HomePage_Banner
HomePage_Banner
HomePage_Banner
HomePage_Banner

`ಪಾರ್ಕಿಂಗ್, ಸ್ವಚ್ಚತೆ ಸಮಸ್ಯೆ ಬಗೆಹರಿಸುವ ಉದ್ದೇಶ’ ನೆ.ಮುಡ್ನೂರು ಗ್ರಾ.ಪಂ ನೇತೃತ್ವದಲ್ಲಿ ವರ್ತಕರ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನೆ.ಮುಡ್ನೂರು ಗ್ರಾ.ಪಂ ವ್ಯಾಪ್ತಿಯ ವರ್ತಕರ ಸಭೆ ಸೆ.26ರಂದು ಗ್ರಾ.ಪಂ ನೇತೃತ್ವದಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ಅಧ್ಯಕ್ಷೆ ಶಂಕರಿ ಆರ್ ಭಂಡಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮುಖ್ಯವಾಗಿ ಪಾರ್ಕಿಂಗ್ ಸಮಸ್ಯೆ ವಿಚಾರ ಪ್ರತಿಧ್ವನಿಸಿತು. ಈಶ್ವರಮಂಗಲ ಪೇಟೆಯಲ್ಲಿ ವಾಹನ ಪಾರ್ಕಿಂಗ್ ಸಮಸ್ಯೆ ದಿನೇ ದಿನೇ ಬಿಗಡಾಯಿಸುತ್ತಿದ್ದು ಜನ ಸಾಮಾನ್ಯರು ಮತ್ತು ವರ್ತಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ, ಹಾಗಾಗಿ ಇದಕ್ಕೆ ಪರಿಹಾರ ಕಲ್ಪಿಸಬೇಕಾದ ಅಗತ್ಯವಿದೆ ಎಂಬ ಆಗ್ರಹ ವ್ಯಕ್ತವಾಯಿತು. ವರ್ತಕ ಸಂಘದ ಅಧ್ಯಕ್ಷ ರಾಮ್‌ಪ್ರಸಾದ್ ಆಳ್ವ ಮಾತನಾಡಿ ಈಶ್ವರಮಂಗಲ ಪೇಟೆಯ ಪಾರ್ಕಿಂಗ್ ಸಮಸ್ಯೆ ನಿವಾರಣೆಗೆ ಗ್ರಾ.ಪಂ ಮುತುವರ್ಜಿ ವಹಿಸಿ ಸ್ಥಳೀಯ ವರ್ಗ ಜಾಗ ಇರುವ ಮಾಲೀಕರ ಜೊತೆ ಮಾತುಕತೆ ನಡೆಸಬೇಕು, ಗ್ರಾ.ಪಂ ವತಿಯಿಂದ ವರ್ಗ ಜಾಗದ ಮಾಲೀಕರ ಜೊತೆ ಮಾತುಕತೆ ನಡೆದರೆ ಪಾರ್ಕಿಂಗ್‌ಗೆ ಸ್ಥಳಾವಕಾಶ ಲಭಿಸುವ ಎಲ್ಲ ಸಾಧ್ಯತೆಗಳು ಇದೆ ಎಂದು ಹೇಳಿದರು. ಉಪಾಧ್ಯಕ್ಷ ಶ್ರೀರಾಂ ಪಕ್ಕಳ ಉತ್ತರಿಸಿ ಈ ಬಗ್ಗೆ ವರ್ಗ ಜಾಗ ಹೊಂದಿರುವವರ ಜೊತೆ ಮಾತನಾಡುವುದಾಗಿ ಭರವಸೆ ನೀಡಿದರು. ಹೊಟೇಲ್ ಮಾಲೀಕ ಸೀತಾರಾಮ ರೈ ಮಾತನಾಡಿ ಅಂಗಡಿ, ಹೊಟೇಲ್ ಮುಂದೆ ವಾಹನ ನಿಲ್ಲಿಸಿ ಹೋಗುತ್ತಾರೆ, ಕೇಳಿದರೆ ನಮ್ಮನ್ನೇ ತರಾಟೆಗೆತ್ತಿಕೊಳ್ಳುತ್ತಾರೆ ಎಂದು ಹೇಳಿದರು. ಹೊಟೇಲ್ ಮಾಲೀಕ ನಾಗರಾಜ್ ಭಟ್ ಮಾತನಾಡಿ ಹೋಟೆಲ್‌ಗಳಿಗೆ ಡ್ರೈನೇಜ್ ವ್ಯವಸ್ಥೆ ಆಗಬೇಕು, ನಾನು ಈಗಾಗಲೇ ತುಂಬಾ ಖರ್ಚು ಮಾಡಿದ್ದೇನೆ ಎಂದರು. ಶ್ರೀರಾಂ ಪಕ್ಕಳ ಉತ್ತರಿಸಿ ಈ ಬಗ್ಗೆ ಸಂಬಂಧಪಟ್ಟವರಿಗೆ ಹಿಂದೆಯೇ ಬರೆದುಕೊಳ್ಳಲಾಗಿದೆ ಎಂದರು. ಪೇಟೆಯ ಚರಂಡಿ ಮುಚ್ಚಿಸಿದರೆ ಪಾರ್ಕಿಂಗ್‌ಗೆ ಸ್ಥಳಾವಕಾಶ ಸಿಗಬಹುದು ಎಂದು ಜತ್ತಪ್ಪ ಗೌಡ ಹೇಳಿದರು. ಇದಕ್ಕೆ ಉಪಾಧ್ಯಕ್ಷರು ಉತ್ತರಿಸಿದರು. ಪಾರ್ಕಿಂಗ್ ವಿಚಾರವಾಗಿ ಈಶ್ವರಮಂಗಲ ಹೊರಠಾಣಾ ಎಎಸ್ಸೈ ಸುರೇಶ್ ರೈ ಅವರೂ ಸಲಹೆ ಸೂಚನೆ ನೀಡಿದರು. ಪೇಟೆಯ ವಾಹನ ಪಾರ್ಕಿಂಗ್ ವಿಚಾರವಾಗಿ ಗಂಭೀರ ಚರ್ಚೆ ನಡೆಯಿತಾದರೂ ಸ್ಪಷ್ಟ ತೀರ್ಮಾನಕ್ಕೆ ಬರಲು ಮಾತ್ರ ಸಾಧ್ಯವಾಗಿಲ್ಲ.

ತಲೆ ನೋವಾಗಿ ಪರಿಣಮಿಸಿದ ಸ್ವಚ್ಚತೆ ಸಮಸ್ಯೆ: ವರ್ತಕ ಅಮರನಾಥ ಆಳ್ವ ಮಾತನಾಡಿ ಅಂಗಡಿಯ ಕಸ ಎಲ್ಲೆಂದರಲ್ಲಿ ಬಿಸಾಡಿರುವುದರಿಂದ ಸ್ವಚ್ಚತೆ ಸಮಸ್ಯೆ ತಲೆದೋರಿದೆ, ಹಿಂದೆ ಪೇಟೆಯಲ್ಲಿದ್ದ ಕಸದ ತೊಟ್ಟಿಯೂ ಈಗ ಇಲ್ಲದಾಗಿದೆ ಎಂದರು. ಪಿಡಿಓ ಸುನಿಲ್ ಎಚ್.ಟಿ ಉತ್ತರಿಸಿ ಕಸದ ತೊಟ್ಟಿ ಇಟ್ಟರೆ ಅದರಲ್ಲಿ ಪ್ರಾಣಿಗಳು ಸತ್ತರೂ ತಂದು ಹಾಕುತ್ತಾರೆ, ಮನೆಯ ತ್ಯಾಜ್ಯಗಳನ್ನೂ ಹಾಕುತ್ತಾರೆ. ಹಾಗಾಗಿ ಅದನ್ನು ಇಡುವ ಪ್ರಶ್ನೆಯೇ ಇಲ್ಲ, ಈಗ ಬದಲಿ ವ್ಯವಸ್ಥೆ ಮಾಡಲಾಗುತ್ತಿದ್ದು ಗ್ರಾ.ಪಂ ವಿಲೇವಾರಿ ಮಾಡುತ್ತಿದೆ ಎಂದರು.

ಪ್ರತೀ ಅಂಗಡಿಗಳಿಗೆ ಡಸ್ಟ್‌ಬಿನ್ ಕೊಡಿ-ಅಬ್ದುಲ್ ರಹಿಮಾನ್: ಉದ್ಯಮಿ, ಜಯಕರ್ನಾಟಕ ಈಶ್ವರಮಂಗಲ ವಲಯಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಮಾತನಾಡಿ ಗ್ರಾ.ಪಂ ವತಿಯಿಂದ ಪ್ರತೀ ಅಂಗಡಿ ಮುಂಗಟ್ಟುಗಳಿಗೂ ಡಸ್ಟ್ ಬಿನ್ ವಿತರಣೆ ಮಾಡಿ, ಅದಕ್ಕೆ ತಗಲುವ ವೆಚ್ಚವನ್ನು ನಾವು ಕೊಡಲೂ ಸಿದ್ದ ಎಂದು ಹೇಳಿದರು. ಉಪಾಧ್ಯಕ್ಷ ಶ್ರೀರಾಂ ಪಕ್ಕಳ ಮಾತನಾಡಿ ಇದು ಒಳ್ಳೆಯ ಸಲಹೆ, ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ತೀರ್ಮಾನಿಸುತ್ತೇವೆ ಎಂದರು. ರಾಮ್‌ಪ್ರಸಾದ್ ಆಳ್ವ ಮಾತನಾಡಿ ಡಸ್ಟ್‌ಬಿನ್‌ನಲ್ಲಿ ಹಾಕಿದ ಕಸವನ್ನು ಗ್ರಾ.ಪಂ ಸಮರ್ಪಕವಾಗಿ ವಿಲೇವಾರಿ ಮಾಡಬೇಕೆಂದು ಸಲಹೆ ನೀಡಿದರು.

ಮೀನು ಮಾರಾಟ ಪ್ರತ್ಯೇಕ ಸ್ಥಳದಲ್ಲಿ ಆಗಲಿ: ಈಶ್ವರಮಂಗಲ ಪೇಟೆಯಲ್ಲಿ ಮೀನು ವ್ಯಾಪಾರ ಮಾಡುವುದರಿಂದ ದುರ್ವಾಸನೆ ಬೀರುತ್ತಿದ್ದು ಅದನ್ನು ಅಲ್ಲಿಂದ ಅಲ್ಪ ದೂರಕ್ಕೆ ಸ್ಥಳಾಂತರಿಸಿದರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಮೀನು ವ್ಯಾಪಾರಸ್ಥರಿಗೆ ನಮ್ಮ ವಿರೋಧವಿಲ್ಲ, ವಾಸನೆ ವಿಚಾರದಲ್ಲಿ ಅಲ್ಪ ಬದಲಾವಣೆ ಮಾಡಿ ಪ್ರತ್ಯೇಕ ಸ್ಥಳ ಕಂಡು ಹುಡುಕಿದರೆ ಉತ್ತಮ ಎಂಬ ಸಲಹೆಯೂ ವ್ಯಕ್ತವಾಯಿತು.

ಪರವಾನಿಗೆ ಕಟ್ಟುನಿಟ್ಟಾಗಿ ಪಾಲಿಸಿ-ಪಿಡಿಓ: ವ್ಯಾಪಾರ ಪರವಾನಿಗೆ ಮತ್ತು ನವೀಕರಣ ಶುಲ್ಕವನ್ನು ವರ್ತಕರು ಸರಿಯಾಗಿ ಪಾವತಿಸಬೇಕು, ಇದರಿಂದ ಪೇಟೆಯ ಅಭಿವೃದ್ಧಿಗೆ ಅನುದಾನ ಬಳಕೆ ಮಾಡಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ ಎಂದರು.

ವರ್ತಕರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಿ-ರಮೇಶ್ ರೈ: ಗ್ರಾ.ಪಂ ಸದಸ್ಯ ರಮೇಶ್ ರೈ ಸಾಂತ್ಯ ಮಾತನಾಡಿ ಪ್ರತೀ ವರ್ತಕರು ಗ್ರಾಹಕರಿಗೆ ಪಾರ್ಕಿಂಗ್ ಹಾಗೂ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು, ಆಗ ಸಾಧ್ಯವಾದಷ್ಟು ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗಬಹುದು ಎಂದು ಹೇಳಿದರು. ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ಸುಮಾರು 40ಕ್ಕೂ ಅಧಿಕ ಮಂದಿ ವರ್ತಕರು ಭಾಗವಹಿಸಿ ವಿವಿಧ ಚರ್ಚೆಯಲ್ಲಿ ಭಾಗಿಯಾದರು. ಪಿಡಿಓ ಸುನಿಲ್ ಎಚ್.ಟಿ ಸ್ವಾಗತಿಸಿ ವಂದಿಸಿದರು. ಗ್ರಾ.ಪಂ ಸಿಬ್ಬಂದಿಗಳಾದ ಶೀನಪ್ಪ, ಮಲ್ಲೇಶ್, ಅಬ್ದುಲ್ ರಹಿಮಾನ್, ಚಂದ್ರಶೇಖರ ಸಹಕರಿಸಿದರು.

ಅಟೋ ರಿಕ್ಷಾ ಪಾರ್ಕಿಂಗ್‌ನಿಂದ ಸಮಸ್ಯೆ:- ಈಶ್ವರಮಂಗಲ ಪೇಟೆಯ ಬಳಿ ಕ್ಯೂ ನಿಲ್ಲಿಸಿ ಬಾಡಿಗೆ ಮಾಡುವ ಅಟೋ ರಿಕ್ಷಾ ಚಾಲಕರು ತಮ್ಮ ರಿಕ್ಷಾವನ್ನು ಸಾಲಾಗಿ ನಿಲ್ಲಿಸುವುದರಿಂದ ಸಮೀಪದಲ್ಲಿರುವ ಅಂಗಡಿಗಳಿಗೆ ಬರುವ ಗ್ರಾಹಕರಿಗೆ ತೊಂದರೆಯಾಗಿದೆ ಎಂಬ ವಿಚಾರ ಪ್ರಸ್ತಾಪಗೊಂಡಿತು. ಇದಕ್ಕೆ ಉತ್ತರಿಸಿದ ಸ್ಥಳೀಯ ಪೊಲೀಸ್ ಠಾಣಾ ಎಎಸ್ಸೈ ಸುರೇಶ್ ರೈಯವರು ಈ ಬಗ್ಗೆ ರಿಕ್ಷಾ ಯೂನಿಯನ್‌ನವರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಎಂದರು. ಉಪಾಧ್ಯಕ್ಷ ಶ್ರೀರಾಂ ಪಕ್ಕಳರವರೂ ಸದ್ರಿ ವಿಚಾರವನ್ನು ಮಾತುಕತೆ ಮೂಲಕ ಬಗೆಹರಿಸುವುದಾಗಿ ಭರವಸೆ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.