HomePage_Banner
HomePage_Banner
HomePage_Banner
HomePage_Banner

ವಳಾಲು-ಮುದ್ಯ: 5ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಳಾಲು ಮುದ್ಯ ಇದರ ವತಿಯಿಂದ 5ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ ಧಾರ್ಮಿಕ ಸಭೆ ಸೆ.13ರಂದು ಬಜತ್ತೂರು ಗ್ರಾಮದ ಮುದ್ಯ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.
ಬೆಳಿಗ್ಗೆ ವಿದ್ಯಾಗಣಪತಿ ಪ್ರತಿಷ್ಠೆ, ಬಳಿಕ ಮುದ್ಯ ಶ್ರೀ ಪಂಚಲಿಂಗೇಶ್ವರ ಭಜನಾ ತಂಡದವರಿಂದ ಭಜನೆ ನಡೆಯಿತು. ನಂತರ ಗಣಹೋಮ, ಶ್ರೀ ಪಂಚಲಿಂಗೇಶ್ವರ ದೇವರಿಗೆ ನಿತ್ಯಪೂಜೆ, ದೇವರಿಗೆ ಸೇವೆ ನಡೆಯಿತು. ನಡ್ಪ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು. ಮಧ್ಯಾಹ್ನ ಸೇಡಿಯಾಪು ಶ್ರೀ ದೇವಿ ಭಜನಾ ಕಲಾವೃಂದದವರಿಂದ ಭಜನೆ, ಊರವರಿಂದ ‘ಸಾಂಸ್ಕೃತಿಕ ವೈವಿದ್ಯ’ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಧಾರ್ಮಿಕ ಸಭೆ:
ಗಣೇಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಲಂತಾಯ ನಂದಗೋಕು ನಿವಾಸಿ, ವೇದ ಸಂಸ್ಕೃತ ವಿದ್ವಾಂಸ ಮುರಳೀಕೃಷ್ಣ ಜಿ.,ಯವರು ಧಾರ್ಮಿಕ ಉಪನ್ಯಾಸ ನೀಡಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ, ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಮುಡಂಬಡಿತ್ತಾಯ ಗಾಣದಮೂಲೆ ಅಧ್ಯಕ್ಷತೆ ವಹಿಸಿದ್ದರು. ಬಜತ್ತೂರು ಗ್ರಾ.ಪಂ.ಉಪಾಧ್ಯಕ್ಷೆ ಸುಜಾತ ನೆಕ್ಕರೆ, ಸದಸ್ಯೆ ಲೀಲಾವತಿ ಕೆ.ಎಂಜಿರಡ್ಕ, ಸ್ಥಳೀಯ ಪ್ರಮುಖರಾದ ಸ್ವರ್ಣಲತಾ ಪಡಿವಾಳ್ ಬಾರಿಕೆ, ಬೆದ್ರೋಡಿ ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿ ಮಾಜಿ ಅಧ್ಯಕ್ಷ ಧನಂಜಯ ಬೆದ್ರೋಡಿ, ಬೆಂಗಳೂರು ಜಿ.ಪಿ.ಆರ್.ಗ್ರೂಪ್ ಮಾಲಕ, ಬೆಂಗಳೂರು ಚಿಮ್ಮಿಹಿಲ್ ರೋಟರಿ ಅಧ್ಯಕ್ಷರೂ ಆದ ಹರಿಪ್ರಸಾದ್ ರೆಂಜಾಳ ಮುಖ್ಯ ಅತಿಥಿಗಳಾಗಿದ್ದರು. ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಸಂಚಾಲಕ ರಾಧಾಕೃಷ್ಣ ಕೆ.ಎಸ್., ಅಧ್ಯಕ್ಷ ತಿಮ್ಮಪ್ಪ ಗೌಡ ಉಪಾತಿಪಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣೇಶೋತ್ಸವ ಸಮಿತಿ ಪದಾಧಿಕಾರಿಗಳಾದ ನಾರಾಯಣ ಪೂಜಾರಿ ನೀರಕಟ್ಟೆ, ಗೋಪಾಲ ದಡ್ಡು, ಮಮತಾ ನೀರಕಟ್ಟೆ, ಮಂಜುಳಾ ನೀರಕಟ್ಟೆ, ಅಮಿತಾ ಒಂರ್ಬೋಡಿ, ಮಹೇಂದ್ರವರ್ಮ ಪಡ್ಪು, ವಸಂತ ನೀರಕಟ್ಟೆ, ಶಶಿಧರ ಮುದ್ಯ, ಪೂವಪ್ಪ ಕೊಡಿಪಾನರವರು ಅತಿಥಿಗಳನ್ನು ಗೌರವಿಸಿದರು. ಜಿ.ಪಂ.ಮಾಜಿ ಸದಸ್ಯ ಕೇಶವ ಗೌಡ ಪುಯಿಲ ಸ್ವಾಗತಿಸಿದರು. ಪವಿತ್ರ ಕಾರ್‍ಯಕ್ರಮ ನಿರೂಪಿಸಿದರು. ಗ್ರೀಷ್ಮಾ ಪ್ರಸಾದ್ ರೆಂಜಾಳ ಪ್ರಾರ್ಥಿಸಿದರು.

ಭವ್ಯ ಶೋಭಾಯಾತ್ರೆ
ಸಂಜೆ ವಿದ್ಯಾಗಣಪತಿಯ ವಿವಿಧ ಭಜನಾ ತಂಡಗಳ ಭಜನಾ ಕಾರ್ಯಕ್ರಮಗಳೊಂದಿಗೆ ಶೋಭಾಯಾತ್ರೆ ನಡೆಯಿತು. ಪಂಚಲಿಂಗೇಶ್ವರ ದೇವಸ್ಥಾನದಿಂದ ಹೊರಟ ಶೋಭಾಯಾತ್ರೆ ಪಡ್ಪು ದೈವಸ್ಥಾನ ಮುಂಭಾಗದಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ನೀರಕಟ್ಟೆಗೆ ತೆರಳಿ ಅಲ್ಲಿಂದ ಹಿಂತಿರುಗಿ ವಳಾಲು ಮೂಲಕ ಮುಗೇರಡ್ಕ ತೂಗು ಸೇತುವೆ ಬಳಿಯಲ್ಲಿ ದೇವರ ಮೂರ್ತಿ ಜಲಸ್ತಂಭನ ಮಾಡಲಾಯಿತು. ಗೊಂಬೆಕುಣಿತ, ಚೆಂಡೆವಾದನ ಶೋಭಾಯಾತ್ರೆಗೆ ಮೆರುಗು ನೀಡಿತು. ಸುಡುಮದ್ದು ಪ್ರದರ್ಶನ, ಡಿಜೆ ಕುಣಿತ ಹಾಗೂ ಪ್ಲಾಸ್ಟಿಕ್ ತೋರಣಗಳನ್ನು ನಿಷೇಧ, ಪರಿಸರ ಪ್ರೇಮಿ ಗಣಪತಿ ಪ್ರತಿಷ್ಠಾಪಿಸುವ ಮೂಲಕ ಮುದ್ಯ ವಳಾಲಿನ ಗಣೇಶೋತ್ಸವವು ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.