ಲಯನ್ಸ್ ಕ್ಲಬ್ ವತಿಯಿಂದ ನಡೆದ ಕನ್ಯಾಡಿ ಯೋಗಾಸನ ಶಿಬಿರದ ಸಮಾರೋಪ ಸಮಾರಂಭ

0

ಕನ್ಯಾಡಿ:  ಅಂತರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ಕನ್ಯಾಡಿ ಶಾಲಾ ವಠಾರದಲ್ಲಿ ಹನ್ನೊಂದು ದಿನಗಳಿಂದ ನಡೆದ ಯೋಗಾಸನ ತರಬೇತಿ ಶಿಬಿರದ ಆ.30ರಂದು ಸಮಾರೋಪ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಜಿರೆ ರಬ್ಬರ್ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಮಾಜಿ ಪ್ರಾಂತ್ಯಾಧ್ಯಕ್ಷರಾದ ಲಯನ್ ರಾಜು ಶೆಟ್ಟಿ ಬೇಗೆಂತ್ಯಾರು ಮಾತನಾಡಿ ಯೋಗದಿಂದ ರೋಗಗಳನ್ನು ದೂರ ಮಾಡಿ ಆರೋಗ್ಯವಂತ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.

ಲಯನ್ ಪ್ರಾಂತ್ಯಧ್ಯಕ್ಷರಾದ ಲಯನ್ ವಸಂತ ಶೆಟ್ಟಿ ಶ್ರದ್ದಾ ಮಾತನಾಡಿ ಯೋಗದಿಂದ ಭಾರತ ದ ಸಂಸ್ಕೃತಿ ಮತ್ತು ಸಂಸ್ಕಾರ ಬೆಳೆಯುತ್ತದೆ. ಭಾಗವಹಿಸಿದ ಎಲ್ಲ ಶಿಬಿರಾರ್ಥಿಗಳು ದಿನನಿತ್ಯ ಯೋಗ ಮಾಡಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಬೊಲ್ಮ ವಹಿಸಿಕೊಂಡಿದ್ದರು.

ವೇದಿಕೆಯಲ್ಲಿ ಬೆಳ್ತಂಗಡಿ ಲಯನ್ಸ್ ಕ್ಲಬ್ ಉಪಾಧ್ಯಕ್ಷ ಲಯನ್ ಉಮೇಶ್ ಶೆಟ್ಟಿ ಉಜಿರೆ, ಸುದ್ದಿವಾಹಿನಿ ಮುಖ್ಯಸ್ಥರಾದ  ದಾಮೋದರ ದೊಂಡೋಲೆ, ಸೇವಾಭಾರತಿ ಕಾರ್ಯದರ್ಶಿ  ಸ್ವರ್ಣಗೌರಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ತುಕಾರಾಮ್ ಬಿ. ಉಪಸ್ಥಿತರಿದ್ದರು.

ರಾಷ್ಟ್ರಮಟ್ಟದ ಯೋಗಾಸನಾ ಚಾಂಪಿಯನ್ ಪ್ರಥಮ ಸ್ಥಾನ ಹಾಗೂ ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್ ದ್ವಿತೀಯ ಸ್ಥಾನ ಪಡೆದಿರುವ ಧರ್ಮಸ್ಥಳ ನೇತ್ರಾ ನಗರದ  ದಿಶಾರಾಘ ಶೆಟ್ಟಿ ಹಾಗೂ ಜಿಲ್ಲಾ ಯೋಗಾಸನ ಸಂಪನ್ಮೂಲ ವ್ಯಕ್ತಿ, ಧರ್ಮಸ್ಥಳ ಶಾಂತಿವನ ಯೋಗ ಸಂಘಟಕರು ಕನ್ಯಾಡಿ ಶಾಲಾ ಶಾರೀರಿಕ ಶಿಕ್ಷಕರಾದ  ಮರಿಯಪ್ಪ ಗೌಡ ಇವರನ್ನು ಕ್ಲಬ್ ವತಿಯಿಂದ ಗೌರವಿಸಲಾಯಿತು.

ಹನ್ನೊಂದು ದಿನಗಳ ತರಬೇತಿ ನೀಡಿದ ಯೋಗ ತರಬೇತಿದರಾದ ಡಾ. ಬಾಷಿಣಿ ಅವರಿಗೆ ಲಯನ್ಸ್ ವತಿಯಿಂದ ಸನ್ಮಾನಿಸಲಾಯಿತು.

ಧರ್ಮಸ್ಥಳ ಗ್ರಾಮದ ದೊಂಡೋಲೆ ಎಂಬಲ್ಲಿಯ ಬಡಕುಟುಂಬದ ಬಾಲಪ್ರತಿಭೆ ಪ್ರಾಥಮಿಕ ಶಾಲಾ ಯೋಗಾಸನದಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಹಾಗೂ ವಾಲಿಬಾಲ್ ತ್ರೋಬಾಲ್ ಇದರ ಆಟಗಳೊಂದಿಗೆ ತೊಡಗಿಸಿಕೊಂಡಿರುವ ಕನ್ಯಾಡಿ ಶಾಲೆಯ ವಿದ್ಯಾರ್ಥಿ ಅಶ್ವಥ್ ಇವರಿಗೆ ಪ್ರೋತ್ಸಾಹಧನವನ್ನು ನೀಡಲಾಯಿತು.

 ಸತೀಶ್ ಪೈ ಕನ್ಯಾಡಿ ಹಾಗೂ ಮನ್ವಿತ್ ಧರ್ಮಸ್ಥಳ ಇವರಿಂದ ಭಜನೆ ಮಿಮಿಕ್ರಿ ನಡೆಯಿತು. ಲಯನ್ ಕಿರಣ್ ಕುಮಾರ್ ದೊಂಡೋಲೆ ಧ್ವಜವಂದನೆ ನೆರವೇರಿಸಿ, ಕು. ಭಾಷಿಣಿ ನೀತಿಸಂಹಿತೆ ಬೋಧಿಸಿದರು.

 ಸ್ವರ್ಣಗೌರಿ ಪ್ರಾರ್ಥಿಸಿದರು. ಲಯನ್ಸ್ ಕಾರ್ಯದರ್ಶಿ ತುಕಾರಾಂ ಸ್ವಾಗತಿಸಿ ವಂದಿಸಿದರು.

ಸುಮಾರು 25 ಮಂದಿ ತರಬೇತಿದಾರು ಹಾಗೂ  ಲಯನ್ ಪ್ರಭಾಕರ ಗೌಡ ಬೊಲ್ಮ, ಲಯನ್ ರಾಜೇಂದ್ರ ಅಜ್ರಿ, ಲಯನ್ ಚಂದ್ರಕುಮಾರ್ ಶೆಟ್ಟಿ ನಾರ್ಯ, ಹರೀಶ್ ಕುರ್ಮಾನಿ,  ರಂಜಿತ್, ಶ್ರೀ ಗುರು ರಾಘವೇಂದ್ರ,  ದಿನೇಶ್ ಶೆಟ್ಟಿ ನೇತ್ರನಗರ,  ಸಾರಿಕ ಶೆಟ್ಟಿ, ಊರಿನ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here