂದ್ರ ಆಗಬೇಕು ಎಂಬ ನಮ್ಮ ಬೇಡಿಕೆ ನ್ಯಾಯಯುತವಾಗಿದೆ. ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ನಾಲ್ಕು ಗ್ರಾಮ ಪಂಚಾಯತ್‌ಗಳನ್ನು ಒಳಗೊಂಡು ಹೋರಾಟ ಮಾಡಬೇಕಾಗಿದೆ. ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ನೆಲ್ಯಾಡಿಯನ್ನು ಹೋಬಳಿಯನ್ನಾಗಿ ಮಾಡಬೇಕೆಂದು ಹೇಳಿದರು. ತಾ.ಪಂ.ಸದಸ್ಯೆ ಉಷಾ ಅಂಚನ್‌ರವರು ನೆಲ್ಯಾಡಿಯಲ್ಲಿ ಹೋಬಳಿ ಕೇಂದ್ರದ ಅನಿವಾರ್‍ಯತೆ ಬಗ್ಗೆ ತಿಳಿಸಿದರು. ಕಡಬ ಕ್ಷೇತ್ರದ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್‌ರವರು ಸಲಹೆ ಸೂಚನೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆಯವರು, ನೆಲ್ಯಾಡಿಯನ್ನು ಹೋಬಳಿ ಕೇಂದ್ರವಾಗಿಸುವ ನಿಟ್ಟಿನಲ್ಲಿ ನಡೆಯುವ ಹೋರಾಟಕ್ಕೆ ನಾಲ್ಕು ಗ್ರಾ.ಪಂ.ಗಳ ಸದಸ್ಯರ, ಗ್ರಾಮಸ್ಥರ ಬೆಂಬಲ ಕೋರಿದರು. ಸಭೆಯಲ್ಲಿ ಕೌಕ್ರಾಡಿ ಕ್ಷೇತ್ರದ ತಾ.ಪಂ.ಸದಸ್ಯೆ ಕೆ.ಟಿ.ವಲ್ಸಮ್ಮ, ಶಿರಾಡಿ ಗ್ರಾ.ಪಂ.ಅಧ್ಯಕ್ಷ ತಿಮ್ಮಪ್ಪ ಗೌಡ, ಗೋಳಿತ್ತೊಟ್ಟು ಗ್ರಾ.ಪಂ.ಅಧ್ಯಕ್ಷೆ ಶಾಲಿನಿ ಶೇಖರ ಪೂಜಾರಿ, ನೆಲ್ಯಾಡಿ ಗ್ರಾ.ಪಂ. ಉಪಾಧ್ಯಕ್ಷೆ ಉಮಾವತಿ, ಸದಸ್ಯರಾದ ಶಬ್ಬೀರ್ ಸಾಹೇಬ್, ಹಮೀದ್, ಉಷಾ ಜೋಯಿ, ಫ್ಲೋರಿನಾ ಡಿ.ಸೋಜ, ಲೈಲಾ ತೋಮಸ್, ಚಿತ್ರಾ ರಾಮನಗರ, ಉಮಾವತಿ ಮಾದೇರಿ, ವಿನೋದರ, ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ಲೋಕೇಶ್ ಬಾಣಜಾಲು, ಹಿರಿಯ ಮುಖಂಡರಾದ ಕೆ.ಪಿ.ತೋಮಸ್, ಸುಕುಮಾರ ಗೌಡ ಮಾದೇರಿ, ಜಾರ್ಜ್‌ಕುಟ್ಟಿ ಉಪದೇಶಿ, ರವಿಪ್ರಸಾದ್ ಶೆಟ್ಟಿ, ಕಮಲಾಕ್ಷ, ಅಬ್ದುಲ್ ಅಝೀಝ್ ಕೋಲ್ಪೆ, ಸೀತಾರಾಮ ಗೌಡ ಕಾನಮನೆ, ಪಡುಬೆಟ್ಟು ಮಹಾವಿಷ್ಣು ಗೆಳೆಯರ ಬಳಗದ ಮಾಜಿ ಅಧ್ಯಕ್ಷ ರಮೇಶ್ ಶೆಟ್ಟಿ ಬೀದಿಮನೆ ಮತ್ತಿತರರು ಉಪಸ್ಥಿತರಿದ್ದರು. ನೆಲ್ಯಾಡಿ ಗ್ರಾ.ಪಂ. ಕಾರ್ಯದರ್ಶಿ ದೇವರಾಜ್ ಸ್ವಾಗತಿಸಿ, ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು.

ಗ್ರಾ.ಪಂ.ಗಳಲ್ಲಿ ನಿರ್ಣಯ
ನೆಲ್ಯಾಡಿಯನ್ನು ಹೋಬಳಿ ಕೇಂದ್ರವನ್ನಾಗಿಸುವಂತೆ ಮನವಿ ಮಾಡಲು ನೆಲ್ಯಾಡಿ ಗ್ರಾ.ಪಂ.ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅದೇ ರೀತಿ ಗೋಳಿತ್ತೊಟ್ಟು, ಕೌಕ್ರಾಡಿ ಹಾಗೂ ಶಿರಾಡಿ ಗ್ರಾ.ಪಂ.ಗಳಲ್ಲೂ ನಿರ್ಣಯ ಕೈಗೊಂಡು ಸರಕಾರಕ್ಕೆ ಮನವಿ ಮಾಡುವುದು, ಇದರೊಂದಿಗೆ ಸಹಾಯಕ ಆಯುಕ್ತರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಕಂದಾಯ ಸಚಿವರಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.