ಬೆಳ್ತಂಗಡಿ ತಾಲೂಕಿಗೆ ಹೆಚ್ಚುವರಿ ತುರ್ತು ಅಗ್ನಿಶಾಮಕ ಠಾಣೆ ಮಂಜೂರು ಮಾಡಬೇಕೆಂದು ಗೃಹ ಸಚಿವರಿಗೆ ಪತ್ರ ಬರೆದ ರಕ್ಷಿತ್ ಶಿವರಾಂ

0

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಧಾರ್ಮಿಕ, ಸಾಂಸ್ಕೃತಿಕ, ಹಾಗೂ ವ್ಯಾಪಾರ-ವಹಿವಾಟಿಗೆ ಇಡೀ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಒಂದಾಗಿದೆ. ಐತಿಹಾಸಿಕ ಧರ್ಮಸ್ಥಳ ಕ್ಷೇತ್ರದಲ್ಲಿ ದಿನಾಲೂ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಲೇ ಇರುತ್ತಾರೆ. ಸಾವಿರಾರು ಅಂಗಡಿ-ಮುಗ್ಗಟ್ಟುಗಳು ಸೇರಿದಂತೆ ಅನೇಕ ವ್ಯಾಪರ ಸ್ಥಳವಾಗಿದೆ. ತಾಲೂಕಿನಲ್ಲೂ ಒಟ್ಟು ಜನಸಂಖ್ಯೆ ಮೂರು ಲಕ್ಷಕ್ಕೂ ಹೆಚ್ಚಿದೆ. . ಬೆಳ್ತಂಗಡಿ ತಾಲೂಕಿನ ಒಟ್ಟಾರೆ ಚಟುವಟಿಕೆಗಳನ್ನ ಗಮನೀಕರಿಸಿ ಹೆಚ್ಚುವರಿಯಾಗಿ ಇನ್ನೊಂದು ಅಗ್ನಿ ಶಾಮಕ ಠಾಣೆಯನ್ನು ಮಂಜೂರು ಮಾಡುವಂತೆ. ಗೃಹ ಸಚಿವ ಆರಗ ಜ್ಞಾನೇಂದ್ರ ರವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪತ್ರ ಬರೆದು ಆಗ್ರಹಿಸಿದ್ದಾರೆ.

ಆ.31ರಂದು  ಬೆಳ್ತಂಗಡಿಯ ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿರುವ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಸಮೀಪದ ಮೂರು ಅಂಗಡಿಗಳು ಬೆಂಕಿ‌ ಅನಾಹುತ ಸಂಭವಿಸಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇಂತಹ ದುರ್ಘಟನೆಗಳು ನಡೆಯುತ್ತಲೇ ಇದೆ. ಕೇವಲ ಒಂದು ಅಗ್ನಿಶಾಮಕ ಠಾಣೆ ಇರುವ ಕಾರಣ ಸ್ಥಳಕ್ಕೆ ಭೇಟಿ ನೀಡುವ ಹೊತ್ತಿಗೆ ಇಡೀ ಅಂಗಡಿಯಲ್ಲಿ ಅನಾಹುತವೇ ಸಂಭವಿಸಿ ಹೋಗಿದೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕಾದರೆ ಕೂಡಲೇ ತಾಲೂಕಿನಲ್ಲಿ ಹೆಚ್ಚುವರಿ ಅಗ್ನಿ ಶ್ಯಾಮಕ ಠಾಣೆ ಮಂಜೂರು ಮಾಡುವುದೊಂದೆ ತಾತ್ಕಾಲಿಕ ಪರಿಹಾರ.

ಈ ಹಿಂದೆ ತಾವು ಬೆಳ್ತಂಗಡಿಗೆ ಭೇಟಿ ನೀಡಿದಾಗಲೂ ಅಗ್ನಿಶಾಮಕ ಠಾಣೆ ಮಂಜೂರು ಮಾಡಿಕೊಡುವುದಾಗಿ ಭರವಸೆಯನ್ನ ನೀಡಿದ್ದೀರಿ.
ಹೀಗಾಗಿ ತಾಲೂಕಿನ ಹಿತದೃಷ್ಟಿಯಿಂದ ಕೂಡಲೇ ಹೆಚ್ಚುವರಿಯಾಗಿ ಇನ್ನೊಂದು ಅಗ್ನಿ ಶಾಮಕ ಠಾಣೆ ಮಂಜೂರು ಮಾಡಬೇಕು ಹಾಗೂ ಪ್ರಸ್ತುತ ಇರುವ ಠಾಣೆಯನ್ನು ಮೇಲ್ದರ್ಜೆಗೇರಿಸಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ಗೃಹ ಸಚಿವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here