ಉಜಿರೆಯಲ್ಲಿ ರೋಟರಿ ಸಮುದಾಯದಳಗಳ ಜಿಲ್ಲಾ ಅಧಿವೇಶನ 

0

ಉಜಿರೆ:ರೋಟರಿ ಕ್ಲಬ್ ಬೆಳ್ತಂಗಡಿಯ ಆಶ್ರಯದಲ್ಲಿ ರೋಟರಿ  ಜಿಲ್ಲೆ 3181ರ ರೋಟರಿ ಸಮುದಾಯ ದಳಗಳ ಜಿಲ್ಲಾ ಅಧಿವೇಶನ ಸಮುದಾಯ ಕಲ್ಪನೆ ಕಾರ್ಯಕ್ರಮ ಉಜಿರೆ ಕಾಶಿಬೆಟ್ಟುವಿನ  ಅರಳಿಯಲ್ಲಿರುವ ರೋಟರಿ ಸೇವಾ ಭವನದಲ್ಲಿ ಸೆ.4 ರಂದು ಜರಗಿತು.

ರೋಟರಿ ಜಿಲ್ಲೆಯ ಗವರ್ನರ್ ಮೇಜರ್ ಡೋನರ್ ಪ್ರಕಾಶ ಕಾರಂತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷೆ  ಮನೋರಮಾ ಭಟ್ , ಆರ್.ಸಿ.ಸಿ ಯ ಜಿಲ್ಲಾ ಅಧ್ಯಕ್ಷ ಸದಾಶಿವ ಶೆಟ್ಟಿ, ಅಸಿಸ್ಟೆಂಟ್ ಗವರ್ನರ್ ಮೆ.ಜ.(ನಿವೃತ್ತ)ಎಂ.ವಿ.ಭಟ್,  ಝೋನಲ್ ಲೆಫ್ಟಿನೆಂಟ್ ಶರತ್ ಕೃಷ್ಣ ಪಡುವೆಟ್ನಾಯ, ಆರ್.ಸಿ.ಸಿ ಚೇರ್ ಮಾನ್ ವೆಂಕಟೇಶ್ವರ ಭಟ್, ಕಾರ್ಯದರ್ಶಿ ರಕ್ಷಾ ರಾಘ್ನೀಶ್ ಹಾಗೂ ಅಧಿವೇಶನದ ವ್ಯವಸ್ಥಾಪಕರಾದ ವಿದ್ಯಾಕುಮಾರ ಕಾಂಚೋಡು ಮತ್ತಿತರರು ಉಪಸ್ಥಿತರಿದ್ದರು.

ಕು.ಇಂಚರಾ ಕಾರಂತ್ ಅವರ ಪ್ರಾರ್ಥಿಸಿದರು. ಎಂ.ವಿ ಭಟ್ ಸ್ವಾಗತಿಸಿದರು.ಸದಾಶಿವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಂತರ ಭಾಗವಹಿಸಿದ  ಆರ್.ಸಿ.ಸಿ ಸದಸ್ಯರಿಗೆ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಧನಂಜಯ ರಾವ್, ಜಿಲ್ಲಾ ತರಬೇತುದಾರ ಶೇಖರ ಶೆಟ್ಟಿ ಭಾಗವಹಿಸಿದ್ದರು. ಐ.ಸಿ.ರಾವ್ ಅವರು ಪೇರಳೆ ಹಣ್ಣಿನ ಕೃಷಿಯ ಬಗ್ಗೆ ವಿಶೇಷ ಮಾಹಿತಿ ನೀಡಿದರು.

ನಂತರ ನಡೆದ ಸಮಾರೋಪ ಸಮಾರಂಭ ದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಭಾಗವಹಿಸಿದ್ದರು. ಸಮುದಾಯ ದಳ ಗಳಿಗೆ ಪ್ರಮಾಣ ಪತ್ರ ನೀಡಲಾಯಿತು.ಈ ಕಾರ್ಯಕ್ರಮದಲ್ಲಿ ಪಿ.ಡಿ.ಜಿ ರಂಗನಾಥ ಭಟ್, ಜಿಲ್ಲಾ ಕಾರ್ಯದರ್ಶಿ ನಾರಾಯಣ ಹೆಗ್ಡೆ ಸೇರಿದಂತೆ ರೋಟರಿ ಜಿಲ್ಲಾ ಪಧಾಧಿಕಾರಿಗಳು, ರೋಟರಿ ಸದಸ್ಯರುಗಳು ಭಾಗವಹಿಸಿದ್ದರು. ಈ ಅಧಿವೇಶನದಲ್ಲಿ ರೋಟರಿ ಜಿಲ್ಲೆಯ ವಿವಿಧ ಸಮದಾಯ ದಳಗಳ ನೂರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here