ಕಾಯರ್ತಡ್ಕ: ಉಚಿತ ಆರೋಗ್ಯ ತಪಾಸನ ಶಿಬಿರ

0

ವಿಶ್ವಹಿಂದೂ ಪರಿಷತ್ ಬಜರಂಗದಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾಗೂ ಭಾರತೀಯ ಮಾಜ್ದೂರ್ ಸಂಘ ಕಳೆoಜ ಇದರ ಸಹಯೋಗದಲ್ಲಿ ಬೀಡಿ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರಿಗೆ ಸಾರ್ವಜನಿಕರಿಗೆ ಮಾಹಿತಿ ಕಾರ್ಯಾಗಾರ ನಡೆಯಿತು.

ಹಾಗೆಯೇ ಅರೋಗ್ಯ ಇಲಾಖೆ ವತಿಯಿಂದ ಉಚಿತ ಅರೋಗ್ಯ ತಪಾಸನ ಶಿಬಿರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಯರ್ತಡ್ಕ ದಲ್ಲಿ ನಡೆಯಿತು.ಮೊದಲಿಗೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಳೆoಜ ಗ್ರಾಮ ಪಂಚಾಯತ್ ಅಧ್ಯಕ್ಷರು, ಬಿ.ಎಂ.ಸ್ ತಾಲೋಕು ಅಧ್ಯಕ್ಷರು, ಬೀಡಿ ಕಾರ್ಮಿಕರ ಜಿಲ್ಲಾ ತಾಲೂಕು ಪ್ರಮುಖರು, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷರು, ಗ್ರಾಮಾಬಿವೃದ್ದಿ ಮೇಲ್ವಿಚಾರಕರು, ಗ್ರಾಮ ಪಂಚಾಯತ್ ಸದಸ್ಯರು, ಬಿ. ಎಂ. ಸ್ ಗ್ರಾಮ ಸಮಿತಿ ಕಾರ್ಯಕರ್ತರು, ಬೀಡಿ ಕಾರ್ಮಿಕರು, ಸಾರ್ವಜನಿಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here