HomePage_Banner
HomePage_Banner
HomePage_Banner
HomePage_Banner

ಬೆಟ್ಟಂಪಾಡಿ: ಸಾರ್ವಜನಿಕ ಶ್ರೀ ಗಣೇಶೋತ್ಸವ

Puttur_Advt_NewsUnder_1
Puttur_Advt_NewsUnder_1

ಭಾರತೀಯ ನಾಗರಿಕತೆಗೆ ಅಳಿವಿಲ್ಲ – ರಾಜೇಶ್ ಪದ್ಮಾರ್

ಶಾಸಕ ಸಂಜೀವ ಮಠಂದೂರು ಮಾತನಾಡಿದರು
ಶ್ರೀ ಮಹಾಗಣಪತಿ ದೇವರಿಗೆ ನಡೆದ ರಂಗಪೂಜೆ
ಯಕ್ಷ ಗಾನಾಮೃತ

ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಜೀರ್ಣೋದ್ಧಾರ ಕಾರ್ಯಗಳಿಗೆ ಶಾಸಕರಿಂದ ಅನುದಾನದ ಭರವಸೆ

ಪುತ್ತೂರು: ಬೆಟ್ಟಂಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ 33ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸೆ. 13 ಮತ್ತು 14 ರಂದು ವಿವಿಧ ಪೂಜಾವಿಧಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಸೆ. 13 ರಂದು ಬೆಳಿಗ್ಗೆ ಪ್ರಗತಿಪರ ಕೃಷಿಕ ನಾಕೂರು ರಘುನಾಥ ರೈ ಕೂವೆಂಜ ಕಾರ್ಯಕ್ರಮ ಉದ್ಘಾಟಿಸಿದರು.

 

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ `ಸರ್ವೇ ಜನಾಃ ಸುಖಿನೋ ಭವಂತು ಎಂಬ ಹಿಂದೂ ಧರ್ಮದಲ್ಲಿ ಚರಾಚರ ಜೀವಿಗಳನ್ನು, ವಸ್ತುಗಳನ್ನು ಪೂಜ್ಯನೀಯ ಭಾವದಿಂದ ನೋಡುತ್ತವೆ. ಪ್ರತಿಯೊಂದು ಆಚರಣೆಗಳೂ ವೈಜ್ಞಾನಿಕ ಹಿನ್ನೆಲೆಯುಳ್ಳವಾಗಿದೆ. ಗಣೇಶೋತ್ಸವಕ್ಕೂ ತನ್ನದೇ ಆದ ಸಂಘಟನಾತ್ಮಕ ಮತ್ತು ಧಾರ್ಮಿಕ ಪರಂಪರೆ ಇದೆ ಎಂದ ಅವರು ಬೆಟ್ಟಂಪಾಡಿ ದೇವಾಲಯದ ಎರಡನೇ ಹಂತದ ಜೀರ್ಣೋದ್ಧಾರ ಕಾರ್ಯಗಳಿಗೆ ಶಾಸಕನಾಗಿ ಧಾರ್ಮಿಕ ದತ್ತಿ ಇಲಾಖೆಯಿಂದ ನನ್ನ ಇತಿ-ಮಿತಿಯಲ್ಲಿ ಅನುದಾನ ಬರುವ ಹಾಗೆ ಪ್ರಯತ್ನಿಸುತ್ತೇನೆ ಎಂದರು.

ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ರಾಜೇಶ್ ಪದ್ಮಾರ್‌ರವರು `ವಿದೇಶಿಯರಿಂದಲೂ ಆಕರ್ಷಿಸಲ್ಪಟ್ಟ ದೇವರೆಂದರೆ ಗಣಪತಿ. ಜಗತ್ತಿನ್ನು ಆಳಿದ ಶ್ರೇಷ್ಟ ನಾಗರೀಕತೆಗಳು ಅಳಿದರೂ ಭಾರತದ ಪುರಾತನ ನಾಗರಿಕತೆಯ ಸಂಸ್ಕೃತಿ ಇನ್ನೂ ಅಸ್ತಿತ್ವದಲ್ಲಿದೆ. ಅದೇ ಸಂಸ್ಕೃತಿಯ ಭದ್ರ ಬುನಾದಿಯಿಂದ ನಮ್ಮ ದೇಶ ರಕ್ಷಿಸಲ್ಪಟ್ಟಿದೆ. ಭಾರತದ ನದಿಗಳೂ ಸಂಸ್ಕೃತಿಯ ಪ್ರತೀಕ ಮತ್ತು ಇವತ್ತಿಗೂ ಅವುಗಳು ಜನರಿಂದ ಆರಾದನೆಗೊಳಪಡುತ್ತಿವೆ. ಅಂತಹ ವಿಶೇಷವೂ ವಿಶಿಷ್ಟವೂ ಆದ ಪರಂಪರೆ, ಸಂಸ್ಕೃತಿಗಳ ಸಮ್ಮಿಲನವಾಗಿರುವ ಭಾರತದಲ್ಲಿ ಜನಿಸಿರುವ ನಾವು ಸಾರ್ಥಕತೆಯ ಭಾವದಿಂದ ನಮ್ಮ ಕೆಲಸ ಕಾರ್ಯಗಳನ್ನು ಮಾಡಿ ಕರ್ತವ್ಯವೇ ಧರ್ಮ ಎಂಬ ಆಶಾಭಾವದಿಂದ ನಮ್ಮ ದೇಶಕ್ಕೋಸ್ಕರ ಜೀವನ ನಡೆಸಬೇಕಾಗಿದೆ’ ಎಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮನಮೋಹನ ರೈ ಚೆಲ್ಯಡ್ಕರವರು ಬೆಟ್ಟಂಪಾಡಿಯಲ್ಲಿ ಜಾತಿ, ಪಕ್ಷಗಳ ಬೇಧವಿಲ್ಲದೇ ಎಲ್ಲರೂ ಒಗ್ಗೂಡಿ ನಡೆಸುವ ಮಹಾಗಣಪತಿಯ ಉತ್ಸವ ವರ್ಷದಿಂದ ವರ್ಷಕ್ಕೆ ವಿಶೇಷವಾಗಿ ನಡೆಯುತ್ತಿದೆ ಎಂದರು.
ನ್ಯಾಯವಾದಿ ಕೃಪಾಶಂಕರ್‌ರವರು ಮಾತನಾಡಿ `ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಅಷ್ಟೇ ಸಂಸ್ಕಾರ ಬದ್ಧವಾಗಿ ನಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಇದರ ಆಶಯ ಈಡೇರಬಲ್ಲುದು’ ಎಂದರು.
ಕುಕ್ಕುತ್ತಡಿ ದರ್ಬೆ ಶ್ರೀ ನಾಗಬಿರ್ಮೆರ್ ಕೋಟಿ ಚೆನ್ನಯ ಸನ್ನಿಧಾನದ ಮುಖ್ಯಸ್ಥ ಜಯರಾಮ ಪೂಜಾರಿಯವರು ಮಾತನಾಡಿ `ತುಳುನಾಡು ಧರ್ಮದ ನೆಲೆವೀಡು. ಇಲ್ಲಿ ಮಹಾಲಿಂಗೇಶ್ವರನ ಅನುಗ್ರಹದಿಂದ ಯಾವುದೇ ಪ್ರಾಕೃತಿಕ ವಿಕೋಪಗಳು ನಡೆದಿಲ್ಲ ಎಂಬುದೇ ಮೃತ್ಯುಂಜಯ ನಮ್ಮೊಂದಿಗಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಯುವ ಉದ್ಯಮಿ ಸಹಜ್ ರೈ ಬಳಜ್ಜರವರು ಮಾತನಾಡಿ `ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸಲು ನಮಗೆ ಸಿಕ್ಕಿರುವ ಭಾಗ್ಯ ಅದು ಸರ್ವ ಹಿಂದೂ ಧರ್ಮಕ್ಕೆ ಸಂದ ಜಯವಾಗಿದೆ. ಆದರೆ ಇಂದೂ ನಮ್ಮತನವನ್ನು ಮರೆತು ವಿದೇಶಿ ವಸ್ತುಗಳಿಗೆ ಮೊರೆ ಹೋಗುತ್ತಿದ್ದೇವೆ. ಮೇಡ್ ಇನ್ ಇಂಡಿಯಾ ಆಗುವಲ್ಲಿ ನಾವೆಲ್ಲಾ ಧ್ಯೇಯವಾಗಿರಿಸಿಕೊಂಡು ಕೆಲಸ ಮಾಡಬೇಕಾಗಿದೆ’ ಎಂದರು.

ಸಿಂಡಿಕೇಟ್ ಬ್ಯಾಂಕ್‌ನ ಮುಂಬಯಿ ಬ್ರಾಂಚ್‌ನ ಹಿರಿಯ ವ್ಯವಸ್ಥಾಪಕ ಪ್ರಮೋದ್ ಚೆಲ್ಯಡ್ಕರವರು ಮಾತನಾಡಿ `ಧಾರ್ಮಿಕ ಶ್ರದ್ಧೆಯ ಜೊತೆ ಜೊತೆಗೆ ಸಾಮಾಜಿಕ ಜೀವನದಲ್ಲಿ ಹೊಂದಿಕೊಂಡು ವೇಗವಾಗಿ ಸಾಗುತ್ತಿರುವ ಸಮಾಜದೊಡನೆ ನಾವು ಬೆರೆಯಬೇಕು. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಸರಿಯಾದ ಶಿಕ್ಷಣವನ್ನು ನೀಡುವ ಜವಾಬ್ದಾರಿಯನ್ನು ಪ್ರತಿಯೊಬ್ಬ ಪೋಷಕರೂ ನಿರ್ವಹಿಸಬೇಕು’ ಎಂದು ಹೇಳಿದರು.

ಅಪ್ಪೆ ಟೀಚರ್ ತುಳು ಚಿತ್ರದ ನಟಿ ನಿರೀಕ್ಷಾ ಶೆಟ್ಟಿಯವರು ಶುಭ ಹಾರೈಸಿದರು. ವೇದಿಕೆಯಲ್ಲಿ ವಿಟ್ಲದ ಹಿರಿಯ ವೈದ್ಯಾಧಿಕಾರಿ ಡಾ. ವೇದಾವತಿ ಜೆ. ಬಲ್ಲಾಳ್, ರಾಜ್ಯಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದೆ ಪೂರ್ಣಿಮ ಯತೀಶ್ ರೈ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಸಮಿತಿಯ ಕೋಶಾಧಿಕಾರಿ ನಾಗರಾಜ್ ಕಜೆ ಉಪಸ್ಥಿತರಿದ್ದರು. ಅಭಿಯನ ಗೀತೆಯಲ್ಲಿ ಸ್ಪರ್ಧಿಸಿದ್ದ ಅಂಗನವಾಡಿ ಪುಟಾಣಿಗಳಿಗೆ ಈ ಸಂದರ್ಭದಲ್ಲಿ ಪ್ರೋತ್ಸಾಹಕ ಬಹುಮಾನಗಳನ್ನು ವಿತರಿಸಲಾಯಿತು. ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ತಲೆಪ್ಪಾಡಿ ಪ್ರಸ್ತಾವನೆಗೈದರು. ಕು. ಸಮನ್ವಿ ರೈ ಮದಕ ಪ್ರಾರ್ಥಿಸಿದರು. ಅಧ್ಯಕ್ಷ ಸತೀಶ್ ರೈ ಮೂರ್ಕಾಜೆ ಸ್ವಾಗತಿಸಿ, ನಿಕಟಪೂರ್ವ ಕಾರ್ಯದರ್ಶಿ ಜಯರಾಮ ರೈ ಮೂರ್ಕಾಜೆ ವಂದಿಸಿದರು. ಕೃಷ್ಣಪ್ರಸಾದ್ ಬೆಟ್ಟಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕರ್ತರು ವಿವಿಧ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಹಾಪೂಜೆಯಾಗಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ಮಹಾಗಣಪತಿಗೆ ರಂಗಪೂಜೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳು: ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮಧ್ಯಾಹ್ನ ವಿಠಲ ನಾಯಕ್ ಮತ್ತು ಬಳಗ ಕಲ್ಲಡ್ಕ ಇವರಿಂದ `ಗೀತ ಸಾಹಿತ್ಯ ಸಂಭ್ರಮ’ ನಡೆಯಿತು. ಸಂಜೆ ಸ.ಹಿ.ಪ್ರಾ.ಶಾಲೆ ಬೆಟ್ಟಂಪಾಡಿ ಹಾಗೂ ಸ.ಹಿ.ಪ್ರಾ. ಶಾಲೆ ಕಕ್ಕೂರು ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಶಿವಂ ನೃತ್ಯ ಕಲಾ ತಂಡ ಪಡುಮಲೆ ಇದರ ಸದಸ್ಯರಿಂದ ಸಾಂಪ್ರದಾಯಿಕ ನೃತ್ಯ, ರಾತ್ರಿ ಶಾರದಾ ಕಲಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ `ಬಂಜಿಗ್ ಹಾಕೊಡ್ಚಿ’ ತುಳು ನಾಟಕ ಪ್ರದರ್ಶನಗೊಂಡಿತು. ಸೆ. 14 ರಂದು ಬೆಳಿಗ್ಗೆ ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರ ಸಮಾಗಮದೊಂದಿಗೆ `ಯಕ್ಷ ಗಾನಾಮೃತ’ ನಡೆಯಿತು. ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ ಹಾಗೂ ಮಹಿಳಾ ಭಜನಾ ಸಂಘದ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.

ಶೋಭಾಯಾತ್ರೆ: ಸೆ.14 ರಂದು ಸಂಜೆ ಶೋಭಾಯಾತ್ರೆ ಆರಂಭಗೊಂಡು ಚೆಲ್ಯಡ್ಕದ ನದಿಯಲ್ಲಿ ವಿಗ್ರಹದ ಜಲಸ್ತಂಭನ ಮಹೋತ್ಸವ ನಡೆಯಿತು. ಈ ಸಂದರ್ಭದಲ್ಲಿ ನಾಗಬ್ರಹ್ಮ ನಿನ್ನಿಪಡ್ಪು ಪಾಣೆಮಂಗಳೂರು ಇವರಿಂದ ಆಕರ್ಷಕ ಪಿಲಿನಲಿಕೆ ಹಾಗೂ ವಿವೇಕಾನಂದ ಸ್ವಸಹಾಯ ಸಂಘ ಬಾಯಾರು ಇವರಿಂದ ಭಜನಾ ಕಾರ್ಯಕ್ರಮ ಗಮನ ಸೆಳೆಯಿತು.

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.