ಕುಪ್ಪೆಟ್ಟಿ 32ನೇ ವರ್ಷದ ಗಣೇಶೋತ್ಸವಕ್ಕೆ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸರ ಆಶೀರ್ವಚನ

0


ಕುಪ್ಪೆಟ್ಟಿ : ಶ್ರೀ ಗಣೇಶ ಭಜನಾ ಮಂದಿರ ಕುಪ್ಪೆಟ್ಟಿ ಇದರ ವತಿಯಿಂದ ನಡೆದ 33ನೇ ವರ್ಷದ ಗಣೇಶೋತ್ಸವಕ್ಕೆ ಮಹಾಲಕ್ಷ್ಮಿ ಕ್ಷೇತ್ರ ಶ್ರೀಧಾಮ ಮಾಣಿಲ ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಗಮಿಸಿ ನಮ್ಮಲ್ಲಿರುವ ಅನಿಷ್ಠ ಸಂಸ್ಕೃತಿಗಳನ್ನ ದೂರ ಮಾಡಬೇಕು ದೇವರ ಮೇಲೆ ನಂಬಿಕೆಯಿಂದ ಭಜನೆಯಂತ ಕಾರ್ಯದಲ್ಲಿ ತೊಡಗಿಸಿಕೊಂಡು ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ ಬೆಳೆಸುವ ಪ್ರಯತ್ನ ನಾವು ಮಾಡಬೇಕಿದೆ ಎಂದರು ಹಾಗೂ ಮಂದಿರದ ಸಭಾಭವನದ ಕಾಮಗಾರಿ ಆದಷ್ಟು ಬೇಗ ಈಡೇರಲಿ ಧಾನಿಗಳ ಸಹಕಾರ ಖಂಡಿತ ನಿಮಗೆ ದೊರಕಲಿದೆ ಹಾಗೆ ನನ್ನಿಂದ ಆಗುವ ಸಹಕಾರವನ್ನು ನಾನು ಮಾಡುತ್ತೇನೆ ಎಂದು ಅವರು ಹೇಳಿದರು.

ಭಜನಾ ಮಂದಿರದಲ್ಲಿ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜನೆ ಮಾಡಿದ್ದರು ಹಾಗೂ ಕುಣಿತ ಭಜನೆ ಎಲ್ಲರ ಆಕರ್ಷಣೆಯಾಗಿತ್ತು.

LEAVE A REPLY

Please enter your comment!
Please enter your name here