ಬೆಳಾಲು ಶ್ರೀ ಧ. ಮ. ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

0

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ಇಂಟರ್ಯಾಕ್ಟ್ ಕ್ಲಬ್ ಬೆಳಾಲು ಪ್ರೌಢಶಾಲೆ ವತಿಯಿಂದ ಶಿಕ್ಷಕರ ದಿನಾಚರಣೆ ಸೆ.5ರಂದು ಜರಗಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ರೋಟೇರಿಯನ್ ಮನೋರಮ ಭಟ್ ರವರು ಮಾತನಾಡುತ್ತಾ , ಶಾಲೆಯೆಂದರೆ ಕೇವಲ ಕಟ್ಟಡವಲ್ಲ. ಶಿಕ್ಷಕರು ಅದರ ಆತ್ಮ. ವಿದ್ಯಾರ್ಥಿಗಳು ಕೇವಲ ಹೇಳಿದ್ದನ್ನು ಕೇಳುವವರಾಗದೆ ಪ್ರಶ್ನಿಸುವ ಕುತೂಹಲ ಮತ್ತು ಮನಸ್ಸನ್ನು ಬೆಳೆಸಿಕೊಳ್ಳಬೇಕು. ಶಾಲೆಗಳು ವಿದ್ಯಾರ್ಥಿಗಳನ್ನು, ಸಮಾಜದಲ್ಲಿನ ಕೆಡುಕಿನ ನಡುವೆ ಒಳ್ಳೆಯವರಾಗಿ, ಧೈರ್ಯದಿಂದ ಬದುಕುವಂತೆ ವ್ಯಕ್ತಿತ್ವವನ್ನು ರೂಪಿಸುವ ಕೇಂದ್ರಗಳಾಗಿ ಬದಲಾಗಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಕಾರ್ಯದರ್ಶಿಗಳಾದ ರೊಟೇರಿಯನ್ ರಕ್ಷಾ ರಾಫ್ನೀಶ್ , ರೋಟರಿ ಆನ್ ಕ್ಲಬ್ ನ ಚಯರ್ಮನ್ ರೇಶ್ಮಾ ಅಬೂಬಕರ್ ಭಾಗವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ರವರು ವಹಿಸಿದ್ದರು.

ಕಾರ್ಯಕ್ರಮದ ಬಗ್ಗೆ ವಿದ್ಯಾರ್ಥಿಗಳಾದ ಶ್ರಾವ್ಯ ಪಿ ಮತ್ತು ರಕ್ಷಿತ್ ರವರು ಅನಿಸಿಕೆ ವ್ಯಕ್ತಪಡಿಸಿದರು.
ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ ವಿವಿಧ ಮನೋರಂಜನಾ ಆಟಗಳನ್ನು ವಿದ್ಯಾರ್ಥಿಗಳು ಸಂಘಟಿಸಿದ್ದರು.

ಸಭೆಯ ಆರಂಭದಲ್ಲಿ ವಿದ್ಯಾರ್ಥಿಗಳು ಮತ್ತು ರೋಟರಿ ಕ್ಲಬ್ ವತಿಯಿಂದ ಎಲ್ಲಾ ಶಿಕ್ಷಕರಿಗೆ ಗೌರವ ಸಮರ್ಪಣೆ ನಡೆಯಿತು. ಶಾಲೆಯ ಇಂಟರ್ಯಾಕ್ಟ್ ಕ್ಲಬ್ ಚಯರ್ಮನ್ ಅಮೂಲ್ಯ ರವರು ಸ್ವಾಗತಿಸಿ, ಸಮೀಕ್ಷಾ ವಂದಿಸಿದರು. ಮುಫೀದಾ ಮತ್ತು ರಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here