ನಿಡ್ಲೆ ಸಮೀಪದ ಮನೆಗೆ ರಾತ್ರಿ ಬಂದ ಯುವಕ-ಅಪ್ರಾಪ್ತ ಸ್ನೇಹಿತೆಯೊಂದಿಗೆ ಲೈಂಗಿಕ ಸಂಪರ್ಕ-ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲು

0

ನಿಡ್ಲೆ:ನಿಡ್ಲೆ ಕುದ್ರಾಯ ಸಮೀಪ ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಬೈಕ್ ನಿಲ್ಲಿಸಲಾಗುತ್ತಿದ್ದ ವ್ಯಕ್ತಿ ಯಾರು ಎಂಬುದಾಗಿ ಬಹುದೊಡ್ಡ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಅಲ್ಲದೇ ಅಕ್ರಮ ಸಂಬಂಧ ಎಂಬ ಸುದ್ದಿ ಹಬ್ಬಿದ್ದು ಸ್ಥಳೀಯ ಕೆಲ ಕೆಂಪು ಬೈಕು ಹೊಂದಿದವರ ಮೇಲೆ ಮಾತುಗಳು ಕೇಳಿಬರುತ್ತಿತ್ತು
ಈ ಹಿನ್ನಲೆಯಲ್ಲಿ ನಿನ್ನೆ ತಡರಾತ್ರಿಯೂ ಬೈಕ್ ಇದ್ದದ್ದನ್ನು ಗಮನಿಸಿದ ಸ್ಥಳೀಯರು,ಆತ ಯಾರು ಎಂದು ತಿಳಿಯಲು ರಾತ್ರಿ ಕಾದು ಮುಂಜಾನೆ 5ರ ವೇಳೆಗೆ ಆತನನ್ನು ಹಿಡಿದಿದ್ದಾರೆ. ಧರ್ಮಸ್ಥಳ ಸಮೀಪದ ಅಶೋಕನಗರದ ನಿವಾಸಿಯಾಗಿರುವ ಯುವಕ ,ತನ್ನ ಸ್ನೇಹಿತೆ
ಅಪ್ರಾಪ್ತ ಬಾಲಕಿಯೋರ್ವಳೊಂದಿಗೆ ಸಂಬಂಧ ಇಟ್ಟುಕೊಂಡಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ಆತ ತಡರಾತ್ರಿ ಸ್ನೇಹಿತೆಯ ಮನೆಗೆ ಬಂದು ಮನೆಯವರಿಗೆ ತಿಳಿಯದಂತೆ ಆಕೆಯೊಂದಿಗೆ ಸಂಪರ್ಕ ಬೆಳೆಸಿದ್ದ, ಇದನ್ನು ಕಂಡು ಹಿಡಿದ ಸ್ಥಳೀಯರು ಆತನನ್ನು ಹಿಡಿದಿದ್ದರು.
ಬಾಲಕಿಯ ಕಡೆಯವರ ದೂರಿನ ಹಿನ್ನಲೆಯಲ್ಲಿ ಯುವಕನ ಮೇಲೆ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here