HomePage_Banner
HomePage_Banner
HomePage_Banner
HomePage_Banner

ಮಕ್ಕಳಿಗಾಗಿ ಶ್ರೀಮದ್ ಭಗವದ್ಗೀತಾ… “ದೃಢತೆ ಸಾಧಕನ ಮೊದಲ ನಡೆ”

Puttur_Advt_NewsUnder_1
Puttur_Advt_NewsUnder_1

ಉಪನ್ಯಾಸಕ: ದುರ್ಗಾಪರಮೇಶ್ವರ ಭಟ್

ದೃಢತೆ ಸಾಧಕನ ಮೊದಲ ನಡೆ
ಅಧ್ಯಾಯ 01,ಶ್ಲೋಕ 04. ದುರ್ಯೋಧನನು ಪಾಂಡವರ ಸೇನೆಯ ಕುರಿತು ದ್ರೋಣಾಚಾರ್ಯರ ಬಳಿ ವರ್ಣಿಸುತ್ತಿದ್ದಾನೆ.

II ಅತ್ರ ಶೂರಾ ಮಹೇಷ್ವಾಸಾ ಭೀಮಾರ್ಜುನಸಮಾ ಯುಧಿ I
ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥ: II4II

ಬದುಕಿನಲ್ಲಿ ದೃಢತೆ ಇಲ್ಲದೆ ಹೋದರೆ ಏನನ್ನೂ ಸಾಧಿಸಲಿಕ್ಕೆ ಸಾಧ್ಯವಿಲ್ಲ. ತಪ್ಪಾದ ಹಾದಿಯಲ್ಲಿ ನಡೆಯುವ ಮನುಷ್ಯ ತನ್ನ ನಿಜವಾದ ದಾರಿಯನ್ನು ಮುಟ್ಟಲಾರ,ಗುರಿಯನ್ನು ತಲುಪಲಾರ.ಅವನು ನಡೆಯುವ ದಾರಿಯಲ್ಲಿ ಏನೇ ಅಡ್ಡಿ-ಆತಂಕಗಳು ಬರಲಿ ಅವುಗಳನ್ನು ಎದುರಿಸಿ ಮುನ್ನಡೆಯುವ ಸಾಹಸಿಯಾಗಿರುತ್ತಾನೆ.ಬದುಕಿನ ಪರೀಕ್ಷೆಯಲ್ಲಿ ಪಾಸಾಗಬೇಕಾದರೆ ದೃಢತೆಯೇ ಮುಖ್ಯ.ನಮ್ಮ ಜೀವನದ ಬಹಳಷ್ಟು ಭಾಗವನ್ನು ನಮಗೋಸ್ಕರ ಅಲ್ಲದೆ ಅನ್ಯರಿಗೋಸ್ಕರ ಬದುಕುತ್ತಿರುತ್ತೇವೆ.ಅವರಿವರು ನಮ್ಮ ನಡೆಯನ್ನು ನೋಡುತ್ತಿರುತ್ತಾರೆ,ನಮ್ಮ ಇರುವನ್ನು ಗಮನಿಸುತ್ತಾರೆ ,ನಮ್ಮ ಪ್ರತಿಯೊಂದು ಹೆಜ್ಜೆಯನ್ನು ಅವಲೋಕನ ಮಾಡುತ್ತಿದ್ದಾರೆ ಎಂಬ ಆಲೋಚನೆಯಲ್ಲಿಯೇ ಇದ್ದು ಬಿಡುತ್ತೇವೆ.ಅಂಥವರು ನಿಂತಲ್ಲಿಯೇ ನಿಂತು ಬಿಡುತ್ತಾರೆ.ಇಲ್ಲಿ ನಮ್ಮ ದೃಢತೆಯನ್ನು ಮರೆತು ಬಿಟ್ಟರೆ ನಮ್ಮಂಥಹ ಮೂರ್ಖರು ಮತ್ತೊಬ್ಬರಿಲ್ಲ.

ರಣರಂಗದಲ್ಲಿ ಸಜ್ಜಾಗಿರುವ ದುರ್ಯೋಧನನ ಕಥೆಯು ಹಾಗೆಯೇ ಆಗಿದೆ.ಸೇನಾಧಿಪತಿಯಾದ ದೃಷ್ಟದ್ಯುಮ್ನನಿಂದ ರಚಿತವಾದ ಸೇನೆಯನ್ನು ಕಂಡು ಮಾನಸಿಕವಾಗಿ ಸ್ಥಿಮಿತವನ್ನು ಕಳೆದುಕೊಳ್ಳುತ್ತಿದ್ದಾನೆ.ಹೀಗೆ ತಳಮಳಗೊಂಡ ದುರ್ಯೋಧನ ಗುರು ದ್ರೋಣಾಚಾರ್ಯರ ಬಳಿ ಪಾಂಡವರ ಸೇನೆಯಲ್ಲಿರುವ ವೀರರ ಕುರಿತು ಮಾತನಾಡುತ್ತಾನೆ.ದುರ್ಯೋಧನನ ಕಣ್ಣಿಗೆ ಅಲ್ಲಿರುವ ಎಲ್ಲರೂ ಭೀಮಾರ್ಜುನರಂತೆ ಕಾಣುತ್ತಿದ್ದಾರೆ.ಕೌರವರ ಪಕ್ಷದಲ್ಲಿ ಹಾಜರಾಗಿರಬೇಕಾಗಿದ್ದ ಸಾತ್ಯಕಿ-ವಿರಾಟ-ದ್ರುಪದ ಈಗ ಪಾಂಡವರ ಜೊತೆ ಇದ್ದಾರೆ.ಅರ್ಜುನ,ಭೀಮ ಮತ್ತು ಶ್ರೀಕೃಷ್ಣ ಈ ಮೂವರು ಗಾಂಢೀವ ಹಿಡಿದು ಯುದ್ಧಮಾಡಬಲ್ಲವರು.ಗಾಂಢೀವ ಎಂದರೆ ಆಗಿನ ಕಾಲದಲ್ಲಿದ್ದ ಮಹಾ ಬಿಲ್ಲು.ಮಹಾವೀರರೆಲ್ಲರು ಒಂದೆಡೆ ಸೇರಿದ್ದಾರೆಂಬ ಚಿಂತೆ.ಸಾಮಾನ್ಯವಾಗಿ ನಮಗೆ ಯಾರ ಬಗೆಗೆ ಹೆಚ್ಚು ಭಯವಿರುತ್ತದೋ,ಅಭದ್ರತೆ ಕಾಡುತ್ತಿರುತ್ತದೋ ಅಂಥವರು ಪ್ರತಿ ಪಕ್ಷದ ಪ್ರಮುಖರನ್ನು ನೆನೆದು ಭಯ ಪಡುತ್ತಿರುತ್ತಾರೆ. ಕ್ಷಣ ಕ್ಷಣಕ್ಕೂ ಭಯ ಪಡುತ್ತಾ ಪಾಂಡವರ ಸೇನೆಯಲ್ಲಿನ ಪ್ರಮುಖರ ಹೆಸರನ್ನು ಪಟ್ಟಿ ಮಾಡಲು ಶುರುಮಾಡುತ್ತಾನೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.