ಎಸ್‌.ಕೆ.ಎಸ್.ಎಸ್.ಎಫ್ ಬೆಳ್ತಂಗಡಿ ವಲಯದಿಂದ ಫ್ರೀಡಂ ಸ್ಕ್ವಾರ್ ಕಾರ್ಯಕ್ರಮ

0

ಬೆಳ್ತಂಗಡಿ:  ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯದ ಫ್ರೀಡಂ ಸ್ಕ್ವಾರ್ ಕಾರ್ಯಕ್ರಮ ಕನ್ನಡಿಕಟ್ಟೆ ಮಸೀದಿ ವಠಾರದಲ್ಲಿ ನಡೆಯಿತು.

“ಸಮಾನತೆ, ಸ್ವಾತಂತ್ರ್ಯ, ಸಹೋದರತೆ ಭಾರತದ ಪರಂಪರೆಯನ್ನು ಮರಳಿ ಪಡೆಯೋಣ” ಎಂಬ ಧ್ಯೇಯ ವಾಕ್ಯದಡಿ ನಡೆದ ಈ ಕಾರ್ಯಕ್ರಮದಲ್ಲಿ ಶುಕೂರ್ ದಾರಿಮಿ ಮುಖ್ಯ ಪ್ರಭಾಷಣಗಾರರಾಗಿದ್ದರು.

ಬೆಳ್ತಂಗಡಿ ದಾರುಸ್ಸಲಾಂ ಕಾಲೇಜಿನ ಪ್ರಾಂಶುಪಾಲ ಸಯ್ಯಿದ್ ತ್ವಾಹಾ ತಂಙಳ್ ದುಆಗೈದರು. ರಿಯಾಝ್ ಫೈಝಿ ಕಕ್ಕಿಂಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಲಯ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಅಝೀಝ್ ಅಶ್ಶಾಫೀ ಕೊಯ್ಯೂರು ಕಾರ್ಯಕ್ರಮದಲ್ಲಿ ಮುನ್ನುಡಿ ಭಾಷಣಗೈದರು. ಎಸ್ಕೆಎಸ್ಸೆಸ್ಸೆಫ್ ಬೆಳ್ತಂಗಡಿ ವಲಯ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಮುಸ್ಲಿಯಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಐ.ಕೆ ಮೂಸಾ ದಾರಿಮಿ ಕಕ್ಕಿಂಜೆ, ಗರ್ಡಾಡಿ ಚರ್ಚ್ ಸಹಾಯಕ ಗುರುಗಳಾದ ರೋಹನ್ ಲೋಬೋ, ಗುರುವಾಯನಕೆರೆ ಡಾ. ವೇಣುಗೋಪಾಲ್ ಶರ್ಮಾ, ಎಸ್‌.ಕೆ.ಎಸ್.ಎಸ್.ಎಫ್ ಬೆಳ್ತಂಗಡಿ ವಲಯಾಧ್ಯಕ್ಷ ಹಕೀಂ ಬಂಗೇರಕಟ್ಟೆ, ಬೆಳ್ತಂಗಡಿ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಶ್ರಫ್ ಫೈಝಿ, ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ದಾರಿಮಿ, ಎಸ್‌.ಕೆ.ಎಸ್.ಎಸ್.ಎಫ್ ದ.ಕ ಈಸ್ಟ್ ಜಿಲ್ಲಾ ಕೋಶಾಧಿಕಾರಿ ಹನೀಫ್ ದೂಮಳಿಕೆ, ಕನ್ನಡಿಕಟ್ಟೆ ಎಂ.ಜೆ.ಎಂ ಮಸೀದಿಯ ಖತೀಬ್ ರಝಾಖ್ ದಾರಿಮಿ, ಪಡಂಗಡಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮುಹಮ್ಮದ್ ಫಾರೂಖ್, ಎಚ್, ನಿವೃತ್ತ ಶಿಕ್ಷಕ ಹೈದರ್.ಬಿ, ಕನ್ನಡಿಕಟ್ಟೆ ಮುಹ್ಯುದ್ದೀನ್ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಯೂಸುಫ್ ಪೊಂಜಿಲ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಲವು ಗಣ್ಯರನ್ನು ಸನ್ಮಾನಿಸಲಾಯಿತು. ಸಿರಾಜ್ ಚಿಲಿಂಬಿ ವಂದಿಸಿದರು.

LEAVE A REPLY

Please enter your comment!
Please enter your name here