ಗಂಡೀಬಾಗಿಲು ಚರ್ಚಿನಲ್ಲಿ ಕೆ ಎಸ್ ಎಂ ಸಿ ಎ ಪದಾಧಿಕಾರಿಗಳ ಪದಗ್ರಹಣ

0

ನೆರಿಯ :ಬೆಳ್ತಂಗಡಿ ಧರ್ಮ ಗಂಡೀಬಾಗಿಲು ಚರ್ಚಿನಲ್ಲಿ ಕೆ ಎಸ್ ಎಂ ಸಿ ಎ ಪದಾಧಿಕಾರಿಗಳ ಪದಗ್ರಹಣ ಪ್ರಾಂತ್ಯದ ಶ್ರೀ ಸಾಮಾನ್ಯ ರ ಸಂಘಟನೆ ಕರ್ನಾಟಕ ಸಿರೋಮಲ ಬಾರ್ ಕ್ಯೆಥೋಲಿಕ್ ಅಶೋಸಿಯೇಶನ್ ಇದರ 2022 -23ನೇ ಸಾಲಿನ ಪದಾಧಿಕಾರಿಗಳು ಕಾಣಿಕೆಯನ್ನು ಸಮರ್ಪಿಸಿ ಪೂಜಾವಿಧಿಗಳನ್ನು  ನೆರವೇರಿಸಿ ತಮ್ಮ ಜವಾಬ್ದಾರಿ ಗಳನ್ನು ವಹಿಸಿ ಕೊಂಡರು.

ಬೆಳ್ತಂಗಡಿ  ಧರ್ಮಪ್ರಾಂತ್ಯದ ಜ್ಞಾನ ನಿಲಯ ನಿರ್ದೇಶಕರಾದ ವಂದನಿಯ ಟೊಮಿ ಮಟ್ಟಮ್ ಪ್ರತಿಜ್ಞಾ ವಿಧಿ ಬೋದಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು.

ನಾಡು, ಧರ್ಮ ನುಡಿ ಸಂಸ್ಕೃತಿ ಮತ್ತು ವ್ಯಕ್ತಿ ಇದರ ವಿಕಾಸಕ್ಕೆ ಸಂಘಟಿತರಾದಾಗ ಸಮಾಜದ ಧನಾತ್ಮಕ ಪ್ರಗತಿ ಗೆ ಸಂಘಟನೆಗಳು ಕಾರಣವಾಗುತ್ತದೆ. ಸಮಾಜದ ಸರ್ವತೋಮುಖ ಅಭಿವೃದ್ಧಿ ಗೆ ಶ್ರಮಿಸಬೇಕೆಂದು ಕರೆನೀಡಿದರು.

ಈ ಸಂದರ್ಭದಲ್ಲಿ ನಿಕಟ ಪೂರ್ವ ಪದಾಧಿಕಾರಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬೇಬಿ ವಿ ಟಿ ವಹಿಸಿ  ಸೇಬಾಸ್ಟಿನ್ ಎಂ ಜೆ , ಸೇಬಾಸ್ಟಿನ್ ವಿ ಟಿ,  ಮನೋಜ್ ಎಂ ಡಿ,  ಸುಜನ್ ಎ ಜೆ, ವಕೀಲರಾದ ಪ್ರಜ್ವಲ್ ಸುಜಿ ಡೊಲ್ಫಿ, ಬೀನಾ ಅಲೆಕ್ಸ್ ಟ್ರಸ್ತಿಗಳಾದ  ಆಗಸ್ಟಿನ್, ಮಾತ್ಯು ಬೇಬಿ ಸಿ ಎ ಉಪಸ್ಥಿತರಿದ್ದರು. ಧರ್ಮ ಪ್ರಾಂತ್ಯ ನಿರ್ದೇಶಕರಾದ ವಂದನಿಯ ಶಾಜಿ ಮಾತ್ಯು ಎಲ್ಲರನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here