ಬೆಳಾಲು 41 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

0

ಬೆಳಾಲು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಬೆಳಾಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬೆಳಾಲು ಸಹಕಾರದೊಂದಿಗೆ ಬೆಳಾಲಿನ ಮತ್ತು ವಿವಿಧ ಸಂಘ ಸಂಸ್ಥೆಗಳು, ಬೆಳಾಲು ಹಾಗೂ ಊರವರ ಆಶ್ರಯದಲ್ಲಿ ಆ.31ರಂದು ಬೆಳಾಲು ಶ್ರೀ ಧ.ಮಂ, ಪ್ರೌಢಶಾಲೆಯಲ್ಲಿ 41ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು
ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಿತು.

ಇದರ ಅಂಗವಾಗಿ ನಡೆದ ಧಾರ್ಮಿಕ ಸಭೆ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಿವ ಕುಮಾರ್ ಬಾರಿತ್ತಾಯರ ಅಧ್ಯಕ್ಷತೆಯಲ್ಲಿ ನಡೆಯಿತು.

ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ನಾಣ್ಯಪ್ಪ ಪೂಜಾರಿ, ಉಪಾಧ್ಯಕ್ಷ ಸತೀಶ್ ಎಳ್ಳುಗದ್ದೆ, ಸಮಿತಿಯ ಗೌರವಧ್ಯಕ್ಷ ಗಣೇಶ ಕನಿಕ್ಕಿಲ,ಕಾರ್ಯದರ್ಶಿ ಹರೀಶ್ ಆಚಾರ್ಯ,ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷರುಗಳಾದ ಸಂಜೀವ ಗೌಡ ಬೆಳಾಲು, ಗಂಗಾಧರ ಸಾಲಿಯಾನ್ ಮಾಯ, ಎಲ್ಯಣ್ಣ ನಾಯ್ಕ ಕೊಲ್ಪಡಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕರಾಟೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಯಾದ ಜಾನ್ಹವಿ, ಮತ್ತು ಕಾರ್ಯದರ್ಶಿ ಹರೀಶ್ ಆಚಾರ್ಯರನ್ನು ಸನ್ಮಾನಿಸಲಾಯಿತು. ಗಣೇಶೋತ್ಸವದ ಪ್ರಯುಕ್ತ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಧರ್ಮೇ0ದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು ಗ್ರಾಮದ ವಿವಿಧ ಭಜನಾ ಮಂಡಳಿ, ಸಂಘ ಸಂಸ್ಥೆ ಗಳ ಪದಾಧಿಕಾರಿಗಳು, ಸದಸ್ಯರು. ಗಣ್ಯರು, ಊರ ಮಹನೀಯರು ಭಾಗವಸಿದ್ದರು. ಬಳಿಕ ಮೆರವಣಿಗೆ ಮೂಲಕ ಮಾಯಾ ಎಂಜಿರಿಗೆ ಹೊಳೆಯಲ್ಲಿ ಮೂರ್ತಿಯ ವಿಸರ್ಜನೆ ನಡೆಯಿತು.

LEAVE A REPLY

Please enter your comment!
Please enter your name here