ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನದಲ್ಲಿ 8ನೇ ವರ್ಷದ ಶ್ರೀ ಗಣೇಶೋತ್ಸವ

0

ಮುಂಡೂರು: ಶ್ರೀ ನಾಗಕಲ್ಲುರ್ಟಿ ದೈವಸ್ಥಾನ ಮುಂಡೂರಿನಲ್ಲಿ 8ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಡಳಿತ ಮೊಕ್ತೇಸರ ರಾಜೀವ ಅವರ ನೇತೃತ್ವದಲ್ಲಿ ಆ.31ರಂದು ಜರುಗಿತು.

ಶ್ರೀ ಕ್ಷೇತ್ರದ ಉದ್ಭವ ಗಣಪತಿಯ ಸನ್ನಿಧಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಶ್ರೀ ನಾಗಾಂಬಿಕಾ ಭಜನಾ ಮಂಡಳಿಯ ಅಧ್ಯಕ್ಷ ಸಂತೋಷ್ ಕುಮಾರ್, ಕಾರ್ಯದರ್ಶಿ ಜಯರಾಜ್, ಜೊತೆ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ, ಬಬಿತ, ಕು|ತೃಪ್ತಿ, ಕು|ಸ್ತುತಿ,  ಸ್ವಸಹಾಯ ಸಂಘಗಳ   ಮುಖ್ಯಸ್ಥರಾದ ಸಂತೋಷ್, ಗುಣಕರ ಕೋಟ್ಯಾನ್, ಜಯರಾಜ್, ಸರೋಜ, ಪ್ರದೀಪ್ ಕುಲಾಲ್, ಅನೋಜ್,  ಪುಷ್ಪಾವತಿ, ಹರೀಶ್ ಕುಲಾಲ್ ಹಾಗೂ ಸರ್ವಸದಸ್ಯರು ಸಹಕಾರ ನೀಡಿದರು. ಊರ ಹಾಗೂ ಪರವೂರ ಭಕ್ತರು ಭಾಗಿಯಾಗಿದ್ದರು

LEAVE A REPLY

Please enter your comment!
Please enter your name here