HomePage_Banner
HomePage_Banner
HomePage_Banner
HomePage_Banner

ಮಕ್ಕಳಿಗಾಗಿ ಶ್ರೀಮದ್ ಭಗವದ್ಗೀತಾ… “ ಗುರುಭಕ್ತಿಯಿಂದ ಜಗತ್ತನ್ನು ಗೆಲ್ಲಬಹುದು ”

Puttur_Advt_NewsUnder_1
Puttur_Advt_NewsUnder_1


ಉಪನ್ಯಾಸಕ: ದುರ್ಗಾಪರಮೇಶ್ವರ ಭಟ್

“ ಗುರುಭಕ್ತಿಯಿಂದ ಜಗತ್ತನ್ನು ಗೆಲ್ಲಬಹುದು ”
ಅಧ್ಯಾಯ 01,ಶ್ಲೋಕ 2. ದೃತರಾಷ್ಟ್ರನಿಗೆ ಕುರುಕ್ಷೇತ್ರದ ಬಗೆಗೆ ಮಾಹಿತಿಯನ್ನು ತಿಳಿಸುವುದಕ್ಕಾಗಿ ಸಂಜಯನು ಹೇಳುತ್ತಿದ್ದಾನೆ.

ಸಂಜಯ ಉವಾಚ….
II ದೃಷ್ಟ್ವಾತು ಪಾಂಡವಾನೀಕಂ ವ್ಯೂಢಾಂ ದುರ್ಯೋಧನಸ್ತದಾ
ಆಚಾರ್ಯಮುಪಸಂಗಮ್ಯ ರಾಜಾ ವಚನಮಬ್ರವೀತ್ II2II
ಅರ್ಜುನನ ಕಡೆಗೆ ದೃಷ್ಠಿ ಹಾಯಿಸುತ್ತಿದ್ದ ದುರ್ಯೋಧನ, ಆ ಪಾಂಡವರ ಅಚ್ಚುಕಟ್ಟಾದ ಸೇನಾ ರಚನೆಯನ್ನು ಕಾಣುತ್ತಿದ್ದಾನೆ.ಒಟ್ಟು ಹದಿನೆಂಟು ಅಕ್ಷೋಣಿ ಸೈನ್ಯದಲ್ಲಿ ಏಳು ಅಕ್ಷೋಣಿ ಸೈನ್ಯ ಅರ್ಜುನನ ಬಳಿ ಇತ್ತು ಅಷ್ಟೇ.

ಈ ಸೈನ್ಯವನ್ನು ನೋಡಿ ದುರ್ಯೋಧನ ಏನನ್ನೋ ಹೇಳುವುದಕ್ಕಾಗಿ ತನ್ನ ಗುರು ದ್ರೋಣಾಚಾರ್ಯರ ಬಳಿಗೆ ತೆರಳುತ್ತಾನೆ.ಇಂತಹ ಶಿಸ್ತು ಬದ್ಧವಾದ ಸೈನ್ಯವನ್ನು ಕಂಡಾಗ ದುರ್ಯೋಧನನಿಗೆ ಆತಂಕ ಹೆಚ್ಚಾಯಿತು.ಇದು ದುರ್ಯೋಧನನಿಗೆ ಮೊದಲ ಬಾರಿಗೆ ಆದ ಮಾನಸಿಕ ಆಘಾತ.ಹಾಗಾಗಿ ತನ್ನ ಗುರುಗಳ ಬಳಿ ತೆರಳುತ್ತಾನೆ.ಆದರೇ ಇಲ್ಲಿ ಗಮನಿಸಬೇಕಾದುದು ಏನೆಂದರೇ ದುರ್ಯೋಧನ ಗುರುವಿನ ಬಳಿಗೆ ವಿನಮ್ರತೆ-ನಂಬಿಕೆಯಿಂದ ತೆರಳದೇ ಏನನ್ನೋ ಆಜ್ಞಾಪಿಸುವುದಕ್ಕಾಗಿ ಹೊರಟ್ಟಿದ್ದಾನೆ. ಗೆದ್ದೇ ಗೆಲ್ಲುತ್ತೇನೆಂಬ ಅಹಂಕಾರದ ಮದ ತಲೆಗೇರಿದೆ. ಒಂದೆಡೆ ಮಾನಸಿಕ ಅಸಮತೋಲನ , ಇನ್ನೊಂದೆಡೆ ‘ನಾನೊಬ್ಬನೇ’ ಅನ್ನುವ ಅಹಂಕಾರ.ಇವೆರಡು ಒಬ್ಬ ವ್ಯಕ್ತಿ ನಾಶ ಹೊಂದುವುದರ ಮುನ್ಸೂಚನೆ.

ಅಹಂಕಾರ-ನಂಬಿಕೆ ಬಗೆಗೆ ಶ್ರೀರಾಮಕೃಷ್ಣ ಪರಮಹಂಸರು ಒಂದೆಡೆ ಹೀಗೆ ಹೇಳುತ್ತಿದ್ದರು, ”ಒಬ್ಬ ಶಿಷ್ಯ ಗುರುವಿನ ನಾಮ ಸ್ಮರಣೆಯಿಂದ ನದಿಯ ಮೆಲೆ ನಡೆದುಕೊಂಡು ಹೋಗುತ್ತಿದ್ದ.ಇದನ್ನು ಕಂಡ ಗುರು ನನ್ನ ಹೆಸರಿಗೆಷ್ಟು ಶಕ್ತಿ ಇದೆ ಎಂದು ಅಹಂಕಾರ ಪಡುತ್ತಾ ಮರುದಿನ ನಾನು- ನಾನು ಎನ್ನುವ ಮನೋಭಾವದಿಂದ ನೀರ ಮೇಲೆ ಕಾಲಿಟ್ಟು ನಾನು ಎನ್ನುವ ಅಹಂಕಾರದಿಂದಲೇ ನಾಶ ಹೊಂದಿದ”.

‘ನಾನು ಹೋದರೆ ನಾನು ಹೋದೆನು ಸ್ವರ್ಗಕ್ಕೆ’ ಅನ್ನುವುದು ನಿಜ.ಇಲ್ಲಿ ಶಿಷ್ಯನಾದ ಅರ್ಜುನನಲ್ಲಿ ನಂಬಿಕೆಯನ್ನೂ, ದುರ್ಯೋಧನನಲ್ಲಿ ಅಹಂಕಾರವನ್ನು ಕಾಣುತ್ತೇವೆ.ಈಗಿನ ಮಕ್ಕಳು ಕೂಡಾ ತನ್ನ ಶಕ್ತಿಯನ್ನು ಅರಿಯದೇ ಇನ್ನೊಬ್ಬರಲ್ಲಿನ ಶಕ್ತಿ ಸಾಮರ್ಥ್ಯದ ಬಗ್ಗೆ ಕಾಣುತ್ತಾ ಮಾನಸಿಕ ಅಸಮತೋಲನವನ್ನು ಹೊಂದುತ್ತಾರೆ. ಇದು ಅಹಂಕಾರವನ್ನು ಜಾಗೃತಗೊಳಿಸುತ್ತದೆ.ನಾನೊಬ್ಬನೇ ಎಂಬ ದುರಾಹಂಕಾರದ ಮನೋಭಾವನೆ ಹೆಚ್ಚಾಗುತ್ತದೆ.ಯಾರು ಗುವಿನೆಡೆಗೆ ವಿನಮ್ರತೆಯಿಂದ ತೆರಳುತ್ತಾನೋ ಆತನಿಗೆ ಗೆಲುವು ಖಚಿತ.ಇಂತಹ ಸಾತ್ವಿಕ ಗುಣ ಅರ್ಜುನನಲ್ಲಿತ್ತು.ಯಾಕೆಂದರೇ ಈಗ ರಣರಂಗದಲ್ಲಿ ಎದುರಾಳಿಯಾಗಿದ್ದ ದುರ್ಯೋಧನನ ಜೊತೆಗೆ ಗುರುವಿನ ಸ್ಥಾನದಲ್ಲಿರುವುದು ತನ್ನ ಗುರುವಾಗಿದ್ದ ಅದೇ ದ್ರೋಣಾಚಾರ್ಯರು.ಹಾಗಾಗಿ ಮುಂದೆ ಅರ್ಜುನ ಈ ಯುದ್ಧ ಅಗತ್ಯವಿದೆಯೇ ಎಂದು ಶ್ರೀಕೃಷ್ಣನಲ್ಲಿ ಕೇಳುತ್ತಾನೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.