ಬೆಳ್ತಂಗಡಿ: ಚಂದ್ರಹಾಸ ಬಳಂಜರವರಿಗೆ ಶ್ರೀ ಗುರುದೇವ ಪ್ರತಿಭಾ ಪುರಸ್ಕಾರ

0

ಬೆಳ್ತಂಗಡಿ: ಬೆಳ್ತಂಗಡಿ ನಾರಾಯಣಗುರು ಸಭಾ ಭವನದಲ್ಲಿ ಸೆ.4ರಂದು ನಡೆದ ಶ್ರೀ‌ ಗುರುದೇವ ವಿವಿಧೋದ್ದೆಶ ಸಹಕಾರ ಸಂಘದ ಬೆಳ್ತಂಗಡಿಯ ವಾರ್ಷಿಕ ಮಹಾಸಭೆಯಲ್ಲಿ ಸಾಧಕರನ್ನ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಹುಮುಖ ಪ್ರತಿಭೆಯಾಗಿ ಅಪಾರ ಸಾಧನೆಗೈದ ಚಂದ್ರಹಾಸ ಬಳಂಜರಿಗೆ ಶ್ರೀ ಗುರುದೇವ ಗೌರವ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ವಸಂತ ಬಂಗೇರ, ಗುರದೇವ ಬ್ಯಾಂಕ್ ಅಧ್ಯಕ್ಷರಾದ ಪದ್ಮನಾಭ ಮಾಣಿಂಜ, ಮತ್ತು ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು. ಚಂದ್ರಹಾಸ ಬಳಂಜ ಒಬ್ಬ ನಿರೂಪಣೆಕಾರ, ಸಾಹಿತಿ, ನಟ, ನೃತ್ಯ ಪಟು, ತರಬೇತುದಾರ, ಹಾಡುಗಾರನಾಗಿ ಗುರುತಿಸಿಕ್ಕೊಂಡಿದ್ದು ಜಿಲ್ಲಾ,ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು  ಪಡೆದುಕ್ಕೊಂಡಿದ್ದಾರೆ.

ಇವರು ನಾಲ್ಕೂರು ಗ್ರಾಮದ ಪ್ರಗತಿಪರ ಕೃಷಿಕರಾದ ಶ್ರೀಧರ ಪೂಜಾರಿ ಮತ್ತು ಸುಶೀಲ ದಂಪತಿ ಪುತ್ರ.

LEAVE A REPLY

Please enter your comment!
Please enter your name here