HomePage_Banner
HomePage_Banner
HomePage_Banner
HomePage_Banner

ಮಕ್ಕಳಿಗಾಗಿ ಶ್ರೀಮದ್ ಭಗವದ್ಗೀತಾ.. ‘ಸಜ್ಜನರ ಸಂಗ ಹೆಜ್ಜೇನು ಸವಿದಂತೆ’

Puttur_Advt_NewsUnder_1
Puttur_Advt_NewsUnder_1


ಉಪನ್ಯಾಸಕ: ದುರ್ಗಾಪರಮೆಶ್ವರ ಭಟ್

ಭಗವದ್ಗೀತೆಯ ಪ್ರಾರಂಭದಲ್ಲಿ ದೃತರಾಷ್ಟ್ರ ಸಂಜಯನ ಬಳಿ ಕುರುಕ್ಷೇತ್ರವನ್ನು ಕುರಿತು ಕೇಳುವ ಶ್ಲೋಕವನ್ನು ನಾವು ಕಾಣಬಹುದು.
ದೃತರಾಷ್ಟ್ರ ಉವಾಚ….

IIಧರ್ಮ ಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವ:
ಮಾಮಕಾ: ಪಾಂಡವಾಶ್ಚೈವ ಕಿಮಕುರ್ವತ ಸಂಜಯII

ಹೌದೂ ಅಷ್ಟಕ್ಕೂ ದೃತರಾಷ್ಟ್ರ ಸಂಜಯನ ಬಳಿ ಕುರುಕ್ಷೇತ್ರದ ಬಗ್ಗೆ ಯಾಕೆ ಕೇಳಿ ತಿಳಿದುಕೊಳ್ಳಬೇಕಿತ್ತು?
ನಿಮಗೆಲ್ಲಾ ತಿಳಿದಿರುವ ಹಾಗೇ, ದೃತರಾಷ್ಟ್ರ ಹುಟ್ಟಿನಿಂದಲೇ ಕುರುಡ. ಹಾಗಾಗಿ ತಮ್ಮ ಮಕ್ಕಳು ಹೇಗಿದ್ದಾರೆ ಅನ್ನುವುದನ್ನು ತಿಳಿಯಬೇಕಾಗಿತ್ತು. ಈ ಹಿಂದೆ ವ್ಯಾಸರು ದೃತರಾಷ್ಟ್ರನ ಬಳಿಗೆ ಬಂದು ಯುದ್ಧವನ್ನು ನೋಡುವುದಕ್ಕೆ ತಮ್ಮ ಕಣ್ಣುಗಳನ್ನು ಕೊಡುತ್ತೇನೆ ಎಂದು ಹೇಳಿದ್ದರು.

ಆದರೇ, ದೃತರಾಷ್ಟ್ರನಿಗೆ ಮದುವೆಯದಾಗ ತನ್ನ ಹೆಂಡತಿಯನ್ನು ನೋಡಲು ಕಣ್ಣುಗಳಿರಲಿಲ್ಲ,ಹುಟ್ಟಿದ ಮಕ್ಕಳನ್ನು ನೋಡಲಾಗಲಿಲ್ಲ,ಮಕ್ಕಳು ಬೆಳೆಯುತ್ತಿದ್ದಂತೆ ಅವರ ಬಾಲ ಲೀಲೆಯನ್ನು ನೋಡಿ ಕಣ್ತುಂಬಿಕೊಳ್ಳಲಾಗಲಿಲ್ಲ.ವೀರ ಪರಾಕ್ರಮಿಗಳಾದಾಗಲೂ ನೋಡಲಾಗದ ದೃತರಾಷ್ಟ್ರನು ಈಗ ತನ್ನ ಮಕ್ಕಳು ಯುದ್ಧ ಭೂಮಿಯಲ್ಲಿ ರಕ್ತದ ಓಕುಳಿಯಲ್ಲಿ ತೊಲಲಾಡುವುದನ್ನು ನೋಡಲು ಬಯಸುವನೇ?

ಅಲ್ಲೇ ಪಕ್ಕದಲ್ಲಿ ನಿಂತಿದ್ದ ಸಂಜಯನಿಗೆ ವ್ಯಾಸರು ಒಂದು ವಿಷೇಶವಾದ ಶಕ್ತಿಯನ್ನು ನೀಡುತ್ತಾರೆ.ಆ ಶಕ್ತಿಯ ಉಪಯೋಗದಿಂದ ಸಂಜಯನು ಯುದ್ಧ ಭೂಮಿಯಲ್ಲಿ ನಡೆಯುವ ಎಲ್ಲಾ ಸಂಗತಿಗಳನ್ನು ತಿಳಿದುಕೊಳ್ಳಬಹುದಿತ್ತು.ಆದ್ದರಿಂದ ದೃತರಾಷ್ಟ್ರ ಸಂಜಯನ ಬಳಿ ಪ್ರಶ್ನಿಸುತ್ತಿರುವುದು.

ಯಾಕೇ ಧರ್ಮ ಕ್ಷೇತ್ರೇ – ಕುರುಕ್ಷೇತ್ರೇ ಎಂದು ಉಲ್ಲೇಖವಾಯಿತು?
ಇಲ್ಲಿ ಧರ್ಮ ಕ್ಷೇತ್ರೇ ಎನ್ನುವುದು ಓಳ್ಳೆಯ ವಿಚಾರಗಳನ್ನು , ಕುರುಕ್ಷೇತ್ರೇ ಕೆಟ್ಟ ಸಂಗತಿಗಳನ್ನು ತೋರುವಂತಿದೆ.ಕೌರವರು ಮತ್ತು ಪಾಂಡವರು ಯುದ್ಧಕ್ಕಾಗಿ ಆರಿಸಿಕೊಂಡ ಸ್ಥಳ ಈ ಹಿಂದೆ ಸಾವಿರಾರು ಋಷಿಗಳು ನೆಲೆಸಿ ಧ್ಯಾನ ತಪಸ್ಸು ಮುಂತಾದ ಸತ್ಕರ್ಮಗಳನ್ನು ಮಾಡುತ್ತಿದ್ದರು.ಆದ್ದರಿಂದ ಅದು ಧರ್ಮಕ್ಷೇತ್ರೇ.ಈಗ ಕುರುಕ್ಷೇತ್ರವಾಗಿ ಬದಲಾಗಿದೆ.

ಆ ಧರ್ಮಕ್ಷೇತ್ರದಲ್ಲಿ ಈ ಹಿಂದೆ ಋಷಿಗಳ ಸಾತ್ವಿಕ ಅಂಶವು ಅರ್ಜುನನ ಮೇಲೇ ಪರಿಣಾಮ ಬೀರುತ್ತಿದೆ.ಹಾಗಾಗಿ ಆ ಓಳ್ಳೇಯ ಗುಣದಿಂದಾಗಿ ಅರ್ಜುನ ಯುದ್ಧವನ್ನು ಮಾಡಲು ಒಂದು ಕ್ಷಣ ಹಿಂದೆ ಮುಂದೆ ಆಲೋಚಿಸಿದ.ಮತ್ತೆ ಶ್ರೀಕೃಷ್ಣ ಅದಕ್ಕೋಂದು ವೇಗವನ್ನು ಕೊಟ್ಟನು.

ಆದರೇ ದೃತರಾಷ್ಟ್ರನ ಮಾತುಗಳೆಲ್ಲವೂ ದುರ್ಯೋಧನನ ಮೇಲೆ ಕೇಂದ್ರೀಕೃತವಾಗಿದೆ ಎಂಬಂತೆ ತೋರುತ್ತಿದೆ.ಯಾಕೆಂದರೆ,ತನ್ನ ಮಗನಾದ ದುರ್ಯೋಧನನಲ್ಲೂ ಏನಾದರೂ ಬದಲಾವಣೆ ಕಾಣಬಹುದೇ ಎಂಬ ಆಸಕ್ತಿಯಿಂದ ಸಂಜಯನಲ್ಲಿ ಕೇಳುತ್ತಿದ್ದಾನೆ.

ನಮ್ಮಲ್ಲೂ ಅನೇಕ ಹೆತ್ತವರೂ ತಮ್ಮ ಮಕ್ಕಳಲ್ಲಿ ಓಳ್ಳೆಯ ಸ್ನೇಹಿತರನ್ನು ಆಯ್ಕೆ ಮಾಡಲು ತಿಳಿಸುತ್ತಾರೆ,ಸಜ್ಜನರ ಸಂಗ ಹೆಜ್ಜೇನು ಸವಿದಂತೆ.ನಾವು ಆಯ್ಕೆ ಮಾಡುವ ಸ್ನೇಹಿತರಿಂದಲೇ ನಮ್ಮ ಬದುಕು ಮತ್ತು ವ್ಯಕ್ತಿತ್ವ ರೂಪುಗೊಳ್ಳುತ್ತದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.