HomePage_Banner
HomePage_Banner
HomePage_Banner
HomePage_Banner

ಮಕ್ಕಳಿಗಾಗಿ ಶ್ರೀಮದ್ ಭಗವದ್ ಗೀತೆ… “ಸ್ಪೂರ್ತಿಯ ಮಾತುಗಳು ಬದುಕಿಗೆ ಕೀರ್ತಿ”

Puttur_Advt_NewsUnder_1
Puttur_Advt_NewsUnder_1


ಉಪನ್ಯಾಸಕ : ದುರ್ಗಾಪರಮೇಶ್ವರ ಭಟ್

ಅಧ್ಯಾಯ ೦1,ಶ್ಲೋಕ 7, ದುರ್ಯೋಧನ ತನ್ನ ಸೈನ್ಯದ ಕುರಿತು ಮಾತನಾಡುತ್ತಾ ಹುರಿದುಂಬಿಸುತ್ತಿದ್ದಾನೆ.

II ಅಸ್ಮಾಕಂ ತು ವಿಶಿಷ್ಟಾ ಯೇ ತಾನ್ನಿಬೋಧ ದ್ವಿಜೋತ್ತಮ
ನಾಯಕಾ ಮಮ ಸೈನ್ಯಸ್ಯ ಸಂಜ್ಞಾರ್ಥಂ ತಾನ್ ಬ್ರ ವೀಮಿ ತೇ * II

ಅನುಭವವು ಜಗತ್ತಿನ ಸರ್ವ ಶ್ರೇಷ್ಠ ಶಿಕ್ಷಕ. ಬದುಕಿನ ಅನುಭವದಿಂದ ಬಂದ ಮಾತುಗಳು ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ. ಹಾಗಿರುವಾಗ ಅದು ಬರಿಯ ಮಾತುಗಳಾಗಿರದೆ ವೇದಗಳಿಗೂ ಸಮನಾಗಿರುವುದು.ಸಮಸ್ಯೆಗಳಿಲ್ಲದ ವ್ಯಕ್ತಿ ಜಗತ್ತಿನಲ್ಲಿರುವರೇ? ಹಾಗಿರಲು ಸಾಧ್ಯವಿಲ್ಲ.ನಮ್ಮ ಜೀವನದಲ್ಲಿ ಸಮಸ್ಯೆಗಳೇ ಬರಬಾರದೆಂದು ಅಂತ ಅನ್ನುವ ಹಾಗಿಲ್ಲ. ಬಂದಾಗ ತಲೆ ಮೇಲೆ ಕೈಹೊತ್ತು ಕೂರದೆ ಅದನ್ನು ಪರಾಮರ್ಶಿಸಿ ಎದುರಿಸ ಬೇಕಾಗುತ್ತದೆ. ಜಗತ್ತೇ ಮುಳುಗಿ ಹೋದಂತೆ ಕೂತುಬಿಡುವ ವ್ಯಕ್ತಿಗಳಿಗಂತೂ ಧೈರ್ಯ ತುಂಬುವ ವ್ಯಕ್ತಿಗಳ ಮತ್ತು ಸ್ಪೂರ್ತಿ ನೀಡುವ ಮಾತುಗಳ ಅಗತ್ಯತೆ ಇದ್ದೇ ಇದೆ. ತೇನ್ ಸಿಂಗ್ ತನ್ನ ಮೂವತೈದನೇ ವಯಸ್ಸಿನಲ್ಲಿ ಹಿಮಾಲಯವನ್ನು ಏರಿದನಲ್ಲವೇ? ಹೌದು ಅಷ್ಟಕ್ಕೂ ಅದೇನು ?ಪ್ರಯತ್ನ ಪಟ್ಟರೆ ಸಾಧ್ಯ ಎನ್ನಬಹುದು. ಆದರೆ ಅಲ್ಲಿ ಆತನ ಅಮ್ಮನ ಸ್ಪೂರ್ತಿ ನೀಡುವ ಮಾತುಗಳಿಗೂ ಪ್ರಾಧಾನ್ಯತೆ ನೀಡಬೇಕು.ಯಾಕೆಂದರೆ ತೇನ್ ಸಿಂಗ್ ಬಾಲಕನಾಗಿದ್ದಾಗ, ಅಮ್ಮ ಸೂಚನೆ ಕೊಟ್ಟದ್ದು ಯಾರೂ ಹತ್ತಲಾರದ ಈ ಪರ್ವತವನ್ನು ನೀನು ಹತ್ತಲಾರೆಯಾ? ಎಂದಷ್ಟೆ.

ಇಲ್ಲಿ ದುರ್ಯೋಧನ ಇಂತಹ ಸ್ಪೂರ್ತಿ ನೀಡುವ ಮಾತುಗಳಿಗೆ ಕಿವಿಯಾಗುವದನ್ನು ನಾವು ಕಾಣಲು ಸಾಧ್ಯವಿಲ್ಲ. ಗುರು ದ್ರೋಣಾಚಾರ್ಯರನ್ನು ಪಾಂಡವರ ಗುರುವೇ ಎಂದು ಹೀಯಾಳಿಸುತ್ತಿದ್ದಾನೆ.ಅದಲ್ಲದೇ ಕ್ಷಣ ಕ್ಷಣಕ್ಕೂ ಭಯ ಪಡುತ್ತಾ ಪಾಂಡವರ ಪ್ರಮುಖರನ್ನು ನೆನೆಯುತ್ತಿದ್ದಾನೆ.ಬಹಿರಂಗ ಜಯ ಗಳಿಸುವಂತೆ- ಅಂತರಂಗ ಭಯ ವಿರುವಂತೆ ನಡೆದುಕೊಳ್ಳುತ್ತಿದ್ದಾನೆ.ಸೈನ್ಯದ ಮುಂದಾಳತ್ವವನ್ನು ವಹಿಸಿಕೊಂಡ ಈತ ತನ್ನ ಸೈನ್ಯದಲ್ಲಿ ಧೈರ್ಯವನ್ನು ತುಂಬಲು ಪ್ರಯತ್ನ ಪಡುತ್ತಿದ್ದಾನೆ, ಹಿಂಬಾಲಕರಿಗೆ ಹುರಿದುಂಬಿಸುತ್ತಿದ್ದಾನೆ.ಸೇನಾಧಿಪತಿಯಾದ ಭೀಷ್ಮರಲ್ಲಿ ಪರಾಮರ್ಷೆ ಮಾಡುವುದ ಬಿಟ್ಟು ದ್ರೋಣಾಚಾರ್ಯರಲ್ಲಿ ಶತ್ರು ಸೈನ್ಯದ ಕುರಿತು ಮಾತನಾಡುತ್ತಿದ್ದಾನೆ.ಅದಲ್ಲದೇ ತನ್ನ ಸೈನ್ಯವು ಏನು ಸಾಧಾರಣವಲ್ಲವೆನ್ನುತ್ತಿದ್ದಾನೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.