HomePage_Banner
HomePage_Banner

ಸೌಹಾರ್ದತೆ ಸಾರಿದ ಕೊಳ್ತಿಗೆ ಸೌಹಾರ್ದ ಸಮಿತಿಯ ಸೌಹಾರ್ದ ಶ್ರೀ ಗಣೇಶೋತ್ಸವ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು: ಕಳೆದ ನಾಲ್ಕು ವರ್ಷಗಳಿಂದ ಸೌಹಾರ್ದತೆಯ ಕಾರ್‍ಯಕ್ರಮದ ಮೂಲಕ ಜನಮನ್ನಣೆ ಗಳಿಸಿರುವ ಪ್ರದೀಪ್ ಕುಮಾರ್ ರೈ ಪಾಂಬಾರು ಸಾರಥ್ಯದ ಸೌಹಾರ್ದ ಸಮಿತಿ ಕೊಳ್ತಿಗೆ ಇದರ ಆಶ್ರಯದಲ್ಲಿ 5 ನೇ ವರ್ಷದ ಸೌಹಾರ್ದ ಗಣೇಶೋತ್ಸವ ಕಾರ್‍ಯಕ್ರಮ ಮೊಗಪ್ಪೆಯ ಮುತ್ತು ಮಾರಿಯಮ್ಮ ದೇವಾಲಯದ ಬಳಿಯಲ್ಲಿ ಸೆ.13ರಿಂದ 15ರ ತನಕ ವಿಜೃಂಭಣೆಯಿಂದ ಜರಗಿತು. ಸೆ.13 ರಂದು ಸಮಿತಿಯ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಪಾಂಬಾರುರವರ ಅಧ್ಯಕ್ಷತೆಯಲ್ಲಿ ಸೌಹಾರ್ದ ಸಭಾ ಕಾರ್‍ಯಕ್ರಮ ನಡೆಯಿತು. ಸಮಿತಿಯ ಕಾರ್‍ಯಾಧ್ಯಕ್ಷ ಅಮಳ ರಾಮಚಂದ್ರ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆರ್.ಐ.ಸಿ ರೆಂಜಲಾಡಿ ಇದರ ಸಂಚಾಲಕ ಹುಸೈನ್ ದಾರಿಮಿಯವರು ಸೌಹಾರ್ದತೆಯ ಬಗ್ಗೆ ಸಂದೇಶ ನೀಡಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಬದ್ರುದ್ದಿನ್, ಭಾರತೀಯ ಗಡಿಭದ್ರತಾ ಪಡೆಯ ಯೋಧ ಚಂದ್ರಶೇಖರ ಪೂಜಾರಿ ಮೇರಡ್ಕ, ತಾ.ಪಂ ಮಾಜಿ ಸದಸ್ಯ ಗಂಗಾಧರ್ ಗೌಡ ಕೆಮ್ಮಾರ, ರೋಟರಿ ಕ್ಲಬ್ ಬೆಳ್ಳಾರೆ ಇದರ ಸ್ಥಾಪಕಾಧ್ಯಕ್ಷ ಶ್ಯಾಮ್‌ಸುಂದರ ರೈ ಕೆರೆಮೂಲೆರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಸೌಹಾರ್ದ ಸಮಿತಿಯ ಪ್ರ.ಕಾರ್‍ಯದರ್ಶಿ ಸತ್ತಾರ್ ಅಮಳ ವಂದಿಸಿದರು. ಶಾಹುಲ್ ಅಮಳ ಮತ್ತು ಗುರುಪ್ರಸಾದ್ ಸುಳ್ಯ ಕಾರ್‍ಯಕ್ರಮ ನಿರೂಪಿಸಿದರು. ಸಭಾ ಕಾರ್‍ಯಕ್ರಮದ ಬಳಿಕ ಕೊಳ್ತಿಗೆ ಹಿ.ಪ್ರಾ.ಶಾಲೆಯ ಅತಿಥಿ ಶಿಕ್ಷಕ ಪುರುಷೋತ್ತಮರವರ ನಿರ್ದೇಶನದಲ್ಲಿ ಕೊಳ್ತಿಗೆ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು.ಸುಮಾರು 500 ಕ್ಕೂ ಅನೇಕ ಭಕ್ತಾದಿಗಳು ಸಾಮೂಹಿಕ ಭೋಜನ ಮಾಡಿದರು.

2ನೇ ದಿನ ನಡೆದ ಸೌಹಾರ್ದ ಸಭಾ ಕಾರ್‍ಯಕ್ರಮದಲ್ಲಿ ಸಮಿತಿಯ ಕಾರ್‍ಯಾಧ್ಯಕ್ಷ ಅಮಳ ರಾಮಚಂದ್ರ ಸಭಾಧ್ಯಕ್ಷತೆ ವಹಿಸಿದ್ದರು. ಸಮಿತಿ ಅಧ್ಯಕ್ಷ ಪ್ರದೀಪ್ ಕುಮಾರ್ ರೈ ಪಾಂಬಾರು ಸ್ವಾಗತಿಸಿದರು. ವಿಶೇಷ ಅತಿಥಿಗಳಾಗಿ ಮರೀಲ್ ಚರ್ಚ್‌ನ ಧರ್ಮಗುರು ರೆ.ವೆಲೇರಿಯನ್ ಪ್ರಾಂಕ್‌ರವರು ಸೌಹಾರ್ದ ಸಮಿತಿಯ ಕಾರ್‍ಯವನ್ನು ಶ್ಲಾಘನೆ ಮಾಡುತ್ತಾ, ಮನುಷ್ಯನ ಮನಸ್ಸುಗಳ ಮಧ್ಯೆ ಸೌಹಾರ್ದತೆಯನ್ನು ಮೂಡಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ. ಈ ಕೆಲಸವನ್ನು ಸೌಹಾರ್ದ ಸಮಿತಿ ಮಾಡುತ್ತಿರುವುದು ಮೆಚ್ಚುವಂತಹ ಕೆಲಸವಾಗಿದೆ ಎಂದರು. ಸುದಾನ ದೇವಾಲಯದ ಧರ್ಮಗುರು ರೆ.ವಿಜಯ ಹಾರ್ವಿನ್ ಮಾತನಾಡಿ, ಪ್ರತಿ ಗ್ರಾಮದಲ್ಲಿ ಈ ರೀತಿಯ ಕಾರ್‍ಯಕ್ರಮಗಳು ನಡೆದರೆ ಇಡೀ ತಾಲೂಕಿನಲ್ಲಿ ಸೌಹಾರ್ದತೆ ಮೂಡಲು ಸಾಧ್ಯವಿದೆ ಎಂದರು. ಜಲದುರ್ಗಾದೇವಿ ದೇವಸ್ಥಾನ ಪೆರುವಾಜೆ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ್ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. . ಸತ್ತಾರ್ ಅಮಳ ವಂದಿಸಿದರು. ಗಣೇಶ್ ಶೇಡಿಗುರಿ, ಬಾಲಜೀವನ್ ಮೊಗಪ್ಪೆ, ಷಣ್ಮುಖರಾಜ್ ಮೊಗಪ್ಪೆ, ಗುರುಪ್ರಸಾದ್ ಶೇಡಿಗುರಿ, ಜೀವರಾಜ್‌ಮೊಗಪ್ಪೆ, ಬಾಲಕೃಷ್ಣ ಕೆಮ್ಮಾರ, ಲೋಹಿತ್ ಬಾರಿಕೆ, ಅಬ್ದುಲ್ ರಜಾಕ್ ಬಾಯಂಬಾಡಿ, ತ್ರಿಶೋದ್ ರೈ ಸಹಕರಿಸಿದ್ದರು. ಶಾಹುಲ್ ಅಮಳ ಕಾರ್‍ಯಕ್ರಮ ನಿರೂಪಿಸಿದರು. ಮಧ್ಯಾಹ್ನದ ಬಳಿಕ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಪುತ್ತೂರು, ಸುಳ್ಯ ತಾಲೂಕಿನ 16 ತಂಡಗಳು ಭಾಗವಹಿಸಿದ್ದವು. ಎನ್‌ಎಂಸಿ ಸುಳ್ಯ ಚಾಂಪಿಯನ್ ಆಗಿ, ಪ್ರಗತಿ ಪಡ್ಪಿನಂಗಡಿ ರನ್ನರ್ ಆಗಿ, ಮುತ್ತುಶ್ರೀ ಮೊಗಪ್ಪ ತೃತೀಯ ಸ್ಥಾನಗಳಿಸಿಕೊಂಡಿತ್ತು. ಸಂಭ್ರಮ ಕಲಾವಿದರು ಸುಳ್ಯ ಇವರಿಂದ ಕುಶಾಲ್ದ ಚರುಂಬುರಿ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು. ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಸಾಧಕರಿಗೆ ಸನ್ಮಾನ
ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ, ವಿಶ್ರಾಂತ ಮುಖ್ಯಗುರು ಎ.ವಿ ನರಸಿಂಹರವರಿಗೆ, ಕೊಳ್ತಿಗೆ ಗ್ರಾಮದ ರಾಷ್ಟ್ರಮಟ್ಟದ ಕ್ರೀಡಾಪ್ರತಿಭೆಗಳಾದ ಕು.ರಚಿತಾ ಕೆ.ಎಂ ಮತ್ತು ಕು.ಕೆ.ಧನ್ಯಶ್ರೀಯವರುಗಳನ್ನು ಸಮಿತಿ ವತಿಯಿಂದ ಶಾಲು, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.

ಗಣೇಶೋತ್ಸವಕ್ಕೆ ಮೆರುಗು ನೀಡಿದ ಹಾಸ್ಯ ನಟ ಅರವಿಂದ ಬೋಳಾರ್

ಎರಡನೇ ದಿನದ ಕಾರ್‍ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ತುಳು ಚಿತ್ರರಂಗದ ಹಾಸ್ಯ ಕಲಾವಿದ ತುಳುವ ಮಾಣಿಕ್ಯ ಅರವಿಂದ್ ಬೋಳಾರ್ ಆಗಮಿಸಿದ್ದರು. ಕಾರ್‍ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ದೇಶದ ಮೂರು ಪ್ರಮುಖ ಧರ್ಮದ ಜನರೆಲ್ಲಾ ಸೇರಿಕೊಂಡು ಗಣೇಶೋತ್ಸವ ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಎಂದಿನ ತಮ್ಮ ಹಾಸ್ಯ ಶೈಲಿಯ ಭಾಷಣದಲ್ಲಿ ನೆರೆದಿದ್ದ ಜನರನ್ನು ರಂಜಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.