ಪುನೀತ್‌ರಾಜ್‌ಕುಮಾರ್ ನಟನೆಯ ‘ನಟ ಸಾರ್ವಭೌಮ’ನ ಸಿನಿಮಾಕ್ಕೆ ಪುತ್ತೂರು ಯುವಕನ ಪ್ರಮೋಷನಲ್ ಸಾಂಗ್…ಯೂಟ್ಯೂಬ್‌ನಲ್ಲಿ ಭರ್ಜರಿ ಹಿಟ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

@ ಸಿಶೇ ಕಜೆಮಾರ್

ಪುತ್ತೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ‘ನಟ ಸಾರ್ವಭೌಮ’ ಕನ್ನಡ ಸಿನಿಮಾಕ್ಕೆ ಪ್ರಮೋಷನಲ್ ಸಾಂಗ್ ಮಾಡಿದ ಪುತ್ತೂರಿನ ಯುವಕನೋರ್ವ ಒಂದೇ ದಿನದಲ್ಲಿ ಸ್ಟಾರ್ ಆಗಿ ಬಿಟ್ಟಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಸಂಗೀತ್ ಕೆ.ಸಿ ಎಂದೇ ಚಿರಪರಿಚಿತರಾಗಿರುವ ಕೆಮ್ಮಾಯಿಯ ಸೀಮಿತ್ ಆಚಾರ್ಯರವರು ಸಂಗೀತ ನೀಡಿದ ನಟ ಸಾರ್ವಭೌಮ ಚಿತ್ರದ ಪ್ರಮೋಷನಲ್ ವಿಡಿಯೋ ಯೂಟ್ಯೂಬ್‌ನಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಒಂದೇ ದಿನದಲ್ಲಿ ಸುಮಾರು 90 ಸಾವಿರಕ್ಕೂ ಅಧಿಕ ಮಂದಿ ಈ ವಿಡಿಯೋ ವೀಕ್ಷಣೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

ಪ್ರಮೋಷನ್ ವಿಡಿಯೋ
ಪವನ್ ಒಡೆಯರ್ ನಿರ್ದೇಶನದ, ಪುನೀತ್ ರಾಜ್‌ಕುಮಾರ್, ರಚಿತಾ ರಾಮ್ ನಟನೆಯ ನಟ ಸಾರ್ವಭೌಮ ಚಿತ್ರವು ಈಗಾಗಲೇ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರ ಪ್ರಮೋಷನ್ ವಿಡಿಯೋಕ್ಕೆ ಸೀಮಿತ್ ಆಚಾರ್ಯ ಸಂಗೀತ ನೀಡಿದ್ದು, ರಾಜ್‌ಗುರು ಸಾಹಿತ್ಯ ಬರೆದಿದ್ದಾರೆ. ಅಪ್ಪುರವರ ಸಿನಿಮಾದ ಪ್ರೋಮೋ ಸಾಂಗ್‌ಗೆ ಸಂಗೀತ ನಿರ್ದೇಶನ ಮಾಡಲು ಅವಕಾಶ ಸಿಕ್ಕಿದ್ದು ಬಹಳ ಖುಷಿ ತಂದಿದೆ ಎನ್ನುವ ಸೀಮಿತ್ ಆಚಾರ್ಯರವರು ಸತತ ಮೂರು ತಿಂಗಳ ಪರಿಶ್ರಮದ ಬಳಿಕ ಮ್ಯೂಸಿಕ್ ತಯಾರಾಗಿದೆ ಎಂದಿದ್ದಾರೆ.

ಲಹರಿಯಿಂದ ಮಾರುಕಟ್ಟೆಗೆ ಬಿಡುಗಡೆ
ಸೀಮಿತ್ ಆಚಾರ್ಯ ಸಂಗೀತ ನೀಡಿರುವ ಈ ಪ್ರಮೋಷನ್ ವಿಡಿಯೋವನ್ನು ಪ್ರತಿಷ್ಠಿತ ಆಡಿಯೋ ಕಂಪೆನಿ ಲಹರಿ ಮ್ಯೂಸಿಕ್‌ರವರು ಖರೀದಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ. ಬಿಡುಗಡೆಗೊಂಡ ದಿನವೆ ಯೂಟ್ಯೂಬ್‌ನಲ್ಲಿ ಭರ್ಜರಿ ವೀಕ್ಷಕರನ್ನು ಗಳಿಸಿದ್ದು ಲಕ್ಷಕ್ಕೂ ಮಿಕ್ಕಿ ವೀಕ್ಷಕರನ್ನು ಸಂಪಾದಿಸಿದ್ದು ವಿಶೇಷತೆಯಾಗಿದೆ.

ಸರಿಗಮಪದ ರಜತ್ ಹೆಗಡೆ ಧ್ವನಿ
ಈ ಪ್ರಮೋಷನಲ್ ಸಾಂಗ್‌ಗೆ ಪ್ರೋಗ್ರಾಮರ್ ಆಗಿ ಅಶ್ವಿನಿ ಬಾಬಣ್ಣ ಪುತ್ತೂರು, ವೈಶಾಖ್ ಭಾರ್ಗವ್ ಬೆಂಗಳೂರು ಸಹಕಾರ ನೀಡಿದ್ದು, ಈ ಹಾಡನ್ನು ಝೀ ಕನ್ನಡದ ಸರಿಗಮಪದ ರಜತ್ ಹೆಗಡೆ ಹಾಡಿದ್ದಾರೆ. ಹಾಡಿನ ಮಿಕ್ಸಿಂಗ್ ಮತ್ತು ಮಾಸ್ಟರ್ ರಿಂಗ್ ಅನ್ನು ಮೂನ್ ಸ್ಟುಡಿಯೋ ಪುತ್ತೂರು ಹಾಗೂ ಆರ್ವಿ ವೋಕಲ್ ಸ್ಟುಡಿಯೋದಲ್ಲಿ ತಯಾರಿಸಲಾಗಿದೆ.

ಯಾರಿವರು ಸೀಮಿತ್ ಆಚಾರ್ಯ
ದಿನಬೆಳಗಾಗುವುದರೊಳಗೆ ಪ್ರಸಿದ್ಧಿ ಪಡೆದುಕೊಂಡಿರುವ ಸೀಮಿತ್ ಆಚಾರ್ಯರವರು ಕೆಮ್ಮಾಯಿಯ ಕೆ.ಜಿ ಚಂದ್ರಶೇಖರ್ ಆಚಾರ್ಯ ಮತ್ತು ಲತಾ ಚಂದ್ರಶೇಖರ್‌ರವರ ಪುತ್ರ ಕೀಬೋರ್ಡ್ ವಾದಕರಾಗಿದ್ದ ತಂದೆಯಿಂದಲೇ ಸಂಗೀತದ ಅಭ್ಯಾಸ ಮಾಡಿಕೊಂಡಿರುವ ಸೀಮಿತ್‌ರವರು ಹಾಸನದ ಬಿಎನ್‌ಎಸ್ ಮುರಳಿಯವರಿಂಧ ಪ್ರಾಥಮಿಕ ಸಂಗೀತ ಅಭ್ಯಾಸ ಪಡೆದು ಸಿನಿಮಾ ಲೋಕದಿಂದ ಆಕರ್ಷಿತರಾಗಿ 2009 ರಲ್ಲಿ ಬೆಂಗಳೂರು ಮಾಯನಗರಿಗೆ ಸೇರಿದ್ದು, ಸಿನಿಮಾ ಕ್ಷೇತ್ರದಲ್ಲಿ ಅವಕಾಶಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕಿರೀಟ ಕನ್ನಡ ಚಿತ್ರದ ನಿರ್ದೇಶಕ ಕಿರಣ್‌ಚಂದ್ರರವರ ಪ್ರೋತ್ಸಾಹ, ರಾಜ್‌ಗುರು ನಾಯಕ್‌ರವರ ಮಾರ್ಗದರ್ಶನ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎನ್ನುತ್ತಾರೆ ಸೀಮಿತ್ ಆಚಾರ್ಯ. ಕನ್ನಡದ ಹಿರಿಯ ಗಾಯಕರಾದ ರಾಜೇಶ್ ಕೃಷ್ಣನ್, ಅನುರಾಧ ಭಟ್, ಸಂಗೀತ ಕಟ್ಟಿ, ಅಜೇಯ್ ವಾರಿಯರ್, ಶಶಿಧರ್ ಕೋಟೆ, ದಿವ್ಯಾರಾಘವನ್, ರಮೇಶ್ ಚಂದ್ರ ಇವರುಗಳ ಧ್ವನಿಯಲ್ಲಿ ಮೂಡಿಬಂದಿರುವ ರೈತ ಗೀತೆಗೆ ಸೀಮಿತ್ ಆಚಾರ್ಯ ಸಂಗೀತ ನೀಡಿದ್ದರು. ಈ ರೈತ ಗೀತೆಗಳು ಭಾರೀ ಯಶಸ್ಸನ್ನು ಪಡೆದುಕೊಂಡಿದ್ದವು. ಪ್ರಸ್ತುತ ಸೀಮಿತ್ ಆಚಾರ್ಯ ಪುನೀತ್ ಆರ್ಕೇಸ್ಟ್ರಾ, ಸುಳ್ಯದ ಸಿಂಚನ್ ಆಕೇಸ್ಟ್ರಾದಲ್ಲಿ ಪ್ರಧಾನ ಕೀಬೋರ್ಡ್ ವಾದಕರಾಗಿದ್ದಾರೆ.

” ಪುನೀತ್ ರಾಜ್‌ಕುಮಾರ್‌ರವರ ‘ನಟ ಸಾರ್ವಭೌಮ’ ಸಿನಿಮಾದ ಪ್ರಮೋಷನಲ್ ಸಾಂಗ್‌ಗೆ ಸಂಗೀತ ನೀಡಿದ್ದು ಬಹಳ ಖುಷಿ ತಂದಿದೆ. ನನಗೆ ಸಹಕಾರ, ಪ್ರೋತ್ಸಾಹ ನೀಡುತ್ತಿರುವ ರಾಜ್‌ಗುರು ನಾಯಕ್, ಕಿರಣ್‌ಚಂದ್ರರವರ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ. ಹಾಡು ಮೆಚ್ಚಿಕೊಂಡ ಎಲ್ಲಾ ಸಂಗೀತ ಪ್ರೇಮಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮುಂದೆಯೂ ನಿಮ್ಮೆಲ್ಲರ ಸಹಕಾರ ನನ್ನೊಂದಿಗಿರಲಿ” –ಸೀಮಿತ್ ಆಚಾರ್ಯ (ಕೆ.ಸಿ) ಕೆಮ್ಮಾಯಿ

ಸೀಮಿತ್ ಮುಡಿಗೇರಿದ ‘ನಮ್ಮೂರ ದಿಗ್ಗಜರು’ ಪ್ರಶಸ್ತಿ…

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.