HomePage_Banner
HomePage_Banner
HomePage_Banner
HomePage_Banner

ಮಕ್ಕಳಿಗಾಗಿ ಶ್ರೀಮದ್ ಭಗವದ್ ಗೀತಾ… “ಭಗವಂತನಿಂದ ದೂರ ನಿಂತರೆ ಹಗ್ಗವು ಹಾವಾಗಿ ಕಾಣಿಸುತ್ತದೆ”

Puttur_Advt_NewsUnder_1
Puttur_Advt_NewsUnder_1


ಉಪನ್ಯಾಸಕ: ದುರ್ಗಾಪರಮೇಶ್ವರ ಭಟ್

ಅಧ್ಯಾಯ 1,ಶ್ಲೋಕ 5 ಮತ್ತು 6, ದುರ್ಯೋಧನ ಪಾಂಡವರ ಸೇನೆಯಲ್ಲಿದ್ದ ಪ್ರಮುಖ ವೀರರ ಹೆಸರನ್ನು ಪಟ್ಟಿ ಮಾಡುತ್ತಿದ್ದಾನೆ.
II ದೃಷ್ಟಕೇತುಶ್ಚೇಕಿತಾನ: ಕಾಶೀರಾಜಶ್ಚ ವೀರ್ಯವಾನ್
*ಪುರುಜಿತ್ ಕುಂತಿಭೋಜಶ್ಚ ಶೈಭಶ್ಚ ನರಪುಂಗವ: * II5II

II *ಯುಧಾಮನ್ಯುಶ್ಚ ವಿಕ್ರಾಂತ ಉತ್ತಮೌಜಾಶ್ಚ ವೀರ್ಯವಾನ್ *
*ಸೌಭದ್ರೋ ದ್ರೌಪದೇಯಾಶ್ಚ ಸರ್ವ ಏವ ಮಹಾರಥಾ: * II6II

ಮಾತಿಗಿಂತ ಆಚರಣೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ.ನಾಯಕತ್ವ ರೂಪುಗೊಳ್ಳುವುದು ಕ್ಷೇತ್ರದಲ್ಲಿ ಜನರ ನಂಬುಗೆಗೆ ಎಷ್ಟು ಪಾತ್ರನಾಗಿದ್ದಾನೆ ಎಂಬುದರ ಮೇಲೆ.ಅವನ ಮಾತಿನ ವರಸೆಯ ಮೇಲೆ ,ನಡೆಯುವ ಹೆಜ್ಜೆಯ ಮೇಲೆ,ವ್ಯಕ್ತ ಪಡಿಸುವ ವಿಚಾರಗಳ ಮೇಲೆ ಭರವಸೆ ಮೂಡಿಸಿದ್ದರೆ,ಅಂಥವನು ನಾಯಕನೆನಿಸಿಕೊಂಡಾನು.ಭರವಸೆ ಎಂಬ ಬೀಜ ಮನುಷ್ಯನನ್ನು ಮುನ್ನಡೆಯತ್ತ ಕರೆದುಕೊಂಡು ಹೋಗುತ್ತದೆ.ಹಸಿವಾದ ಮನುಷ್ಯ ತನ್ನ ಆಹಾರವನ್ನು ಪಡೆಯುವಂತೆ ಭರವಸೆಯನ್ನು ಹೊಂದಬೇಕು.ಬೆಳಕು ಬೇಕೆನ್ನುವ ಮನುಷ್ಯ ಕತ್ತಲೆಯ ಕೂಪದಿಂದ ಹೊರಬರಬೇಕು.

ಇಲ್ಲಿ ಮೇಲ್ನೋಟಕ್ಕೆ ನಾವು ಆರು ಮಂದಿ ವೀರರ ಹೆಸರನ್ನು ಕಾಣಬಹುದು.ಆದರೆ ನಾವು ಇಲ್ಲಿ ನೋಡಬೇಕಾದುದು ವ್ಯಕ್ತಿಗಳ ಹೆಸರಿಂಗಿಂತ,ವ್ಯಕ್ತಿಗಳ ಹೆಸರನ್ನು ಹೆಕ್ಕಿ ಹೇಳುತ್ತಿರುವ ದುರ್ಯೋಧನನ ಮನಸ್ಥಿತಿ.ಆತನ ವೇದನೆಯು ವ್ಯಕ್ತವಾಗುತ್ತಿದೆ.ಆತ ಉಲ್ಲೇಖ ಮಾಡಿದ ಆ ವೀರರ ಇತಿಹಾಸ ತಿಳಿದಾಗ ನಮಗೆ ಆತನ ಯಾತನೆ ತಿಳಿಯಬಹುದು.ದೃಷ್ಟಕೇತು ಶಿಪಾಲನ ಮಗ,ಹಿಂದೆ ಕೃಷ್ಣ ಶಿಶುಪಾಲನನ್ನು ಕೊಂದಿದ್ದರೂ ಈಗ ಆತನ ಮಗ ಕೃಷ್ಣನ ಪಕ್ಷ . ಚೇಕಿತಾನ ಮತ್ತು ಸಾತ್ಯಕಿ ಇವರಿಬ್ಬರು ಬಲರಾಮ ನುಡಿದಂತೆ.ಅದಲ್ಲದೆ ಕಾಶಿರಾಜನು ಕೂಡಾ ಪಾಂಡವರ ಪಕ್ಷದ ಕಡೆಗೆ ನಿಂತಿರುವುದನ್ನು ಕಂಡು ದುರ್ಯೋಧನ ಸಂಕಟ ಪಡುವಂತಾಯಿತು.ಇಲ್ಲಿ ಮಾನಸಿಕವಾಗಿ ತುಮುಲಕ್ಕೊಳಪಟ್ಟ ಒಬ್ಬ ವ್ಯಕ್ತಿ ತನ್ನ ಹಿಂದಿನ ಘಟನೆಗಳನ್ನು ಮೆಲುಕು ಹಾಕಿಕೊಂಡು,ಹೇಗೆ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳುತ್ತಾನೆ ಮತ್ತು ಅದರಿಂದಾಗಿ ಹೇಗೆ ತನ್ನ ನಿಜವಾದ ಸಾಮರ್ಥ್ಯವನ್ನು ಮರೆತು ವರ್ತಿಸುತ್ತಾನೆ ಎಂಬುದನ್ನು ನಾವಿಲ್ಲಿ ಸ್ಪಷ್ಟವಾಗಿ ಕಾಣಬಹುದು. ಪ್ರತಿ ಪಕ್ಷದಲ್ಲಿದ್ದ ಭಗವಂತನನ್ನು ಗುರುತಿಸಲು ಅಸಾಧ್ಯವಾಗಿರುವ ದುರ್ಯೋಧನ ತನ್ನ ಬಳಿಯಲ್ಲಿದ್ದ ಗುರುವಿನಲ್ಲಾದರೂ ಭಗವಂತನನ್ನು ಕಾಣುತ್ತಿದ್ದರೆ? ಇಂತಹ ಪರಿಸ್ಥಿಯಲ್ಲಿ ದುರ್ಯೋಧನನಿಗಾಗಲಿ ,ನಮಗಾಗಲಿ ಜಯವನ್ನು ಕಾಣುವುದಕ್ಕೆ ಸಾಧ್ಯವಿದೆಯೆ? ಭಗವದ್ ಗೀತೆಯ ಸಾರ ಮಧುರ ಮಧುರಸ.ಆ ರಸವನ್ನು ಸವಿದ ಬಾಳು ಸಾರ್ಥಕ.ಉಳಿದ ಬಾಳು ಬರಿಯ ಗೋಳು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.