ಮೇಲಂತಬೆಟ್ಟು ಯಮುನಾ ಆಚಾರ್ಯ ನಾಪತ್ತೆ ಪ್ರಕರಣ: ಮನೆಯ ಹಿಂಭಾಗದ ಬಾವಿಯ ಕಟ್ಟೆಯಲ್ಲಿ ಪತ್ತೆ

0

ಮೇಲಂತಬೆಟ್ಟು: ಮೇಲಂತಬೆಟ್ಟು ಗ್ರಾಮದ ಪಡಿಬೆಟ್ಟು ಎಂಬಲ್ಲಿನ ಯಮುನಾ ಆಚಾರ್ಯ ಎಂಬ ಮಹಿಳೆಯೋರ್ವರು ಸೆ.3ರಂದು ನಾಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವೃದ್ಧೆ ಪತ್ತೆಯಾಗಿದ್ದಾರೆ.

ವೃದ್ಧೆ ಹಾಲಿನ ಡೈರಿಗೆ ಹೋಗಿದ್ದರು. ಬಳಿಕ ಮನೆಗೂ ವಾಪಸ್ ಬರದೆ ನಾಪತ್ತೆಯಾಗಿದ್ದರು. ಬಳಿಕ ರಸ್ತೆಯಲ್ಲಿ ರಕ್ತದ ಕಲೆ, ಎರಡು ಚಪ್ಪಲಿ, ಚೆಲ್ಲಿರುವ ಹಾಲು ಸ್ಥಳದಲ್ಲಿ ಚೆಲ್ಲಾಪಿಲ್ಲಿಯಾಗಿತ್ತು. ಇದರಿಂದ ಊರವರು ಹಾಗೂ ಬೆಳ್ತಂಗಡಿ ಪೊಲೀಸರು ಆಸ್ಪತ್ರೆಯಲ್ಲಿ ವಿಚಾರಿಸಿದ್ದರು ,  ಎಲ್ಲೂ ಮಾಹಿತಿ ಸಿಗದೇ ಇದ್ದಾಗ ಕೊನೆಗೆ ಸಿಸಿ ಕ್ಯಾಮೆರದಲ್ಲಿ ನೋಡಿ ಪತ್ತೆ ಮಾಡಿದ್ದಾರೆ.   ದನ ಕಟ್ಟಲು ಹೋದಾಗ ಹಿಂಭಾಗದ ಬಾವಿಯ ಕಟ್ಟೆಯಲ್ಲಿ ಕುಳಿತಿದ್ದರು. ಅವರನ್ನು ವಿಚಾರಿಸಿದಾಗ ನಾನು ಜಾರಿ ಬಿದ್ದು ಗಾಯವಾಗಿದ್ದು ಬೇರೆ ಏನೂ ಆಗಿಲ್ಲ ಎಂದಿದ್ದಾರೆ.

ಮನೆಯ ಹಿಂಬಾಗದ ಗುಡ್ಡದಲ್ಲಿ ಹಾಲಿನ ಕ್ಯಾನ್, ಚೀಲದಲ್ಲಿ ಎರಡು ಮದ್ಯದ ಬಾಟಲ್, ಕತ್ತಿ ಪತ್ತೆಯಾಗಿದೆ.

 

LEAVE A REPLY

Please enter your comment!
Please enter your name here