ಉಜಿರೆ ಕುಂಜರ್ಪ ಶ್ರೀ ಕ್ಷೇತ್ರ ತಿಮರೋಡಿ ವಠಾರದಲ್ಲಿ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವ ಕಾರ್ಯಕ್ರಮ

0

ಉಜಿರೆ :  ಧರ್ಮದ ಆದರದಿಂದ ಕರ್ಮದ ಮೇಲೆ, ತ್ಯಾಗದ ಮೇಲೆ ನಿಮತು ಜಗತ್ತು ಹೇಗಿರಬೇಕೆಂದು ಕಲಿಸಿದ ದೇಶ ಭಾರತ. ಭಾರತ ದೇಶ ಸ್ವತಂತ್ರ್ಯ ಸಂಘಟನೆಗಾಗಿ ಧಾರ್ಮಿಕತೆಯಿಂದ ಸಾಧ್ಯ ಎಂಬುದನ್ನು ಅರಿತು ಬಾಲಗಂಗಾಧರ ನಾಥ ತಿಲಕರು ಗಣೇಶೋತ್ಸವಕ್ಕೆ ಅಸ್ತಿತ್ವ ನೀಡಿದರು ಎಂದು ಈ ಮೂಲಕ ಧರ್ಮದ ಆಧಾರದಲ್ಲಿ ಸಮಾಜ ಒಟ್ಟಾದ್ದರಿಂದ ಸ್ವಾತಂತ್ರ್ಯ ಸಂಘಟನೆಗೆ ನಾಂದಿಯಾಯಿತು ಎಂದು ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.

ಬೆಳ್ತಂಗಡಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ವತಿಯಿಂದ ಉಜಿರೆ ಕುಂಜರ್ಪ ಶ್ರೀ ಕ್ಷೇತ್ರ ತಿಮರೋಡಿ ವಠಾರದಲ್ಲಿ ಸೆ.1ರಂದು ಹಮ್ಮಿಕೊಂಡ 25 ನೇ ವರ್ಷದ ಸಾಮೂಹಿಕ ಗೌರಿ ಪೂಜೆ ಮತ್ತು ಶ್ರೀ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಸೆ.1 ರಂದು ಡಾ.ಕೇಶವ ಬಲಿರಾಂ ಹೆಗಡೆವಾರ್ ವೇದಿಕೆಯಲ್ಲಿ ಹಮ್ಮಿಕೊಂಡ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.

ಸಮಾಜ‌ ಭಿನ್ನತೆಯನ್ನು ಬಿಟ್ಟು ಒಂದಾಗಿ ಬಾಳಬೇಕಿದೆ. ಸಮಾಜ‌ವಾಗಲಿ ದೇಶವಾಗಲಿ ಇತಿಹಾಸವನ್ನು ಮರೆಯುತ್ತದೋ ಆ ಸಮಾಜ ವಾಗಲಿ ದೇಶವಾಗಲಿ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಆಳುವವರು ಧರ್ಮವನ್ನು ಮರೆತರೆ ಅವರನ್ನು ಸರಿದಾರುವ ಕೆಲಸ ಸಮಾಜಕ್ಕಿದೆ. ಎಂದು ಹೇಳಿದರು.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಬೀಡು ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ರಾಮ್‌ಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ, ನಟ ನಿರ್ದೇಶಕರಾದ ತಮ್ಮಣ್ಣ ಶೆಟ್ಟಿ,ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಪೂಜಾರಿ ಅತ್ತಾಜೆ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್ ಅಂತರ ಪ್ರಾಸ್ತಾವಿಸಿ ಸ್ವಾಗತಿಸಿದರು. ಮುಕೇಶ್ ಶೆಟ್ಟಿ ಪಾನಿಯಾಲು ಪ್ರಾರ್ಥಿಸಿದರು. ಜಗದೀಶ್ ಶೆಟ್ಟಿ ನಿರೂಪಿಸಿದರು‌.

LEAVE A REPLY

Please enter your comment!
Please enter your name here