ಇಂದಬೆಟ್ಟು ಗ್ರಾಮ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮ

0

 

ಇಂದಬೆಟ್ಟು: 16 ಲಕ್ಷ ವೆಚ್ಚದಲ್ಲಿ ನೂತನ ಬಂಗಾಡಿ ಅಂಗನವಾಡಿ ಕೇಂದ್ರ ಉದ್ಘಾಟನೆ, 20 ಲಕ್ಷ ವೆಚ್ಚದಲ್ಲಿ ಪೆರಲ್ದಪಲ್ಕೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಿಲಾನ್ಯಾಸ, ಜಲ ಜೀವನ್ ಯೋಜನೆಯಡಿಯಲ್ಲಿ ಅಂದಾಜು 2.47 ಕೋಟಿ ವೆಚ್ಚದಲ್ಲಿ 7 ಓವರ್ ಹೆಡ್ ಟ್ಯಾಂಕ್, 8 ಕೊಳವೆ ಬಾವಿ, ವಿದ್ಯುತ್ ಸಂಪರ್ಕ, ಪೈಪ್ ಲೈನ್ ವಿಸ್ತರಣೆ, ಈ ಎಲ್ಲಾ ಕಾಮಗಾರಿಗಳಿಗೆ ಮಾನ್ಯ ಶಾಸಕರಾದ ಶ್ರೀ ಹರೀಶ್ ಪೂಂಜರವರು ಶಿಲಾನ್ಯಾಸ ನೆರವೇರಿಸಿದರು.

ಜಲ ಜೀವನ್ ಯೋಜನೆಯಲ್ಲಿ ಅತಿ ಹೆಚ್ಚು ಅನುದಾನ ಮಂಜೂರುಗೊಳ್ಳುವಲ್ಲಿ ಕೆಲಸ ಮಾಡಿದ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರನ್ನು ಮಾನ್ಯ ಶಾಸಕರು ಈ ಸಂದರ್ಭದಲ್ಲಿ ಅಭಿನಂದಿಸಿದರು.

 

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಅನಂದ ಅಡಿಲು, ಉಪಾಧ್ಯಕ್ಷರಾದ ಶ್ರೀಮತಿ ಆಶಾಲತಾ, ಪಂಚಾಯತ್ ಸದಸ್ಯರಾದ ಶ್ರೀಕಾಂತ್ ಎಸ್ ಇಂದಬೆಟ್ಟು, ಸತೀಶ್ ಗೌಡ ಚೌಕದಕಟ್ಟೆ, ಪ್ರಮೋದ್ ಬೆದ್ರಬೆಟ್ಟು, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಜಯಂತಿ, ಶ್ರೀಮತಿ ಸುಮಿತ್ರಾ, ಶ್ರೀಮತಿ ಪ್ರೇಮಾ ಕುತ್ರಬೆಟ್ಟು, ಬಂಗಾಡಿ ಸಿ ಎ ಬ್ಯಾಂಕ್ ಉಪಾಧ್ಯಕ್ಷರಾದ ವಸಂತ ಗೌಡ ಕಲ್ಲಾಜೆ, ನಿರ್ದೇಶಕರಾದ ರಮೇಶ್ ಕೆಂಗಾಜೆ, ಶ್ರೀಮತಿ ಭವ್ಯ ಚಂದ್ರಶೇಖರ್, ಬೆಳ್ತಂಗಡಿ ಪಿ.ಎಲ್.ಡಿ. ಬ್ಯಾಂಕ್ ಉಪಾಧ್ಯಕ್ಷರಾದ ಸಂತೋಷ್ ಗೌಡ ಕೊಯಮಜಲು,ಸಿ.ಎ. ಬ್ಯಾಂಕ್ ನಿರ್ದೇಶಕರಾದ ಪುಷ್ಪಲತಾ,  ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here