ದಿಗ್ವಿಜಯ ನ್ಯೂಸ್ ಕ್ರೈಂ ಬ್ಯುರೋ ಹೆಡ್ ಸುನಿಲ್ ಧರ್ಮಸ್ಥಳ ಇವರಿಗೆ ಪ್ರತಿಷ್ಠಿತ ಪ್ರೆಸ್ ಕ್ಲಬ್ ಕೌನ್ಸಿಲ್ ಪ್ರಶಸ್ತಿ

0


ಬೆಂಗಳೂರು: ಕಳೆದ ಹದಿನಾರು ವರ್ಷಗಳಿಂದ ರಾಜ್ಯದ ವಿವಿಧ ನ್ಯೂಸ್ ಚಾನೆಲ್ ಗಳಲ್ಲಿ ಸೇವೆ ಸಲ್ಲಿಸಿರುವ ಧರ್ಮಸ್ಥಳದ ನಿವಾಸಿ, ಉಜಿರೆ ಎಸ್ ಡಿ ಎಂ ಕಾಲೇಜಿನ ಹಳೇ ವಿದ್ಯಾರ್ಥಿ, ಪ್ರಸ್ತುತ ದಿಗ್ವಿಜಯ ನ್ಯೂಸ್ ಕ್ರೈಂ ಬ್ಯುರೋ ಹೆಡ್ ಆಗಿರುವ ಸುನಿಲ್ ಧರ್ಮಸ್ಥಳರವರು ಪ್ರತಿಷ್ಠಿತ ಪ್ರೆಸ್ ಕ್ಲಬ್ ಕೌನ್ಸಿಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ 20 ಜನರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸೆ. 4ರಂದು  ಬೆಂಗಳೂರಿನ ಗಾಂಧಿಭವನದಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

ಸುನಿಲ್ ಧರ್ಮಸ್ಥಳರವರು 2007ರಲ್ಲಿ ಉಜಿರೆ ಕಾಲೇಜಿನಲ್ಲಿ ಪದವಿಯನ್ನು ಮುಗಿಸಿ ಕಸ್ತೂರಿ ವಾಹಿನಿಯಲ್ಲಿ ಕಾಪಿ ಎಡಿಟರ್ ಆಗಿ ಪತ್ರಕರ್ತನಾಗಿ ಹೆಜ್ಜೆಯಿಟ್ಟರು. ಇದಾದ ಬಳಿಕ ರಾಜ್ಯದ ಪ್ರತಿಷ್ಠಿತ ಟಿ ವಿ 9 ಸಂಸ್ಥೆಯಲ್ಲಿ ಕ್ರೈಂ ವರದಿಗಾರನಾಗಿ ಹಲವು ರಹಸ್ಯ ಕಾರ್ಯಾಚರಣೆಯನ್ನು ಮಾಡುವ ಮೂಲಕ ಬ್ರೇವ್ ರಿಪೋರ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. 2016ರಲ್ಲಿ ದಿಗ್ವಿಜಯ ನ್ಯೂಸ್ ಆರಂಭವಾದಾಗ ಕ್ರೈಂ ಬ್ಯುರೋ ಹೆಡ್ ಆಗಿ ಜವಾಬ್ದಾರಿವಹಿಸಿಕೊಂಡ ಸುನಿಲ್ ಧರ್ಮಸ್ಥಳ ಇಂದು ಯಶಸ್ವಿ ಪತ್ರಕರ್ತನಾಗಿ ಹೊರಹೊಮ್ಮಿದ್ದಾರೆ.

ದಿಗ್ವಿಜಯ ನ್ಯೂಸ್ ನಲ್ಲೂ ಕೂಡ ಹಲವು ರಹಸ್ಯ ಕಾರ್ಯಾಚರಣೆ ಮೂಲಕ ಗಮನ ಸೆಳೆದಿದ್ದಾರೆ. ಇದೀಗ ಈ ಪ್ರತಿಷ್ಠಿತ ಗೌರವಕ್ಕೆ ಪಾತ್ರವಾದ ಸುನಿಲ್ ಧರ್ಮಸ್ಥಳರವರಿಗೆ 2007ರ ಅವರ ತರಗತಿ ಮಿತ್ರರು ಕೂಡ ಶುಭಕೋರಿದ್ದಾರೆ.

LEAVE A REPLY

Please enter your comment!
Please enter your name here