ಬೆಳ್ತಂಗಡಿ ಜಂಯತುಲ್ ಫಲಾಹ್ ಘಟಕದ ವತಿಯಿಂದ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ

0


ಬೆಳ್ತಂಗಡಿ:  ಇಲ್ಲಿಯ ಜಮೀಯ್ಯತುಲ್ ಫಲಾಹ್ ಘಟಕದ ವತಿಯಿಂದ ಸೆ 3 ರಂದು ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಸಮಿತಿಯ ಅಧ್ಯಕ್ಷರಾದ ಬಹು ಅಬ್ದುಲ್ ಲತೀಫ್ ಹಾಜಿ ಯವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ರಹ್ಮಾನಿಯ ವೇದಿಕೆಯಲ್ಲಿ ಜರುಗಿತು.

ಜಮೀಯತುಲ್ ಫಲಾಹ್ ಜಿಲ್ಲಾ ಅಧ್ಯಕ್ಷರಾದ ಶಬಿ ಅಹ್ಮದ್ ಖಾಝಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಡ ವಿದ್ಯಾರ್ಥಿಗಳಿಗೆ ಅನಿವಾಸಿ ಭಾರತೀಯರ ಹಾಗೂ ಘಟಕದ ಸದಸ್ಯರ ಸಹಯೋಗದೊಂದಿಗೆ ವಿಧ್ಯಾಭ್ಯಾಸಕ್ಕಾಗಿ ಜಮೀಯತುಲ್ ಫಲಾಹ್ ಸಂಸ್ಥೆ ಜಿಲ್ಲೆಯಾದ್ಯಂತ ವಿಧ್ಯಾರ್ಥಿ ವೇತನ ನೀಡುತ್ತಿದ್ದೇವೆ.ಅದರಂತೆ ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರವನ್ನು ನೀಡುತ್ತಿದ್ದೇವೆ.ಅದರಂತೆ ನಮ್ಮ ಸಂಸ್ಥೆ ಅತೀ ಬಡ ರೋಗಿಗಳಿಗೆ ಪ್ರಯೋಜನವಾಗುವಂತೆ ಆಯ್ದ ಬೇರೆ ಬೇರೆ ಆಸ್ಪತ್ರೆಗಳಿಗೆ ಡಯಾಲಿಸಿಸ್ ಯಂತ್ರಗಳನ್ನು ನೀಡಿದ್ದೇವೆ ಎಂದರು.

ಅಧ್ಯಕ್ಷೀಯ ಬಾಷಣ ಮಾಡಿದ ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಲತೀಫ್ ಹಾಜಿ ಯವರು ವಿದ್ಯಾರ್ಥಿಗಳು ನಾವು ನೀಡಿದ ವಿದ್ಯಾರ್ಥಿವೇತನವನ್ನು ನಿಮ್ಮ ವಿದ್ಯಾ ಭ್ಯಾಸಕ್ಕೆ ಮಾತ್ರ ಸದುಪಯೋಗ ಪಡಿಸಬೇಕು ಎಂದರು.

ಮುಖ್ಯ ಅಥಿತಿ ಗಳಾಗಿ ಶಿಕ್ಷಣ ಇಲಾಖೆಯ ತಾಲೂಕು ಸಂಯೋಜಕರಾದ ಶುಭಾಶ್ ಜಾದವ್ ಮಾತನಾಡಿ ಮುಸ್ಲಿಂ ವಿಧ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಮುಂದುವರಿಯಲು ಜಮೀಯ್ಯತುಲ್ ಫಲಾಹ್ ಘಟಕ ಸಹಕಾರ ನೀಡುತ್ತಿದೆ ಎಂದರು.

ಪ್ರೌಢ ಶಾಲಾ ಸಹ ಶಿಕ್ಷಕರ ಅಧ್ಯಕ್ಷರಾದ ಮುಹಮ್ಮದ್ ರಿಯಾಝ್ ರವರು ಮಾತನಾಡಿ ಒಂದು ಕಾಲದಲ್ಲಿ ಮುಸ್ಲಿಂ ಸಮುದಾಯದ ವಿಧ್ಯಾರ್ಥಿ ಗಳು ವಿದ್ಯಾಭ್ಯಾಸದಲ್ಲಿ ಬಹಳಷ್ಟು ತಲಮಟ್ಟದಲ್ಲಿದ್ದರು ಆದರೆ ಜಮೀಯ್ಯತುಲ್ ಫಲಾಹ್ ಘಟಕದ ಸಹಕಾರದಿಂದ ಇದೀಗ ನಮ್ಮ ಮುಸ್ಲಿಂ ಸಮುದಾಯದ ವಿಧ್ಯಾರ್ಥಿಗಳು 82 ಶೇಕಡ ಅಂಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ಅಲ್ಪಸಂಖ್ಯಾತರ ಇಲಾಖೆಯ ತಾಲೂಕು ಅಧಿಕಾರಿ ಅಬ್ದುಲ್ ನಝೀರ್,  ಕೋಶಾಧಿಕಾರಿ ಕೆ ಎಸ್ ಅಬ್ದುಲ್ಲ, ಮಾಜಿ ಅಧ್ಯಕ್ಷರುಗಲಾದ ಮುಹಮ್ಮದ್ ಉಜಿರೆ, ಎಸ್ ಎಂ ಕೋಯ ತಂಙಳ್,   ಕಾಸಿಂ ಮಲ್ಲಿಗೆ ಮನೆ,  ಕಾರ್ಯದರ್ಶಿ ಅಬೂಬಕ್ಕರ್ ಕಾಶಿಪಟ್ನ ಉಪಸ್ತಿತರಿದ್ದು ಶುಭ ಹಾರೈಸಿದರು.

ಮಾಜಿ ಅಧ್ಯಕ್ಷರಾದ ಉಮ್ಮರ್ ಕುಂಞ ನಾಡ್ಜೆಯವರು ಕಾರ್ಯಕ್ರಮ ನಿರೂಪಿಸಿದರು. ಇನ್ನೋರ್ವ ಮಾಜಿ ಅಧ್ಯಕ್ಷ ಆಲಿಯಬ್ಬ ಪುಲಾಬೆ ಯವರು ಸ್ವಾಗತಿಸಿದರು.ಕಾರ್ಯದರ್ಶಿ ಅಬೂಬಕ್ಕರ್ ಕಾಶಿಪಟ್ನ ಧನ್ಯವಾದ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಅಧ್ಯಕ್ಷರಾಗಿ ಆಯ್ಕೆಯಾದ ಮುಹಮ್ಮದ್ ರಿಯಾಝ್ ರವರನ್ನು ಸನ್ಮಾನಿಸಲಾಯ್ತು.

 

 

LEAVE A REPLY

Please enter your comment!
Please enter your name here